thaale

 

 

ಮಲೆನಾಡಿನ ರೈತಾಪಿ ವರ್ಗ ಲಾಭದಾಯಕ ಉಪಬೆಳೆ ತಾಳೆ ಕೃಷಿಯತ್ತ ಚಿತ್ತ ನೆಟ್ಟಿದ್ದಾರೆ ಎಂದು ಪತಂಜಲಿ ಫುಡ್ಸ್ ಲಿ ನ ಕ್ಷೇತ್ರಾಧಿಕಾರಿ ಹನುಮೇಗೌಡರು ತಿಳಿಸಿದರು.

ಮೂಡಿಗೆರೆ ತಾಲ್ಲೂಕಿನ ಹ್ಯಾರಗುಡ್ಡೆಯ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿ ಹೆಚ್.ಎಂ.ಶಿವಪ್ರಕಾಶ್, ಜಗದೀಶ್ ಅಸೋಷಿ ಯಟ್ಸ್ ಗಿರಿಜಾ ಕಾಫಿ ಟ್ರಸ್ಟ್ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಜಿ.ಪಂ., ಮೂಡಿಗೆರೆ ತಾಲೂಕು ತಾಳೆಬೆಳೆ ಅಭಿವೃದ್ಧಿ ಯೋಜನೆ ಪತಾಂಜಲಿ ಫುಡ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಶನಿವಾರ ಮೆಗಾ ತಾಳೆ ಕೃಷಿ ಅಭಿಯಾನಕ್ಕೆ ಚಾಲನೇ ನೀಡಿ ಮಾತನಾಡಿದರು .

ತಾಳೆ ಕೃಷಿಗೆ ನಾಲ್ಕು ವರ್ಷ ತುಂಬುತ್ತಲೇ ಇಳುವರಿ ಬರಲು ಪ್ರಾರಂಭವಾಗುತ್ತದೆ ದೇಶದಲ್ಲಿ ವರ್ಷಕ್ಕೆ 360 ದಶಲಕ್ಷ ಎಣ್ಣೆ ಬೇಕಾಗಿದೆ ಆದರೆ ಶೇ 40 ಅಡುಗೆ ಎಣ್ಣೆಗಳು ಫಾಮ್ ಸೇರಿದಂತೆ ಒಂದುವರೇ ಲಕ್ಷಕೋಟಿ ಎಣ್ಣೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು.

ತಾಳೆ ಸರಳ ಬೇಸಾಯವಾಗಿದೆ. ಐದು ಎಕ್ರೆ ತಾಳೆ ತೋಟವನ್ನು ಒಬ್ಬರೇ ನೋಡಿಕೊಳ್ಳಬಹುದು, ತಾಳೆ ಬೇಸಾಯದಿಂದ ಕಾರ್ಮಿಕ ರ ಸಮಸ್ಯೆಯನ್ನು ನಿವಾರಿಸಬಹುದು, ದಲ್ಲಾಳಿಗಳ ಅವಶ್ಯಕತೆ ಇಲ್ಲಾ ಕಳ್ಳ ಕಾಕರರ ಭಯವಿಲ್ಲಾ, ಯಾವುದೇ ರೋಗ ರುಜಿನಗಳ ಭಯವಿಲ್ಲಾ. ತಾಳೆ ಬೆಳೆಯ ಸಂಪೂರ್ಣ ಜವಬ್ದಾರಿ ನಮ್ಮದಾಗಿದೆ ಎಂದರು.

ದರ ನಿಗದಿ ಪಡಿಸುವುದು ರೈತರು ಅಧಿಕಾರಿಗಳು ಪ್ರತಿ ತಿಂಗಳು 10 ನೇ ತಾರಿಕಿನಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿವರ್ಷ ನೀಡುತ್ತದೆ. ವರ್ಷಪೂರ್ತಿ ಇಳುವರಿ ಸಿಗುವ ಬಹು ಬೇಡಿಕೆಯ ತಾಳೆ(ಪಾಮ್) ಕೃಷಿಯನ್ನು ಈಗ ಮೂಡಿಗೆರೆ ತಾಲೂಕಿನ ರೈತ ಅಡಕೆಗೆ ಪರ್ಯಾಯವಾಗಿ ಬೆಳೆಸಲು ಮುನ್ನಡೆಯಿಡುತ್ತಿದ್ದಾರೆ.

ಮಲೆನಾಡು ಭಾಗದಲ್ಲಿ ಅಡಕೆ ತೋಟಗಳು ಹಳದಿ ರೋಗಕ್ಕೆ ತುತ್ತಾಗಿ ನಾಶವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸುಲಭ ಖರ್ಚಿನಲ್ಲಿ, ಗುಡ್ಡಗಾಡು ಪ್ರದೇಶದಲ್ಲಿ ಅನಾಯಾಸವಾಗಿ ಬೆಳೆದು ಲಾಭ ಗಳಿಸಬಹುದಾದ ತಾಳೆ ಕೃಷಿ ವರದಾನವಾಗಿ ಪರಿಣಮಿಸಲಿದೆ.

ಒಂದು ಎಕರೆಗೆ 60 ಗಿಡ ನಾಟಿ ಮಾಡಬಹುದು, ಪ್ರತಿ ಗಿಡಕ್ಕೆ 30 ಅಡಿ ಅಂತರ ಇಟ್ಟು ಸಾಮಾನ್ಯ ಗುಂಡಿ ತೆಗೆದು ನಾಟಿ ಮಾಡಬೇಕು. ಹೀಗೆ ನಾಟಿ ಮಾಡಿದ ಗಿಡಕ್ಕೆ ನೀರು ಹಾಯಿಸಬೇಕು. ಮಳೆಗಾಲದಲ್ಲಿ ನಾಟಿ ಮಾಡಿದರೆ ನೀರಿನ ಅವಶ್ಯಕತೆಯಿಲ್ಲ. ಗುಡ್ಡ ಜಾಗದಲ್ಲಿ ನಾಟಿ ಮಾಡಿರುವುದಕ್ಕೆ ಬೇಸಿಗೆಯಲ್ಲಿ ನೀರು ಹಾಕಿದರೆ ಉತ್ತಮ. 3 ತಿಂಗಳಿಗೊಮ್ಮೆ ಪ್ರತಿ ಗಿಡಕ್ಕೆ 2 ಕಿಲೋ ರಾಸಾಯನಿಕ ಗೊಬ್ಬರ ಹಾಕಬೇಕು. ಈ ಗೊಬ್ಬರ 4 ವರ್ಷದ ತನಕ ಸಂಸ್ಥೆಯೇ ಉಚಿತವಾಗಿ ನೀಡುತ್ತದೆ. ಗಿಡ ಚೆನ್ನಾಗಿ ಆರೈಕೆ ಮಾಡಿದರೆ ನಾಲ್ಕೇ ವರ್ಷಕ್ಕೆ ಫಸಲು ಬಂದೇ ಬಿಡುತ್ತದೆ. ತಾಳೆ ಮರದ ಪ್ರತಿ ಗರಿಯಲ್ಲಿ ಹೂಬಿಟ್ಟು ಗೊನೆಯಾಗಿ ಕಾಯಿ ಕಟ್ಟಿ ಹಣ್ಣಾಗುವ ಹೊತ್ತಿಗೆ ಒಂದು ತಿಂಗಳಾದರೂ ಬೇಕು. ಒಂದು ಗೊನೆ ಹೆಚ್ಚೆಂದರೆ 30 ಕೆಜಿ ತನಕ ತೂಗುತ್ತದೆ. ಗೊನೆ ಜಾಸ್ತಿ ಹಣ್ಣಾಗಿ ಕೆಳಗೆ ಬೀಳುವ ಮುಂಚೆ ಜಾಗೃತೆಯಿಂದ ಕಟಾವು ಮಾಡಬೇಕು. ಹೀಗೆ ಕಟಾವು ಮಾಡಿದ ಹಣ್ಣು ಗೊನೆಗಳ ಮೂಟೆಯನ್ನು ಕಂಪನಿಯ ವಾಹನ ಸ್ಥಳಕ್ಕೆ ಬಂದು ಕೊಂಡೊಯ್ಯುತ್ತದೆ. ತಿಂಗಳಿಗೆ ಕನಿಷ್ಠ 3 ಬಾರಿ ಗೊನೆ ಕಟಾವಿಗೆ ಬರುತ್ತದೆ. ಗೊನೆ ಬಿಡಲು ಪ್ರಾರಂಭವಾದ ಆರಂಭಿಕ ವರ್ಷದಲ್ಲಿ ತಿಂಗಳಲ್ಲಿ ಒಂದು ಎಕರೆಯಲ್ಲಿ 7ರಿಂದ 8 ಕ್ವಿಂಟಾಲ್ ಇಳುವರಿ ಬಂದರೆ ವರ್ಷ ಕಳೆದಂತೆ ಮರದ ಬೆಳವಣಿಗೆಯಾಗುತ್ತಲೆ ಇಳುವರಿ ಜಾಸ್ತಿಯಾಗುತ್ತದೆ. ತಿಂಗಳಿಗೆ 20ರಿಂದ 25 ಕ್ವಿಂಟಾಲ್ ಇಳುವರಿ ಬರುತ್ತದೆ ಎಂದರು. ಒಂದು ಎಕರೆಯಲ್ಲಿ ತಾಳೆ ಕೃಷಿ ಮಾಡಿದರೆ ತಿಂಗಳಿಗೆ ಕನಿಷ್ಠ 20ರಿಂದ 25 ಸಾವಿರ ಆದಾಯ ಬರುತ್ತದೆ. 15 ಸಾವಿರ ಅಂತೂ ಗ್ಯಾರಂಟಿ.

ಈ ಸಂದರ್ಭದಲ್ಲಿ ರೈತರುಗಳಾದ ಜಯಕುಮಾರ್,ರೇಣುಕುಮಾರ್, ಸಿದ್ದೇಗೌಡ,  ಕೇಶವಮೂರ್ತಿ, ಸತೀಶ್, ದೊಡ್ಡನಗೌಡರು,ಸಂಘರ್ಸ, ದೇವರಾಜು, ಸುಚನ್, ಅರುಣ್ ಗುತ್ತಿ, ಪ್ರಭಾಕರ್ ಹೆಚ್.ಎಂ. ಅರುಣ, ಪ್ರವೀಣ್, ರಾಜು, ಪ್ರಕಾಶ್, ಅಭಿಷೇಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ