IMG-20260315-WA0022_copy_664x299

 

 

ವಿಬಿಜಿ ರಾಮ್ ಜಿ ಯೋಜನೆಯು ಸಮಗ್ರ ಭಾರತದ ಅಭಿವೃದ್ಧಿಯ ಕನಸು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು

ಅವರು ಮೂಡಿಗೆರೆ ಪಟ್ಟಣದ ವಿವಿಧ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ನಂತರ ಲಯನ್ಸ್ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ರಾಮನೆ ಇಲ್ಲ ಎಂದು ಸುಪ್ರೀಂಕೋರ್ಟಿಗೆ ಅಫಿಡೆವಿಟ್ ಹಾಕಿದ್ದ ಕಾಂಗ್ರೆಸ್ ಸರ್ಕಾರದಿಂದ ರಾಮನ ವಿರುದ್ಧ ಅಪಪ್ರಚಾರ ಮಾಡುವುದು ನಿಮ್ಮ ರಕ್ತಗತವಾಗಿದ್ದು. ವಿಬಿಜಿ ರಾಮ್ ಯೋಜನೆಯ ಸತ್ಯವನ್ನು ಅಮಿತ್ ಶಾ ಸದನಕ್ಕೆ ತಿಳಿಸುವಾಗ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಭಾತ್ಯಾಗ ಮಾಡಿದ್ದು. ಮುಖವಿಲ್ಲದ ಅವರ ಅಪಪ್ರಚಾರ ಭಾರತೀಯರಿಗೆ ತಿಳಿದಿದೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರ ನೂರು ದಿನದ ಉದ್ಯೋಗ ನೀಡುತ್ತಿತ್ತು. ಆದರೆ ಇಂದು 125 ದಿನಗಳಿಗೆ ಉದ್ಯೋಗ ನೀಡುತ್ತಿದೆ. ಈ ಹಿಂದೆ ಸಂಬಳ ದಿನಕ್ಕೆ 125 ಆದರೆ ಇಂದು ನರೇಂದ್ರ ಮೋದಿಯವರು 375 ಮಾಡಿದ್ದಾರೆ. ಇಂದು ಉದ್ಯೊಗ ಕಾತ್ರಿ ಖಾತೆಯಲ್ಲಿ ಕೆಲಸ ಮಾಡಿದವರಿಗೆ 42,000 ಹಣ ಖಾತೆಗೆ ಜಮಾವಣೆ ಆಗಲಿದೆ. ಅದು ಈಗ ಕೆಲಸ ಮಾಡಿದ ಏಳು ದಿನದೊಳಗೆ ಹಣಪಾವತಿ ಕಡ್ಡಾಯವಾಗಿದೆ.

ಹೊಸ ಕಾಯ್ದೆ ಬಂದಾಗ ಹೊಸ ಹೆಸರು ಇಡುವುದು ರೂಡಿಗತ. ರಾಜ್ಯ ಸರ್ಕಾರ ಎಸ್ ಸಿ ಎಸ್ ಟಿ ಗಳಿಗೆ ನಿಮ್ಮ ಸರ್ಕಾರದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ತಿಳಿಸಬಲ್ಲಿರಾ. ಪರಿಶಿಷ್ಟ ಜಾತಿ ಪಂಗಡದವರಿಗೆ ಮೀಸಲಿದ್ದ 40 ಸಾವಿರ ಕೋಟಿ ರುಪಾಯಿಗಳನ್ನು ಪಂಗನಾಮ ಹಾಕಿದ್ದೀರಿ. ಜನರಿಗೆ ಗ್ಯಾರಂಟಿ ಕೊಡುವಾಗ ಅಲ್ಪಸಂಖ್ಯಾತ ಅದೇ ರೀತಿ ಬೇರೆ ಬೇರೆ ಇಲಾಖೆಯಿಂದ ಹಣ ವಾಪಸ್ ತಗೆದಿದ್ದೀರಾ. ಆದರೆ ಎಸ್ ಸಿ ಎಸ್ ಟಿ ನಿಗಮದಿಂದ ಹಣವನ್ನು ಏಕೆ ತೆಗೆದಿದ್ದಿರಿ. ಪರಿಶಿಷ್ಟರ ಆರೋಗ್ಯ ಶಿಕ್ಷಣ ಉದ್ಯೋಗ ವಸತಿ ಕುಡಿಯುವ ನೀರಿಗೆ ಇಟ್ಟಿರುವ ಹಣವನ್ನು ಮೋಸ ಮಾಡಿಲ್ಲವೇ ಎಂದ ಇವರು. ಗಾಂಧೀಜಿಯ ಹೆಸರನ್ನು ಐನೂರು ನೋಟಿನಿಂದ ತೆಗೆಯುತ್ತಾರೆ ಎಂದು ಉಪಮುಖ್ಯಮಂತ್ರಿ ಅಪಪ್ರಚಾರ ಮಾಡುತ್ತಿದ್ದು ನಿಮಗೆ ನಾಚಿಕೆಯಾಗಬೇಕು. ಇಂತಹ ಯೋಜನೆಯನ್ನು ಭ್ರಷ್ಟಾಚಾರಕ್ಕಾಗಿ ಕಾಂಗ್ರೆಸ್ ಸರ್ಕಾರ ಜನರ ದಿಕ್ಕ ತಪ್ಪಿಸಲು ಹೊರಟಿದೆ ಎಂದರು

ವಿಧಾನಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ಮಾತನಾಡಿ. ವಿಬಿಜಿ ರಾಮ್ ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ಸಿಗರು ಸುಳ್ಳು ಪ್ರಚಾರವನ್ನು ಮಾಡುತ್ತಿದ್ದು ದೇಶದ ಅಭಿವೃದ್ಧಿ ಹಲವು ಯೋಜನೆಗಳಲ್ಲಿ ವಿಬಿಜಿ ರಾಮ್ ಯೋಜನೆ ಒಂದಾಗಿದ್ದು ದೇಶದ ಅಭಿವೃದ್ಧಿಗೆ ಬಿಜೆಪಿ ಶ್ರಮಿಸುತ್ತಿದ್ದಾರೆ ಕಾಂಗ್ರೆಸ್ ಮೊಣಕೈಗೆ ತುಪ್ಪ ಸವರಿ ಜನರನ್ನ ವಂಚಿಸುತ್ತಿದೆ ಇಂದು ವಿಶ್ವದಲ್ಲೇ ಪೆಟ್ರೋಲ್ ಡೀಸೆಲ್ಗೆ ಹಾಹಾಕಾರ ಉಂಟಾಗಿದ್ದರೆ ಭಾರತದಲ್ಲಿ ಆರಾಮಾಗಿದ್ದೇವೆ ಎಲ್ಪಿಜಿ ಕೃತಕ ಅಭಾವವನ್ನು ರಾಜ್ಯ ಸರ್ಕಾರ ದೃಷ್ಟಿಸಿ ಕೇಂದ್ರದ ವಿರುದ್ಧ ಮಾಡುತ್ತಿದೆ ಎಲ್ಲರಿಗೂ ನನ್ನ ಎಲ್ಲರಿಗೂ ಕೆಲಸ ಎಲ್ಲರ ವಿಕಾಸ ಎಂಬುದು ಕೇಂದ್ರದ ಯೋಜನೆಯಾಗಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಕಾಫಿ ಬೋರ್ಡ್ ಅಧ್ಯಕ್ಷ ದಿನೇಶ್ ದೇವರುಂದ, ಮಂಡಲ ಅಧ್ಯಕ್ಷ ಗಜೇಂದ್ರ, ದೀಪಕ್ ದೊಡ್ಡಯ್ಯ, ಸುಜಿತ್ ಹಳೆಮೂಡಿಗೆರೆ, ಪಂಚಾಕ್ಷರಿ, ಮನೋಜ್ ಹಳೆಕೋಟೆ, ಪ್ರಶಾಂತ, ದನಿಕ್ ಕೊಡದಿಣ್ಣೆ ನಯನ ತಳವಾರ, ಪರಿಕ್ಷಿತ್ ಜಾವಳಿ, ಕಾಮಾಕ್ಷಿ, ಕಮಲಮ್ಮ ತಾರೇಶ್, ರಂಗನಾಥ್, ಸಂದೀಪ್ ಮತ್ತಿತರರಿದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ