ಅನುಮತಿ ಪಡೆಯದೆ ಆಟ ಆಡುತ್ತಿದ್ದರೆಂಬ ಕಾರಣಕ್ಕೆ 8 ಜನ ವಿದ್ಯಾರ್ಥಿಗಳನ್ನು ವಸತಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಸಿಬ್ಬಂಧಿಗಳು ವಸತಿ ಶಾಲೆಯ ಅಂಡರ್ ಗ್ರೌಂಡ್ ರೂಂ ಗೆ ಕರೆತಂದು ಮನಸ್ಸೋ ಇಚ್ಛೆ ತಳಿಸಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಏಕಲವ್ಯ ವಸತಿ ಶಾಲೆಯಲ್ಲಿ ಶನಿವಾರದಂದು ಬೆಳಕಿಗೆ ಬಂದಿದೆ.
ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ 8 ವಿದ್ಯಾರ್ಥಿಗಳು ಅಟ ಆಡುತ್ತಿದ್ದಾಗ ಕುಪಿತಗೊಂಡ ಪ್ರಿನ್ಸಿಪಾಲ್ ಸತೀಶ್ ತಮ್ಮ ಸಿಬ್ಬಂದಿಗಳೊಂದಿಗೆ ಆಗಮಿಸಿ ಎಂಟು ವಿಧ್ಯಾರ್ಥಿಗಳನ್ನು ವಸತಿ ಶಾಲೆಯ ಅಂಡರ್ ಗ್ರೌಂಡ್‍ನ ಕೊಠಡಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿ ಪ್ಲಾಸ್ಟಿಕ್ ಪೈಪ್ ,ಬೆಲ್ಟ್ ನಿಂದ ಹಲ್ಲೆನಡೆಸುತ್ತಿರುವಾಗ ನೋವು ತಾಳಲಾರದೆ ವಿದ್ಯಾರ್ಥಿಗಳು ತಮ್ಮನ್ನು ಕಾಪಾಡಿ ಎಂದು ರಕ್ಷಣೆಗೆ ಕೂಗಲು ಪ್ರಾರಂಭಿಸಿದಾಗ ವಸತಿ ಶಾಲೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಕೇಳಿಸಿತು. ಗೇಟಿನ ಮುಂಬಾಗಕ್ಕೆ ಬಂದಾಗ ಗೇಟಿಗೆ ಬೀಗ ಹಾಕಿದ್ದು ತಕ್ಷಣವೇ ಗ್ರಾಮಸ್ಥರ ಮೂಲಕ ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಕಾರ್ಯ ಪ್ರವೃತ್ತರಾದ ಪಿಎಸೈ ರೇಣುಕಾ ಹಾಗೂ ಸಿಬ್ಬಂದಿಗಳು ವಸತಿ ಶಾಲೆಯ ಒಳಗೆ ಪ್ರವೇಸಿಸಿದ್ದಾರೆ. ಪೊಲೀಸರನ್ನು ನೋಡಿದ ಸಿಬ್ಬಂದಿಗಳು ಏನು ಆಗೇ ಇಲ್ಲಾ ಎಂಬಂತಿದ್ದಾಗ ತಕ್ಷಣವೇ ಸಿಬ್ಬಂದಿಗಳೊಂದಿಗೆ ಕಟ್ಟಡದ ಅಂಡರ್ ಗ್ರೌಂಡ್ ಹತ್ತಿರ ಹೋದಾಗ ವಿದ್ಯಾರ್ಥಿಗಳ ನರಳಾಟ ಕೇಳಿಸಿದ್ದು ಕೊಠಡಿಯ ಬಾಗಿಲು ತೆಗೆದಾಗ ಎಂಟು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು ಅವರಿಗೆ ಕುಡಿಯಲು ನೀರು ನೀಡಿ ನಂತರ ವಿಚಾರಣೆ ನಡೆಸಿದಾಗ ಪ್ರಿನ್ಸಿಪಲ್ ಸತೀಶ್, ಸಿಬ್ಬಂದಿ ಶುಭಮ್ ಅವರು ಬೆಳಿಗ್ಗೆ ಮೈದಾನದಲ್ಲಿ ಆಟವಾಡುತ್ತಿದ್ದಾಗ ನನ್ನ ಪರ್ಮಿಷನ್ ಇಲ್ಲದೆ ಆಟವಾಡಲು ಅನುಮತಿ ಕೊಟ್ಟವರು ಯಾರು ಬನ್ನಿ ಎಂದು ಕಟ್ಟಡದ ಅಂಡರ್ ಗ್ರೌಂಡ ಕೊಠಡಿಗೆ ಕರೆದೊಯ್ದವರೆ ಬಾಗಿಲು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ . ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬಡ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಿನ್ಸಿಪಲ್ ಸತೀಶ್ ಮತ್ತು ಸಹ ಶಿಕ್ಷಕನ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ವಸತಿ ಶಾಲೆಯ ಗೇಟಿನ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು.



