ರಸ್ತೆ ತಿರುವಿನಲ್ಲಿ ಪಲ್ಟಿಯಾಗಿ ಲಾರಿಯೊಳಗಿದ್ದ ವ್ಯಕ್ತಿಯೊಬ್ಬರು ಹೊರಬರಲಾರದೇ ಸಿಲುಕಿಕೊಂಡಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಳಗೂರು ಟೀ ಎಸ್ಟೇಟ್ ತಿರುವಿನಲ್ಲಿ ಲಾರಿಯೊಂದು ಉರುಳಿಬಿದ್ದಿದ್ದು, ತಿರುವಿನ ಕೆಳಗಡೆಯಿರುವ ಕೂಲಿಲೈನ್ ಮನೆಗೆ ತಾಗಿ ನಿಂತಿದೆ. ಲಾರಿಯಿಂದ ಹೊರಬರಲಾರದೇ ಓರ್ವ ವ್ಯಕ್ತಿ ಸಿಲುಕಿಕೊಂಡಿದ್ದಾರೆ.
ರಸ್ತೆ ತಿರುವಿನಲ್ಲಿ ಸುಮಾರು 50 ಅಡಿ ಎತ್ತರದಿಂದ ಮಕಾಡೆ ಬಿದ್ದಿರುವ ಲಾರಿ …!
ಲಾರಿ ಪಲ್ಟಿಯಾಗಿ ಕೆಳಗೂರು ಟೀ ಎಸ್ಟೇಟ್ ಕೂಲಿ ಲೈನ್ ಒಂದು ಭಾಗದಕ್ಕೆ ಹಾನಿಯಾಗಿದೆ. ಲಾರಿ ಇನ್ನೊಂದು ಪಲ್ಟಿಯಾಗಿದ್ದರೆ ದೊಡ್ಡ ಮಟ್ಟದ ಅನಾಹುತವಾಗ್ತಿತ್ತು. ಲಾರಿ ಮಕಾಡೆಯಾಗಿ ಬಿದ್ದಿದ್ದು, ಕೇವಲ ಚಕ್ರಗಳೂ ಮಾತ್ರ ಮೇಲೆ ಕಾಣುತ್ತಿವೆ. ಲಾರಿಯಲ್ಲೇ ಲಾಕ್ ಆಗಿರುವ ವ್ಯಕ್ತಿಯೊಬ್ಬರ ಸ್ಥಿತಿ ಹೇಗಿದ್ಯೋ ಗೊತ್ತಿಲ್ಲ. ಸ್ಥಳಕ್ಕೆ ಕ್ರೇನ್ ಕರೆದೊಯ್ಯುತ್ತಿರೋ ಬಾಳೂರು ಪೊಲೀಸರು
ಲಾರಿಯಲ್ಲಿ ಚಿಕ್ಕಮಗಳೂರಿನಿಂದ ಹಿರೇಬೈಲಿಗೆ ಸಿಮೆಂಟ್ ಲೋಡ್ ತರಲಾಗುತ್ತಿತ್ತು ಎನ್ನಲಾಗಿದೆ. ಲಾರಿಯಲ್ಲಿ ಚಾಲಕ ಸೇರಿ ಒಟ್ಟು ನಾಲ್ಕು ಜನರಿದ್ದರು ಎನ್ನಲಾಗಿದೆ. ಅದರಲ್ಲಿ ಓರ್ವ ಸ್ಥಳದಿಂದ ಪರಾರಿಯಾಗಿದ್ದು, ಸಿಮೆಂಟ್ ಲೋಡ್ ಮಾಡುವ ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಲಾರಿಯೊಳಗೆ ಮತ್ತೊಬ್ಬ ವ್ಯಕ್ತಿ ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ಸ್ಥಳೀಯರು ಮತ್ತು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ತಿರುವಿನಲ್ಲಿ ಚಾಲಕನ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬ ಅನುಮಾನಿಸಲಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿಯೊಳಗೆ ಸಿಲುಕಿಕೊಂಡಿರುವ ವ್ಯಕ್ತಿಯ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.



