ಮೂಡಿಗೆರೆ ಹೃದಯ ಭಾಗದಲ್ಲಿರುವ ಹಳ್ಳ ಸುಂಡೇಕೆರೆ ಹಳ್ಳ , ಈ ಹಳ್ಳ ಮೂಡಿಗೆರೆ ಸೇರಿದಂತೆ ಇತರೆ ಹತ್ತು ಹಳ್ಳಿಗಳಿಗೆ ಜೀವ ಜಲವಾಗಿದೆ. ಆದರೆ ಆ ಜೀವ ಜಲದಲ್ಲಿ ಕೊಳೆತ ಕಸ ತ್ಯಾಜ್ಯಗಳು ಸೇರಿಕೊಂಡು ಪ್ರತಿ ಮನೆಮನೆಗೂ ನಲ್ಲಿಯ ಮೂಲಕ ಹೋಗುತ್ತಿದ್ದು ಆ ನೀರನ್ನು ಸೇವಿಸಲು ಯೋಚಿಸುವಂತಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದೇ ವಿಧಿಇಲ್ಲದೆ ಅದೇ ನೀರನ್ನು ಸೇವಿಸ ಬೇಕಾದ ಪ್ರಮೆಯ ಒದಗಿ ಬಂದಿದೆ. ಒಟ್ಟಿನಲ್ಲಿ ಅಧಿಕಾರಿಗಳು ಗಾಢ ನಿದ್ರೆಯಲ್ಲಿ ತೊಡಗಿದ್ದು ಗ್ರಾಮಸ್ಥರು ಜೀವ ಭಯದಲ್ಲಿ ನೀರು ಸೇವಿಸುವಂತಗಿದೆ.
ಮೂಡಿಗೆರೆ ಸುಂಡೇಕೆರೆ ಹಳ್ಳದ ನೀರು ಮೂಡಿಗೆರೆ ಪಂಪ್ ಹೌಸ್ ದಾಟಿ ಒಂದು ಕಿಲೋಮೀಟರ್ ಮುಂದಕ್ಕೆ ಬಂದರೆ ಹಳೇಮೂಡಿಗೆರೆ ಗ್ರಾಮಪಂಚಾಯತಿಯ ಪಂಪ್ ಹೌಸ್ ಇದ್ದು. ಆ ಒಂದು ಕೀಲೋ ಮೀಟರ್ ಮಧ್ಯದಲ್ಲಿ ನೂರೈವತ್ತು ಮೀಟರ್ ದೂರದಲ್ಲಿ ಸುಂಡಿಕೆರೆ ಹಳ್ಳದ ಒಡಲಲ್ಲಿ ತ್ಯಾಜ್ಯಗಳು ಹಾಗೂ ಕಸದ ರಾಶಿಗಳ ಗುಪ್ಪೆಗಳು ಇದ್ದು. ಇದೇ ನೀರು ಹಳೆಮೂಡಿಗೆರೆ ಗ್ರಾಮ ಪಂಚಾಯತಿಯ ಪಂಪ್ ಹೌಸ್ ಮೂಲಕ ಕುನ್ನಳ್ಳಿ, ಹಳಸೆ ಸೇರಿದಂತೆ ವಿವಿಧ ಭಾಗಗಳಿಗೆ ನೀರು ಸರಬರಾಜಾಗುತ್ತಿದ್ದು, ಕುನ್ನಳ್ಳಿ ಭಾಗದ ಜನರು ತಮಗೆ ಶುದ್ದ ನೀರು ಕೊಡುವಂತೆ ಅಧಿಕಾರಿಗಳಲ್ಲಿ ಮನವಿಗೊಂಡರು ಉತ್ತರ ನೀಡದೇ ಸುಮ್ಮನಿದ್ದರೆ.
ಗ್ರಾಮ ಪಂಚಾಯತಿಗಳ ಸದಸ್ಯರ ಅವಧಿ ಮುಗಿದಿದ್ದು ಅಧಿಕಾರಿಗಳದೆ ಕಾರು ಬಾರು ನಡೆಯುತ್ತಿದ್ದು ಹೇಳುವವರು ಕೇಳುವವರು ಇಲ್ಲದಂತಾಗಿದೆ. ಗ್ರಾಮಪಂಚಾಯತಿಯ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲಾ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಏನು ತಪ್ಪು ಮಾಡದ ನಮಗೆ ತಾಜ್ಯ ಮತ್ತು ಕಸದಿಂದ ಕಲುಷಿತಗೊಂಡ ನೀರು ಕುಡಿಯುವಂತಾಗಿದೆ. ಕೂಡಲೇ ಹಳ್ಳದ ತಾಜ್ಯ ಮತ್ತು ಕಸಗಳನ್ನು ತೆಗಿಸದೇ ಇದ್ದಲ್ಲಿ ಗ್ರಾಮ ಪಂಚಾಯತಿಯ ಮುಂದೆ ಪ್ರತಿಭಟನೆ ನಡೆಸಲು ಸಿದ್ದರಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.



