sdpi 1

 

 

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡರ ಹತ್ಯೆಯನ್ನು ಖಂಡಿಸಿ ಹಾಗೂ ಕೊಲೆಯ ಹಿಂದಿನ ಸಂಘಪರಿವಾರದ ಷಡ್ಯಂತ್ರದ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ {SDPI} ಚಿಕ್ಕಮಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಆಜಾದ್ ಪಾರ್ಕ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಮುಸ್ತಫ ಆಲ್ದೂರು ರವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡರವರನ್ನು ಅಮಾನವೀಯವಾಗಿ ಮಚ್ಚಿನಿಂದ  ಕೊಚ್ಚಿ ಹತ್ಯೆ ಮಾಡಿರುವ ಘಟನೆ ರಾಜ್ಯದ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ತಮ್ಮದೇ ಕಾರ್ಯಕರ್ತನನ್ನು ರಕ್ಷಿಸಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಮೌನಕ್ಕೆ ಶರಣಾಗಿರುವುದು ಅತ್ಯಂತ ಖಂಡನೀಯ, ರಾಜಕೀಯ ಲಾಭಕ್ಕಾಗಿ, ವೈಯಕ್ತಿಕ ದ್ವೇಷಕ್ಕಾಗಿ ಮತ್ತು ಫ್ಯಾಸಿಸಂನ ಕ್ರೂರತನಕ್ಕೆ ಕುಖ್ಯಾತಿಗೆ ಹೆಸರುವಾಸಿಯಾಗಿರುವ

ಮತಿಯವಾದಿ ಶಕ್ತಿಗಳು ಯಾರ ಮೇಲಾದರೂ ದಾಳಿ ನಡೆಸುವ ಮತ್ತು ಕೊಲೆಗೈಯುವ ಹೀನ ಕೃತ್ಯಕ್ಕೆ ಕೈಹಾಕುವರು ಎನ್ನುವುದಕ್ಕೆ ಈ ಗಣೇಶನ ಕೊಲೆಯೇ ಸಾಕ್ಷಿ, ಗಣೇಶ್ ಗೌಡರವರ ಹತ್ಯೆ ಒಂದು ಪೂರ್ವ ಯೋಜಿತ ಮತ್ತು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯವಾಗಿದ್ದು, ಈ ಕೃತ್ಯಕ್ಕೆ ಕಾರಣಕರ್ತರಾದವರ ಮೇಲೆ ಮತ್ತು ಈ ಕೃತ್ಯದ ಹಿಂದೆ ಇರುವ ಮಾಸ್ಟರ್ ಮೈಂಡ್ ಗಳನ್ನು ಪತ್ತೆಹಚ್ಚ ಬೇಕು . ಪೊಲೀಸ್ ಇಲಾಖೆ ಯಾವ ಕಾರಣಕ್ಕೂ ಯಾವ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕತೆಯೊಂದಿಗೆ ತನಿಖೆ ನಡೆಸಿ ನಿರ್ದಿಷ್ಟ ಅವಧಿಯೊಳಗೆ ಆರೋಪ ಪಟ್ಟಿ ಸಲ್ಲಿಸಿ ಕೊಲೆಗಡುಕರನ್ನು ಮತ್ತು ಕೊಲೆಗೆ ಪ್ರೇರೇಪಿಸಿದ ಖತರ್ನಾಕ್ ಮಾಸ್ಟರ್ ಮೈಂಡ್ ಕ್ರಿಮಿನಲ್ಸ್ ಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸ ಬೇಕು ಹಾಗೂ ಮೃತನ ಸಂತ್ರಸ್ತ ಕುಟುಂಬಸ್ಥರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

* ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದವರು :

.    ಅಂಗಡಿ ಚಂದ್ರು

Sdpi ರಾಜ್ಯ ಕಾರ್ಯದರ್ಶಿ

* ಶ್ರೀನಿವಾಸ್ ದಂಟರಮಕ್ಕಿ ಜಿಲ್ಲಾ ಉಪಾಧ್ಯಕ್ಷರು

* ರಿಜ್ವಾನ್ ಹುಸೇನ್, ಮುಬಾರಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು

* ಅಜ್ನಾನ್ ಶರೀಫ್ ಜಿಲ್ಲಾ ಕಾರ್ಯದರ್ಶಿ

* ಗೌಸ್ ಮೊಹಿದ್ದೀನ್ ಎದ್ದೇಳು ಕರ್ನಾಟಕ ಸಂಚಾಲಕರು

* ಜಂಶೀದ್ ಖಾನ್ ಟಿಪ್ಪು ಸಂಘದ ಅಧ್ಯಕ್ಷರು

* ಅಝ್ಮತ್ ಪಾಷ ಚಿಕ್ಕಮಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷರು

* ಶರೀಫ್ ಎಂ.ಯು ಮೂಡಿಗೆರೆ ಕ್ಷೇತ್ರ ಸಮಿತಿ ಅಧ್ಯಕ್ಷರು

* ಶಾರುಖ್ ಕಡೂರು ಕ್ಷೇತ್ರ ಸಮಿತಿ ಅಧ್ಯಕ್ಷರು

* ಪಕ್ಷದ ನಾಯಕರು‌ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ