February 18, 2026

 

 

ಯುವಶಕ್ತಿಯೇ ದೇಶದ ಆಸ್ತಿ ಎನ್ನುವ ಮಾತಿದೆ. ಆದರೆ ಆ ಶಕ್ತಿಗೆ ಸರಿಯಾದ ದಿಕ್ಕು ಮತ್ತು ತರಬೇತಿ ಸಿಕ್ಕಾಗ ಮಾತ್ರ ಅದು ಸಮಾಜದ ಬದಲಾವಣೆಯ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಜೆಸಿಐ ಸಂಸ್ಥೆಯು ಕಳೆದ ಹಲವಾರು ದಶಕಗಳಿಂದ ಯುವಕರನ್ನು ಕೇವಲ ವ್ಯಕ್ತಿಗಳನ್ನಾಗಿ ಅಲ್ಲ, ಬದಲಾಗಿ ಸಮಾಜದ ಸಮರ್ಥ ನಾಯಕರನ್ನಾಗಿ ರೂಪಿಸುತ್ತಿದೆ ಎಂದು ಕಳಸ ತಾಲ್ಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಹೇಳಿದರು.

ಕಳಸ ಜೆಸಿಐ ಸಂಸ್ಥೆಯ ಪದವಿ ಸ್ವೀಕಾರ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಜೆಸಿಐ ಕೇವಲ ತರಬೇತಿಗಷ್ಟೇ ಸೀಮಿತವಾಗಿಲ್ಲ. ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಇದು ಬೆಳೆಸುತ್ತದೆ. ಇದು ಯುವಕರು ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಳ್ಳಲು ಭದ್ರ ಬುನಾದಿ ಹಾಕಿಕೊಡುತ್ತದೆ ಎಂದು ಹೇಳಿದರು.

ಕಳಸ ಜೆಸಿಐ ನೂತನ ಅಧ್ಯಕ್ಷರಿಗೆ ವಲಯಾಧ್ಯಕ್ಷ ಪ್ರಜ್ವಲ್ ಜೈನ್ ಪ್ರಮಾಣ ವಚನ ಭೋದಿಸಿದರು.ನಿರ್ಗಮಿತ ಅಧ್ಯಕ್ಷ ಸುಧಾಕರ್ ನಿಯೋಜಿತ ಅಧ್ಯಕ್ಷ ತನ್ವೀರ್ ನ್ಯಾಮತಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಸದಸ್ಯರಿಗೆ ವಲಯ ಉಪಾಧ್ಯಕ್ಷ ದರ್ಶನ್ ಪ್ರಮಾಣ ವಚನ ಭೋದಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಜಯಪ್ರಕಾಶ್, ಖಚಾಂಚಿ ವಸಂತ್, ಉಪಾಧ್ಯಕ್ಷರಾಗಿ ಮುರುಳೀದರ, ಸಂತೋಷ್ ಮೆಣಸೂರು, ಮಾರುತೇಶ್, ಶಿವಪ್ರಸಾದ್, ಮಧು ಗೌಡ, ದೇವರಾಜ್, ನಿರ್ದೇಶಕರಾಗಿ ವಿಜಯ ಕುಮಾರ್, ಸುನೀಲ್, ನಝೀರ್‍ಖಾನ್, ನಂದನ್, ಪ್ರಭು ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಪ್ರಜ್ವಲ್ ಜೈನ್ ಮಾತನಾಡಿ ನಾಯಕತ್ವದ ಗುಣಗಳು ನಾಯಕ ಎಂದರೆ ಕೇವಲ ಆದೇಶ ನೀಡುವವನಲ್ಲ, ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವವನು. ಜೆಸಿಐನ ವಿವಿಧ ಪದಾಧಿಕಾರಿ ಹುದ್ದೆಗಳು ಮತ್ತು ಜವಾಬ್ದಾರಿಗಳು ಯುವಕರಿಗೆ ಆಡಳಿತಾತ್ಮಕ ಮತ್ತು ನಾಯಕತ್ವದ ಅನುಭವವನ್ನು ನೀಡುತ್ತವೆ.ಇಂದು ನಾವು ನೋಡುತ್ತಿರುವ ಎಷ್ಟೋ ಪ್ರಭಾವಿ ನಾಯಕರು ತಮ್ಮ ಆರಂಭಿಕ ದಿನಗಳಲ್ಲಿ ಜೆಸಿಐ ಅಂತಹ ಸಂಸ್ಥೆಗಳಲ್ಲಿ ತರಬೇತಿ ಪಡೆದವರೇ ಆಗಿದ್ದಾರೆ. ಇಲ್ಲಿ ಸಿಗುವ ವೇದಿಕೆ ಯುವಕರಲ್ಲಡಗಿರುವ ಸಂಕೋಚವನ್ನು ಹೋಗಲಾಡಿಸಿ, ಅವರನ್ನು ಸಮಾಜದ ಮುಂಚೂಣಿಗೆ ತರುತ್ತದೆ.ಯುವಕರು ಕೇವಲ ಪದವಿಗಳನ್ನು ಪಡೆದರೆ ಸಾಲದು, ಜೆಸಿಐ ಅಂತಹ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇಲ್ಲಿ ಸಿಗುವ ತರಬೇತಿಯನ್ನು ಸದುಪಯೋಗಪಡಿಸಿಕೊಂಡು, ಉತ್ತಮ ನಾಗರಿಕರಾಗಿ ಮತ್ತು ಸಮಾಜದ ಜವಾಬ್ದಾರಿಯುತ ನಾಯಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ವಲಯ ಬೆಳವಣಿಗೆ ಮತ್ತು ಅಭಿವೃದ್ಧಿ ಅಧಿಕಾರಿ ಪ್ರಶಾಂತ್, ಶ್ರೀಕಾಂತ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ