IMG-20260124-WA0001_copy_1047x701_1

 

 

ಮನೆಯಲ್ಲಿ ವಯಸ್ಕ ಮಹಿಳೆ ಒಬ್ಬರೆ ಇದ್ದಾಗ ಮನೆಯಲ್ಲಿದ್ದ ಬೆಳ್ಳಿ ಆಭರಣ, ಮೊಬೈಲ್ ಮತ್ತು ಹಣವನ್ನು ಮಾಡಿದ್ದ ಮೂವರು ಅಸ್ಸಾಂ ಕಾರ್ಮಿಕರನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸಕಲೇಶಪುರ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ:23/01/2026 ರಂದು   ಮಧ್ಯಾಹ್ನ 02:30 ಗಂಟೆಯಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಸತ್ತಿಗಾಲ ಗ್ರಾಮದ ಶಿವಕುಮಾರ್ ಎಂಬುವವರ ಮನೆಯಲ್ಲಿ ಅವರ ವಯಸ್ಕ ತಾಯಿ ಭೈರಮ್ಮ ಒಬ್ಬರೇ ಇದ್ದಾಗ ಕೆಲಸದ ನೆಪದಲ್ಲಿ ಅವರ ದಿಕ್ಕುತಪ್ಪಿಸಿ ಸುಮಾರು 70 ಸಾವಿರ ಮೌಲ್ಯದ ಬೆಳ್ಳಿ ಪದಾರ್ಥಗಳು ಮತ್ತು 2 ಅ್ಯಂಡ್ರಾಯ್ಡ್ ಮೊಬೈಲ್ ಗಳು, ಮತ್ತು ಹಣವನ್ನು ಅಸ್ಸಾಂ ಮೂಲದ ರಜುಲ್ ಹುಸೇನ್, ಶುಕುರ್ ಆಲಿ,ಆಬಿದ್ ಆಲಿ ಎಂಬ ಮೂವರು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು.

ತತ್ ಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಸಕಲೇಶಪುರ ನಗರ ಪೊಲೀಸ್ ಠಾಣೆ ಧಾವಿಸಿ ನಂತರ ಸಕಲೇಶಪುರ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿ.ಸಿ.ವನರಾಜು ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಗಳು ಕೇವಲ ಒಂದು ಗಂಟೆಯಲ್ಲಿ ಸಕಲೇಶಪುರದ ರೆಲಿಶ್ ಬಾರ್ ಮುಂಭಾಗ ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಫಿ ತೋಟಗಳಿಗೆ ಕೆಲಸಕ್ಕೆ ಬಂದಿರುವ ಅಸ್ಸಾಂ ಮೂಲದ ಕೆಲ ಕಾರ್ಮಿಕರು ಇಂತಹ ಕ್ರಿಮಿನಲ್ ಕೃತ್ಯದಲ್ಲಿ ತೊಡಗಿದ್ದು ಇದು ತಲೆನೋವಾಗಿ ಪರಿಣಮಿಸಿದೆ. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ