IMG-20251228-WA0285

 

 

ಯುವಕರು ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದು ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ, ಮಾಜಿ ಯೋಧ ಕೆ.ಎಲ್.ವಸಂತ್ ಹೇಳಿದರು.

ಅವರು ಭಾನುವಾರ ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಅತ್ತಿಗೆರೆ ಹಿರಿಯ ಪ್ರಾಥಮಿಕ ಶಾಲೆಯ  ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ದೇಶ ಪ್ರೇಮ ಉಳಿಸಿಕೊಳ್ಳಲು ದೇಶ ಸೇವೆಯಿಂದ ಸಾಧ್ಯವಾಗುತ್ತದೆ. ನಾವೆಲ್ಲರೂ ಒಂದೇ ಭಾರತೀಯರು ಎಂಬಂತೆ ಸೇವೆ ನೀಡಬೇಕು. ದೇಶ ಸೇವೆಗೆ ಜಾತಿಯ ತಾರತಮ್ಯ ಇಲ್ಲ. ಈ ಶಾಲೆ ನಾವು ಅಂದು ವಿದ್ಯೆ ಕಲಿಯುವಾಗ ಸೌಲಭ್ಯಗಳೇ ಕೊರತೆಯಾಗಿದ್ದವು. ಆದರೂ ಶಿಕ್ಷಕರು ಉತ್ತಮ ವಿದ್ಯೆ ನೀಡಿದ್ದರಿಂದ ನಾವು ಸಮಾಜದಲ್ಲಿ ಉತ್ತಮ ಹುದ್ದೆ ಏರಲು ಸಾಧ್ಯವಾಯಿತು. ಕಲಿತ ಶಾಲೆ, ಶಿಕ್ಷಕರನ್ನು ಎಂದಿಗೂ ಮರೆಯಬಾರದು’ ಎಂದರು.

ಮಾಜಿ ಯೋಧ ಟಿ.ಎಸ್.ಪ್ರಸನ್ನ ಮಾತನಾಡಿ’ ಚಿಕ್ಕಮ್ಮ ಟೀಚರ್, ಬಲರಾಮಯ್ಯ ಮಾಸ್ಟರ್ ಕೊಟ್ಟ ಏಟುಗಳು ಇಂದು ಶಿಲೆಯಾಗಿ ದೇಶ ಕಾಯುವ ಯೋಧನಾಗಿ ನನ್ನನ್ನು ರೂಪಿಸಿದೆ. ಯೋಧನಾಗಿ ಅನೇಕ ಏಳುಬೀಳುಗಳನ್ನು ಕಂಡಿದ್ದೇನೆ. ನಿವೃತ್ತಿ ನಂತರ 2018ರಲ್ಲಿ ಬೆಂಗಳೂರಿನಲ್ಲಿ ನಾನಿದ್ದ ಮನೆ ಮೇಲೆ ಟೆರರಿಸ್ಟ್ ದಾಳಿಯಾಗಿತ್ತು. ನನ್ನ ಪತ್ನಿ, ಮಕ್ಕಳು ಯಾವುದೇ ತೊಂದರೆಯಾಗದೇ ಪಾರಾದರು.

ಮಕ್ಕಳು ಪೋಷಕರಿಗೆ ಹಿರಿಯರಿಗೆ ಗೌರವ ಕೊಡಬೇಕು. ನಮಗೆ ದೇಶ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಅನ್ನುವುದೇ ಮುಖ್ಯವಾಗಿದೆ’ ಎಂದರು.

ನಿವೃತ್ತ ಶಿಕ್ಷಕ ಬಲರಾಮಯ್ಯ ಮಾತನಾಡಿ’ ಕಟ್ಟಡ ಹಳೆಯದಾಗಿದ್ದು ಇದರ ಅಭಿವೃದ್ದಿಗೆ ನಾನು ನೆರವು ನೀಡಲು ಸಿದ್ದನಿದ್ದೇನೆ.   ಈ ಶಾಲೆಯ ವಿದ್ಯಾರ್ಥಿಗಳು ನನ್ನನ್ನು ಮರೆಯದೇ ಗೌರವಿಸಿರುವುದು ನನಗೆ ಅತೀವ ಸಂತಸ  ತಂದಿದೆ’ ಎಂದರು.

ನಿವೃತ್ತ ಯೋಧರಾದ ವಲೇರಿಯನ್ ಡಿಸೋಜ,ಕೆ.ಎಲ್.ವಸಂತ್, ಎ.ಜಯರಾಮಗೌಡ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಟಿ.ಸಿ.ರಮೇಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಅಮೃತ ಮಹೋತ್ಸವದ ಕಾರ್ಯದರ್ಶಿ ಟಿ.ಎಂ.ನರೇಂದ್ರ, ಟಿ.ಎ.ಖಾದರ್, ಸುಬ್ಬಯ್ಯ ಮಾತನಾಡಿದರು.

ಟಿ.ಸಿ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಬಗ್ಗೆ ಮುಖ್ಯ  ಶಿಕ್ಷಕರಾದ ಕೆ.ಕವಿತಾ, ಹಂಸಲೇಖ ವರದಿ ಮಂಡಿಸಿದರು.

ಕಾರ್ಯಕ್ರಮದಲ್ಲಿ ಹಳೇ ಶಿಕ್ಷಕರಾದ ಲಿಲ್ಲಿ ವಿ.ಡಿ, ಚಿಕ್ಕಮ್ಮ,  ಲೋಚನಾ, ಸರೋಜ, ಬಲರಾಮಯ್ಯ, ನರಸಿಂಹ ಮೂರ್ತಿ, ಭರತ್ ರೆಡ್ಡಿ ಹಾಗೂ ಈ ಶಾಲೆಯಲ್ಲಿ ಕಲಿತು 75ವರ್ಷ ಮುಗಿಸಿದ್ದ  ಹಳೇ ವಿದ್ಯಾರ್ಥಿಗಳಾದ  ಟಿ.ಎಂ.ಗೋಪಾಲಗೌಡ, ರವಿಕಲಾ ಪೈ, ಲಕ್ಷ್ಮಣಾಚಾರ್, ಟಿ.ಎ.ಖಾದರ್, ಕೃಷ್ಣಾಚಾರ್, ಎ.ಬಿ.ಕೃಷ್ಣೇಗೌಡ ಅವರನ್ನು ಶಾಲಾ ಅಮೃತ ಮಹೋತ್ಸವ ಸಮಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಬಿ.ಎಂ.ಸತೀಶ್,ಪ್ರದಾನ ಸಂಚಾಲಕ ಬಿ.ಎಂ.ಭರತ್,ಟಿ.ಎಂ.ಗಜೇಂದ್ರ, ಕಾರ್ಯದರ್ಶಿ ಹಸೇನ್ ಹಾಜಿ, ಟಿ.ಎಸ್.ಮಂಜುನಾಥ್, ನಟೇಶ್, ಲೋಲಾಕ್ಷಿ, ದೇವಣ್ಣ ಚಕ್ಕೋಡು, ಟಿ.ಜಿ.ಪ್ರಶಾಂತ್, ಕಿರಣ್ ಎ.ಎನ್, ಪೂರ್ಣೇಶ್, ಗ್ರಾ.ಪಂ.ಅಧ್ಯಕ್ಷ ಎ.ಎನ್.ರಘು, ಸ್ವರೂಪ, ಸುಶೀಲ,ಸಂಜಯ್ ಗೌಡ, ಎ.ಕೆ.ಸಂತೋಷ್,ಅಭಿಲಾಷ್ ಎ.ಆರ್,ಅಶ್ವಥ್ ಎ.ಆರ್,ಅನ್ವಿತ್ ಕುಮಾರ್,ಶಿಕ್ಷಕಿ ಶೈನಿ ತಂಬಿ, ಕಿರಣ್ ಕುಮಾರ್ ,ಟಿ.ಎಂ.ಹರಿಣಿ,ಬಸವಲಿಂಗಪ್ಪ,ಮೋಹನ್ ಮಲಯಮಾರುತ,ನಂದೀಶ್ ಬಂಕೇನಹಳ್ಳಿ,ತನು ಕೊಟ್ಟಿಗೆಹಾರ ಹಾಗೂ ಹಳೇ ವಿದ್ಯಾರ್ಥಿಗಳು,ಪೋಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ