ಚಿಕ್ಕಮಗಳೂರು ನಗರದ ಕನಕ ಸಮುದಾಯ ಭವನದ ಕಾಂಪೌಂಡ್ ಅಭಿವೃದ್ದಿಗೆ ಸೋಮವಾರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಐದು ಲಕ್ಷ ರೂ.ಗಳ ಚೆಕ್‍ನ್ನು ಜಿಲ್ಲಾ ಕುರುಬ ಸಮಾಜದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಪುಟ್ಟೇಗೌಡ, ಕಾರ್ಯದರ್ಶಿ ಕೆ.ಎಸ್.ಪುಷ್ಪರಾಜ್, ತಾಲ್ಲೂಕು ಅಧ್ಯಕ್ಷ ಮಣೇನಹಳ್ಳಿ ರಾಜು, ನಿರ್ದೇಶಕರಾದ ಈಶ್ವರ ಹಳ್ಳಿ ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.



