ಅಕ್ಟೋಬರ್ 13ರಿಂದ 17ರವರೆಗೆ ಮಧ್ಯ ಅಮೆರಿಕದ ಹೊಂಡುರಾಸ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕಾಫಿ ಸಂಸ್ಥೆ (ಐಸಿಒ)ಯ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಗೋಯರ್ಸ್ ಫೆಡರೇಷನ್ ಪ್ರತಿನಿಧಿಯಾಗಿ ಮಾಜಿ ಅಧ್ಯಕ್ಷರಾದ ಡಾ. ಹೆಚ್.ಟಿ ಮೋಹನ್ ಕುಮಾರ್‌ರವರು ಭಾಗವಹಿಸಲಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ಮತ್ತು ಕಾರ್ಯದರ್ಶಿ ಸುರೇಂದ್ರ ; ಭಾರತದಿಂದ ಐಸಿಒ ಪ್ರತಿನಿಧಿಯಾಗಿ ಅಮೇರಿಕ ಸಂಯುಕ್ತ ಸಂಸ್ಥಾನದ ಮಾರ್ಗವಾಗಿ ಇದೇ ತಿಂಗಳು ತಾರೀಖು ಸೆಪ್ಟೆಂಬರ್ 26 ರಂದು ಪ್ರಯಾಣ ಬೆಳೆಸಿ ಹೋಂಡುರಾಸ್ ದೇಶದಲ್ಲಿ 7ನೇ ಸಿಇಒ ಹಾಗೂ ಜಾಗತಿಕ ನಾಯಕರ ಸಭೆಯಲ್ಲಿ ಡಾ.ಮೋಹನ್‌ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಭೆಯಲ್ಲಿ ಕಾಫಿ ಉತ್ಪಾದಿಸುವ ರಾಷ್ಟ್ರಗಳ ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿಗೆ ಆನುಗುಣವಾಗಿ ಬದಲಾಗುತ್ತಿರುವ ವಿದ್ಯಮಾನಗಳ ಕುರಿತು ಕಾಫಿಯ ಭವಿಷ್ಯದ ಮಾರುಕಟ್ಟೆ ಸಂಬಂಧವಾಗಿ ಚರ್ಚೆಗಳು ನಡೆಯಲಿವೆ.
ಡಾ. ಹೆಚ್.ಟಿ. ಮೋಹನ್ ಕುಮಾರ್ ಅವರು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷರಾಗಿದ್ದು, ಕಾಫಿ ಬೆಳೆ ಮತ್ತು ಸಂಘಟನೆ ಬಗ್ಗೆ ಅಪಾರ ಅನುಭವ ಮತ್ತು ಜ್ಞಾನ ಹೊಂದಿದ್ದಾರೆ. ಅವರು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬೆಳೆಗಾರರ ಪರವಾಗಿ ಸಭೆಯಲ್ಲಿ ಪ್ರತಿನಿಧಿಸಲಿದ್ದಾರೆ.


