Screenshot_2026-03-13-07-48-12-90_a23b203fd3aafc6dcb84e438dda678b6

 

 

ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಹಾಗೂ ತರೀಕೆರೆ ವ್ಯಾಪ್ತಿಯಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಅಂತರ್ ಜಿಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೆಚ್ ಪರಶುರಾಮಪ್ಪ, ಡಿ.ವೈ.ಎಸ್.ಪಿ., ತರೀಕೆರೆ ಉಪವಿಭಾಗ ಮತ್ತು   ರಫೀಕ್ ಎಂ, ಸಿ.ಪಿ.ಐ., ಕಡೂರು ವೃತ್ತ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿ ಬಂಧಿಸಿದ್ದಾರೆ.

ಆರೋಪಿಗಳಿಂದ ಒಟ್ಟು ₹ 30.13 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 186.350 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದೆ. ವಿಚಾರಣೆ ವೇಳೆ ಆರೋಪಿಗಳು ಚಿಕ್ಕಮಗಳೂರು ಮಾತ್ರವಲ್ಲದೆ ಮೈಸೂರು, ಗದಗ, ಹುಬ್ಬಳ್ಳಿ ಹಾಗೂ ಹಾಸನ ಜಿಲ್ಲೆಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪೊಲೀಸ್ ತಂಡದಲ್ಲಿ ಪಿಎಸ್ಐ ಗಳಾದ   ಪವನ್ ಕುಮಾರ್ ಸಿ ಸಿ,   ಧನಂಜಯ್ ಡಿ ಹೆಚ್, ಶ್ರೀಮತಿ. ವಿದ್ಯಾ ಕೆ ಜೆ,   ತಿಪ್ಪೇಶ್ ಡಿ ವಿ, ಶ್ರೀಮತಿ. ಮಂಜುಳಾಬಾಯಿ ಹಾಗೂ ಸಿಬ್ಬಂದಿಗಳಾದ   ಮಧುಕುಮಾರ್ ಜಿ ಕೆ,   ಸ್ವಾಮಿ ಎ ಓ,  . ಹರೀಶ್ ಬಿ ಸಿ,   ಮಹಮ್ಮದ್ ರಿಯಾಜ್,   ದೇವರಾಜ್ ಎ ಎಸ್,  ಅರುಣ್ ಕುಮಾರ್,   ರಾಜಪ್ಪ ಬಿ ಹೆಚ್ ಮತ್ತು   ಮಂಜಪ್ಪ ರವರು ಕಾರ್ಯನಿರ್ವಹಿಸಿರುತ್ತಾರೆ.

ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಆರೋಪಿಗಳ ವಿವರವನ್ನು ಬಹಿರಂಗಪಡಿಸಿಲ್ಲ.

ದಿನಾಂಕ 19.02.2026 ರಂದು ರಾತ್ರಿ ಕಡೂರು ಪಟ್ಟಣದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ   ರಫೀಕ್ ಎಂ, ಪೊಲೀಸ್ ವೃತ್ತ ನಿರೀಕ್ಷಕರು, ಕಡೂರು ವೃತ್ತ ರವರ ನೇತೃತ್ವದ ಪೊಲೀಸ್ ತಂಡ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು, ಆರೋಪಿಗಳಿಂದ ₹1,60,000/- ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ತಂಡದಲ್ಲಿ ಪಿಎಸ್‌ಐ ರವರುಗಳಾದ ಶ್ರೀಮತಿ ವಿದ್ಯಾ ಕೆಜೆ, ಸಚಿತ್ ಕುಮಾರ್ ಜಿ ಆರ್, ಧನಂಜಯ್ ಡಿ ಹೆಚ್, ಶ್ರೀಮತಿ ಲೀಲಾವತಿ, ಎಎಸ್‌ಐ ವೇದಮೂರ್ತಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಮಧು ಕುಮಾರ್ ಜಿ ಕೆ, ಅಂಗರಾಜು, ಶಶಿಕುಮಾರ್, ಹರೀಶ ಬಿ ಸಿ, ಸ್ವಾಮಿ ಎ ಓ, ಧನಪಾಲ ನಾಯ್ಕ ಮಂಜುನಾಥ್ ಕೆ ಎಸ್‌, ಸತೀಶ್ ಕುಮಾರ್, ಕುಮಾರಪ್ಪ ಎ ಟಿ ಮತ್ತು ಶಿವಕುಮಾರ್ ಕಾರ್ಯನಿರ್ವಹಿಸಿರುತ್ತಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ