ಚಿಕ್ಕಮಗಳೂರು: ಸ್ವದೃಢ ದೇಹ ಮತ್ತು ಆರೋಗ್ಯಕ್ಕೆ ಯೋಗಾಭ್ಯಾಸ ಪೂರಕ ಎಂದು ಉಜಿರೆ ಎಸ್‍ಡಿಎಂ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಜಿ.ಎ ತಿಳಿಸಿದರು.
ಶನಿವಾರ ಆಶ್ರಯ ನರ್ಸಿಂಗ್ ಕಾಲೇಜಿನಲ್ಲಿ ರಾಜೀವ್ ಗಾಂಧಿ ಯೂನಿವರ್‍ಸಿಟಿ, ಎಸ್‍ಡಿಎಂ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ 12 ನೇ ಅಂತರಾಷ್ಟ್ರೀಯ ಯೋಗ ದಿನಾಚಾರಣೆ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಯೋಗದ ಬಗ್ಗೆ 10 ದಿನಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಯುವಕರಿಂದ ವೃದ್ಧರ ವರೆಗೆ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಮುಂದಾಗಬೇಕೆಂದು ಕರೆ ನೀಡಿದರು.
ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಪುರುಷೋತ್ತಮ ಸ್ವಾಗತಿಸಿ ಮಾತನಾಡಿ ಈಗ ಸಮಾಜದಲ್ಲಿ ಏಕಾಗ್ರತೆ ಇಲ್ಲದೆ ಇರುವ ಈ ಸಂದರ್ಭದಲ್ಲಿ ಜನರು ಮತ್ತು ವಿದ್ಯಾರ್ಥಿಗಳು ಹೋಗುತ್ತಿರುವ ವೇಗಕ್ಕೆ ನಿಯಂತ್ರಿಸಲು ಯೋಗ ಬಹಳ ಮುಖ್ಯ ಎಂದ ಅವರು ಮಾನಸಿಕ ಬದ್ಧತೆ, ದೈಹಿಕ ಶಕ್ತಿ, ಸಂಸ್ಕøತಿ, ಆಸಕ್ತಿ, ಗುರಿ ಹೆಚ್ಚಾಗಬೇಕಾದರೆ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ವಿದ್ಯಾರ್ಥಿಗಳ ಪೋಷಕರು ಯೋಗಾಭ್ಯಾಸ ಕುರಿತು ಜಾಗೃತಿ ಮೂಡಿಸುವ ಅಗತ್ಯ ಇದೆ, ನಿರಂತರ ಯೋಗಾಭ್ಯಾಸದಲ್ಲಿ ತೊಡಗಿದಾಗ ಜ್ಞಾನ ಹೆಚ್ಚಾಗುವುದರ ಜೊತೆಗೆ ಸದೃಢ ಆರೋಗ್ಯ ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರಾಂಶುಪಾಲೆ ತೇಜಸ್ವಿನಿ ಮಾತನಾಡಿ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಮೈಗೂಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ನೆಡೆಯಲಿರುವ 10 ದಿನಗಳ ಯೋಗ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‍ಡಿಎಂ ಕಾಲೇಜಿನ ಇನ್ನೋರ್ವ ವಿದ್ಯಾರ್ಥಿನಿ ಐಶ್ವರ್ಯ ಜೆ, ಅಧ್ಯಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



