FB_IMG_1763765528256

 

 

ಚಿಕ್ಕಮಗಳೂರು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ರಾಸಾಯನಿಕ ಸಿಂಪಡಣೆ ಮಾಡಿ ಜೇನುಹುಳುಗಳ ಸಾಮೂಹಿಕ ಮಾರಣಹೋಮ ನಡೆಸಿರುವುದರ ಕುರಿತು ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ

ಇತ್ತೀಚೆಗೆ ಚಿಕ್ಕಮಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ರಾಸಾಯನಿಕ ಸಿಂಪಡಣೆ ಮಾಡಿ ಅವೈಜ್ಞಾನಿಕವಾಗಿ ಹಲವಾರು ಜೇನು ಗೂಡುಗಳ ನಾಶ ಮಾಡಿ ಲಕ್ಷಾಂತರ ಸಂಖ್ಯೆಯ ಜೇನು ಹುಳುಗಳ ಮಾರಣ ಹೋಮವನ್ನು ಇಲ್ಲಿನ ಆಡಳಿತ ವ್ಯವಸ್ಥೆಯೇ ಮುಂದೆ ನಿಂತು ನಡೆಸಿದೆ ಎಂದು ಎಂದು ಪರಿಸರವಾದಿ ನಾಗರಾಜ್ ಕೂವೆ ದೂರು ದಾಖಲಿಸಿದ್ದಾರೆ.

ಪರಿಸರ ಸ್ನೇಹಿಯಾಗಿರಬೇಕಿದ್ದ ಮೆಡಿಕಲ್ ಕಾಲೇಜು ಅನಗತ್ಯವಾಗಿ ಜೇನು ಹುಳುಗಳನ್ನು ಸಮಸ್ಯೆಯೆಂಬಂತೆ ಬಿಂಬಿಸಿದೆ. ವಾಸ್ತವದಲ್ಲಿ ಇಲ್ಲಿಯವರೆಗೆ ಮೆಡಿಕಲ್ ಕಾಲೇಜಿನ ಯಾವುದೇ ವಿದ್ಯಾರ್ಥಿಗಳಿಗೆ ಜೇನು ಹುಳುಗಳು ಕಡಿದಿದ್ದಾಗಲಿ, ತೊಂದರೆ ಮಾಡಿದ್ದಾಗಲಿ ಇಲ್ಲ. ವಿದ್ಯಾರ್ಥಿಗಳೂ ಕೂಡಾ ಅವುಗಳ ತಂಟೆಗೆ ಹೋಗಿಲ್ಲ ಎಂದಿದ್ದಾರೆ.

ವಿದ್ಯಾರ್ಥಿಗಳಲ್ಲಿ ಸ್ವಲ್ಪ ಭಯ ಆತಂಕಗಳಿದ್ದರೂ ಹೆಚ್ಚಿನವರು ಜೀನಿನ ಸಂರಕ್ಷಣೆಯ ಪರವಾಗಿಯೇ ಇದ್ದಾರೆ. ಆ ಮಟ್ಟಿಗಿನ ಸಂವೇದನೆ ಯುವ ತಲೆಮಾರಿನಲ್ಲಿದೆ. ಆದರೂ ಆಡಳಿತ ಮಂಡಳಿ ಕೆಲವೇ ಕೆಲವು ಶ್ರೀಮಂತ ವಿದ್ಯಾರ್ಥಿಗಳ ಪೋಷಕರ ಮಾತನ್ನು ಕೇಳಿಕೊಂಡು, ರಾಜಕೀಯ ಒತ್ತಡಕ್ಕೆ ಮಣಿದು, ಲಕ್ಷಾಂತರ ನಿರುಪದ್ರವಿ ಜೇನು ನೋಣಗಳನ್ನು ರಾಸಾಯನಿಕ ಸಿಂಪಡಿಸಿ ಕೊಂದಿದೆ. ಆ ಮೂಲಕ ಪರಿಸರ ನಿಯಮಗಳನ್ನು ಮತ್ತು ಕಾನೂನುಗಳನ್ನು ಅಣಕಿಸಿದೆ ಎಂದು ಟೀಕಿಸಿದ್ದಾರೆ.

ಇತ್ತೀಚೆಗೆ ಚಿಕ್ಕಮಗಳೂರಿನ ಮೌಂಟೇನ್ ವ್ಯೂ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಜೇನು ಗೂಡಿಗೆ ಕಲ್ಲು ಹೊಡೆದು ಸಮಸ್ಯೆಯಾಗಿತ್ತೇ ಹೊರತು ಜೇನು ಹುಳುಗಳು ಅವೇ ಸ್ವಯಂ ಪ್ರೇರಿತವಾಗಿ ದಾಳಿ ಮಾಡಿರಲಿಲ್ಲ ಎಂದಿದ್ದಾರೆ.

ಆ ಘಟನೆಯ ನಂತರ ಜೇನು ದಾಳಿಯ ಬಗೆಗೆ ಕಾಲೇಜು ಮಕ್ಕಳಲ್ಲಿದ್ದ ಆತಂಕವನ್ನು ಜಾಗೃತಿ ಮೂಲಕ ದೂರ ಮಾಡುವ ಬದಲು, ಮೆಡಿಕಲ್ ಕಾಲೇಜು ಖಾಸಗಿ ಕಾಲೇಜಿನ ಘಟನೆಯನ್ನು ಈ ಪ್ರಕರಣದ ಜೊತೆಗೆ ಅನಗತ್ಯವಾಗಿ ಲಿಂಕ್ ಮಾಡಿ ಪತ್ರಿಕೆಗಳಲ್ಲಿ ಸುದ್ದಿ ಮಾಡಿಸಿ ಇದೊಂದು ಗಂಭೀರ ಸಮಸ್ಯೆ ಎನ್ನುವಂತೆ ಬಿಂಬಿಸಲಾಗಿದೆ ಎಂದು ಬೇಸರಿಸಿದ್ದಾರೆ.

ಇಲ್ಲಿ ವಿದ್ಯಾರ್ಥಿಗಳ ಹಿತಕ್ಕಿಂತ ಅನ್ಯ ಹಿತಾಸಕ್ತಿಗಳು ಹೆಚ್ಚಿದೆ ಎಂಬ ಮಾತುಗಳು ವಿದ್ಯಾರ್ಥಿ ವಲಯದಲ್ಲಿ ಕೇಳಿಬರುತ್ತಿದೆ. ವಾಸ್ತವದಲ್ಲಿ ವೈದ್ಯಕೀಯ ವಿಜ್ಞಾನ | -ಓದುತ್ತಿರುವ ವಿದ್ಯಾರ್ಥಿಗಳು ಪ್ರಬುದ್ಧರಾಗಿದ್ದು ಜೀನಿನೊಂದಿಗೆ ಹೇಗೆ ವರ್ತಿಸಬೇಕೆಂಬ ಪ್ರಾಥಮಿಕ ಜ್ಞಾನ ಅವರಿಗಿರುತ್ತದೆ ಎಂದು ಹೇಳಿದ್ದಾರೆ.

ಕಿಟಕಿಗಳಿಗೆ ಮೆಶ್ ಹಾಕಿ ಜೇನು ಹುಳುಗಳು ಕೊಣೆಯ ಒಳ ಪ್ರವೇಶಿಸದಂತೆ ಸುರಕ್ಷಿತ ಕ್ರಮ ಕೈಗೊಳ್ಳುವ ಬದಲು, ಆಡಳಿತ ಮಂಡಳಿ ಕಾಲೇಜು ಆವರಣದಲ್ಲಿ ಹಲವು ಜೇನುಗೂಡುಗಳನ್ನು ಸಾಮೂಹಿಕವಾಗಿ ನಾಶ ಮಾಡಿರುವುದು ಆಘಾತಕಾರಿ, ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಜೇನುಹುಳುಗಳ ಮಾರಣ ಹೋಮವನ್ನೇ ನಡೆಸಿದೆ. ಈ ಸಾವುಗಳಿಗೆ ಜವಾಬ್ದಾರಿ ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ತೀರಾ ಸಮಸ್ಯೆ ಅನ್ನಿಸುತ್ತಿದ್ದ ಜೇನುಗೂಡುಗಳನ್ನು ಸುರಕ್ಷಿತವಾಗಿ ಬೇರೆಡೆಗೆ ವರ್ಗಾವಣೆ ಮಾಡಲು ಅವಕಾಶ ಇತ್ತು ಅದಕ್ಕಾಗಿಯೇ ಕೆಲಸ ಮಾಡುತ್ತಿರುವ ತಂಡಗಳೂ ಇವೆ. ಅವರನ್ನು ಸಂಪರ್ಕಿಸಬಹುದಾಗಿತ್ತು. ಅವರು ಯಾವುದೇ ಕಾರಣಕ್ಕೂ ಜೇನು ನಾಶ ಮಾಡಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಪರ್ಯಾಯ ಸಾಧ್ಯತೆಗಳನ್ನು ಯೋಚಿಸದೇ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ಹರೀಶ್ ಮತ್ತು ಆಡಳಿತ ವ್ಯವಸ್ಥೆ ದುಡುಕಿ ಏಕಾಏಕಿ ಏಕಪಕ್ಷೀಯವಾದ ನಿರ್ಧಾರ ಕೈಗೊಂಡಿದೆ ಜೇನು ತೆರವಿನ ಕುರಿತು ಅರಣ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಕಾಲೇಜಿನ ಕಟ್ಟಡ, ಹಾಸ್ಟೆಲ್ ಗೋಡೆಗಳಲ್ಲಿದ್ದ 84 ಗೂಡುಗಳನ್ನು ತೆರವುಗೊಳಿಸಲು, ಪ್ರತೀ ಗೂಡಿಗೆ ₹1,000/- ದಂತೆ ಯಾವುದೇ ತಜ್ಞತೆ ಇಲ್ಲದ ವ್ಯಕ್ತಿಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜೇನು ತುಪ್ಪವನ್ನೂ ಅವರಿಗೇ ಎಂಬ ಕರಾರು ನಡೆದಿದೆ. ಆ ತಂಡ ರಾಸಾಯನಿಕ ಸ್ಟೇ ಬಳಸಿ ಜೇನು ನಾಶ ಮಾಡಿದೆ. ಹೆಚ್ಚಿನ ಕಾರ್ಯಾಚರಣೆ ರಾತ್ರಿ ವೇಳೆ ನೆಡೆದಿದೆ. ಒಟ್ಟಾರೆ ಇಲ್ಲಿ ಕಾನೂನುಗಳ ಸ್ಪಷ್ಟ : ಉಲ್ಲಂಘನೆಗಳು ಎದ್ದು ಕಾಣಿಸುತ್ತಿದೆ ಎಂದು ದೂರಿದ್ದಾರೆ.

ಕಾಫಿಯೇ ಚಿಕ್ಕಮಗಳೂರಿನ ಆರ್ಥಿಕ ಶಕ್ತಿ ಅದರ ಪರಾಗಸ್ಪರ್ಶಕ್ಕೆ ಬೇನು ಬೇಕು. ಕಾಫಿ ಹೂವಿನ ಸಮಯದಲ್ಲಿ ದೂರದ ಬೆಂಗಳೂರಿನಿಂದಲೂ ಜೇನು ಹುಳುಗಳು ಪಶ್ಚಿಮ ಪಟ್ಟಕ್ಕೆ ವಲಸೆ ಬಂದು ಪರಾಗಸ್ಪರ್ಶ ಮಾಡುತ್ತವೆ ಎಂದು ವೈಜ್ಞಾನಿಕ ಅಧ್ಯಯನಗಳು ಹೇಳುತ್ತವೆ ಎಂದು ಉಲ್ಲೇಖಿಸಿದ್ದಾರೆ.
ಈಗ ಮೆಡಿಕಲ್ ಕಾಲೇಜು ಇರುವ ಜಾಗ ಈ ಹಿಂದೆ ಕಾಡಾಗಿತ್ತು. ಚಿಕ್ಕಮಗಳೂರು ಸುತ್ತ ಮುತ್ತಲಿನ ದೊಡ್ಡ ಮರಗಳನ್ನು ರಸ್ತೆ ವಿಸ್ತರಣೆ, ತೋಟ, ಟಿಂಬರ್ ಮೊದಲಾದ ಉದ್ದೇಶಗಳಿಗೆ ಕಡಿದ ಮೇಲೆ ಆ ಜೇನುಗಳಾದರೂ ಎಲ್ಲಿಗೆ ಹೋಗಬೇಕು ಅವು ಸುರಕ್ಷಿತ ಎಂದು ಬಂದು ಕುಳಿತ ಜಾಗದಲ್ಲೇ ಅವುಗಳನ್ನು ಕಗ್ಗೊಲೆ ಮಾಡಿದರೆ ಹೇಗೆ ? ಎಂದು ಕೇಳಿದ್ದಾರೆ.

ಜೇನಿನ ಬಗೆಗೆ ಭಯ ಸಹಜವಾಗಿದ್ದರೂ ಇದು ವೈದ್ಯಕೀಯ ಕಾಲೇಜು ಎಂಬುದನ್ನು ಮರೆಯಬಾರದು. ಒಂದು ವೇಳೆ ಭವಿಷ್ಯದಲ್ಲಿ ಆಕಸ್ಮಿಕವಾಗಿ ಅವಘಡ ಆಗಿದ್ದರೂ ತಕ್ಷಣ ಚಿಕಿತ್ಸೆ ಕೊಡಲು ಬೇಕಾದ ತಜ್ಞತೆ, ಕೌಶಲ್ಯಗಳು ತಮ್ಮ ಸಹಪಾಠಿಗಳಲ್ಲೇ ಇರುತಿತ್ತು. ಹೀಗಿದ್ದರೂ ಮೆಡಿಕಲ್ ಕಾಲೇಜಿನ ಆಡಳಿತ ಅಸೂಕ್ಷ್ಮವಾಗಿ/ಸಂವೇದನಾ ರಹಿತವಾಗಿ ವರ್ತಿಸಿದೆ ಟೀಕಿಸಿದ್ದಾರೆ.
ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವಿಚಾರಣೆ ನಡೆಸಿ ಅಲ್ಲಿನ ಡೀನ್ ಸೇರಿದಂತೆ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಉಳಿದಿರುವ ಜೇನು ಗೂಡುಗಳ ಸುರಕ್ಷತೆಗೆ, ವಿದ್ಯಾರ್ಥಿಗಳ ಹಿತಕ್ಕೆ ಆದ್ಯತೆ ನೀಡಬೇಕು ಎಂದು ಎಂದು ಒತ್ತಾಯಿಸಿದ್ದಾರೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ