pranesh m k_page-0001

 

 

ಕಾಂಗ್ರೆಸ್‍ನವರು ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಮೂಲಕ ಜನಪ್ರತಿನಿಧಿಗಳ ಮತ ಪಡೆದು ಗೆದ್ದ ಮಾತ್ರಕ್ಕೆ ಜನರಿಂದಲೇ ಮತ ಪಡೆದ ರೀತಿಯಲ್ಲಿ ಹೆಮ್ಮೆಪಡುತ್ತಿರುವುದು ಹಾಸ್ಯಾಸ್ಪದ. ಅಧಿಕಾರವೆಂಬ ಸಕ್ಕರೆ ಇದ್ದಾಗ ಸಕ್ಕರೆ ಬಳಿ ಇರುವೆ ಮುತ್ತುವುದು ಸಹಜ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ವಿರೋಧ ಪಕ್ಷದ ಕೆಲ ಶಾಸಕರಿಂದ ಅಡ್ಡ ಮತದಾನ ಹಾಕಿಸಿಕೊಂಡು ಗೆದ್ದ ಮಾತ್ರಕ್ಕೆ ಕಾಂಗ್ರೆಸ್‍ನವರು  ಬೀಗಬೇಕಾಗಿಲ್ಲ. ಅಧಿಕಾರ ಎಂಬ ಸಕ್ಕರೆ ಮುಂದೊಂದು ದಿನ ಖಾಲಿಯಾಗಲೇಬೇಕು. ಆ ಕ್ಷಣದಲ್ಲಿ ಅವರ  ಸುತ್ತ ಯಾರು ಇರುವುದಿಲ್ಲ. ಈ ಹಿಂದಿನಿಂದಲೂ ಆಪರೇಷನ್ ಕಮಲ ಎಂದು ಜನರಿಗೆ ಸುಳ್ಳು ಸುದ್ದಿ ಹಬ್ಬಿಸುವಲ್ಲಿ ಕಾಂಗ್ರೆಸ್ ನಿಸ್ಸೀಮವಾಗಿತ್ತು.  ಹಿಂದಿನಿಂದಲೂ ವಿರೋಧ ಪಕ್ಷದ ಸದಸ್ಯರನ್ನು ಹಣ, ಅಧಿಕಾರ ದರ್ಪದಲ್ಲಿ ಖರೀದಿಸುವುದು ಕಾಂಗ್ರೆಸ್‍ನ ಚಾಳಿಯನ್ನು ಜನರು ಅರಿತಿದ್ದಾರೆ. ಸರಕಾರದಲ್ಲಿ ಹಣವಿಲ್ಲದೇ ಕ್ಷೇತ್ರದ ಶಾಸಕರಿಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ದೂರಿದರು.

ರಾಜ್ಯದ ಹಣಕಾಸು ಸ್ಥಿತಿ ಹೇಳತೀರದಾಗಿದೆ. ಇವರ ದುರಾಡಳಿತದಿಂದ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಇದನ್ನು ನಿಭಾಯಿಸಲು ಹಣವಿಲ್ಲದೇ ಗಮನ ಕೂಡ ಕೊಡುತ್ತಿಲ್ಲ. ಅಲ್ಲದೇ ರಾಜ್ಯಾಧ್ಯಂತ ರಸ್ತೆಗಳು ಗುಂಡಿ ಬಿದ್ದಿವೆ. ಎಸ್ಸೀ ಎಸ್ಟಿ ಅನುದಾನವನ್ನು ದುರ್ಬಳಕೆಯಾಗುತ್ತಿದೆ. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ಸಾಲದಂತೆ ಎಲ್ಲಾ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಅಲ್ಲದೇ ವಿದ್ಯುತ್ ಖಾಸಗೀಕರಣ ಮಾಡಿ, ಮತ್ತಷ್ಟು ಹಣ ದೋಚಲು ಸಿದ್ದರಾಗಿದ್ದಾರೆ. ಇದರಿಮದ ಕಾಂಗ್ರೆಸ್‍ನ ಅಧಿಕಾರದ ಮದ ಹೆಚ್ಚು ಕಾಲ ಉಳಿಯುವುದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಹಿನ್ನಡೆಯನ್ನು ರಾಜ್ಯದ ಜನತೆ ಸಹಿಸಿಕೊಳ್ಳಲು ಸಾಧ್ಯವಾಗದೇ ಕಾಂಗ್ರೆಸ್‍ನ್ನು ಮನೆಗೆ ಕಳಿಸಲು ಸಿದ್ದರಾಗಿದ್ದಾರೆಂದು ಹೇಳಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ