janapada

 

 

ಬದುಕಿಗೆ ಊರುಗೋಲಾಗಬಲ್ಲ,ದಾರಿಗೆ ದೀಪವಾಗಬಲ್ಲ ಜನಪದ ರತ್ನದ ಬೆಲೆಯನ್ನು ಜನಮನಕ್ಕೆ ತಿಳಿಸಬೇಕಾಗಿದೆ: ಜಾನಪದದ ಅಳಿವು ಉಳಿವು ಕುರಿತು ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡಿದ್ದ ಸಂವಾದದಲ್ಲಿ ಮೊಳಗಿದ ಅಭಿಮತ.

ಒಂದು ಒಳ್ಳೆಯ ನಾಡಿನ ಉಗಮಕ್ಕೆ ಕಾರಣವಾಗಿರುವುದು ಜನಪದ, ಇಂತಹ ಜನಪದರಿಂದ ರಚಿತವಾಗಿರುವ ಸಾಹಿತ್ಯವೇ ಜಾನಪದ ಸಾಹಿತ್ಯ, ಕನ್ನಡದ ಸಾಹಿತ್ಯದ ಪ್ರಮುಖ ಅಂಗವಾಗಿರುವ ಜನಪದ ಸಾಹಿತ್ಯವು ಭಾಷೆಗೆ ಲಿಪಿಕಾಣಗೊಳ್ಳದ ಪೂರ್ವದಲ್ಲಿಯೇ ಜನ್ಮತಾಳಿ ಅದು ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಒಂದು ಬಳುವಳಿಯಂತೆ ಉಳಿದುಕೊಂಡು ಬರುತ್ತಿದೆ, ಆದರೆ ಬದಲಾದ ಆಧುನಿಕ ಕಾಲಘಟ್ಟದಲ್ಲಿ ಜನಪದ ಸಾಹಿತ್ಯವನ್ನು ಕುರಿತು ಮಾತನಾಡುವುದೆಂದರೆ ಅದೊಂದು ಪ್ರತಿಷ್ಠೆ ಎಂಬಂತೆ ಆದರೂ ಕೂಡ ಅನೇಕ ಜನಪದ ಕಲೆಗಳು ದಿನಕಳದಂತೆ ಜನಮನದ ನಡುವಿನಿಂದ ಮರೆಯಾಗುತ್ತಿವೆ, ಈ ಕಾರಣಕ್ಕೆ ಒಂದು ಶ್ರದ್ಧಾಪೂರ್ವಕ ದುಡಿಮೆಯ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಚಿಕ್ಕಮಗಳೂರು ತಾಲೂಕು ಘಟಕ ಸೇವಾ ದೀಕ್ಷೆ ಮತ್ತು ಪದಗ್ರಹಣ ಸಮಾರಂಭವನ್ನು ನಗರದ ಬಸವ ತತ್ವ ಪೀಠದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿತ್ತು, ಈ ಸಮಯದಲ್ಲಿ ಕಾರ್ಯಕ್ರಮದ ಅಂಗವಾಗಿ ಜಾನಪದ ಅಳಿವು ಉಳಿವು ಕುರಿತು ನಾಡಿನ ಪ್ರಾಜ್ಞರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಪ್ರಕೃತಿಯ ಮದ್ಯೆ, ಹೊಲಗದ್ದೆಗಳ ನಡುವೆ, ದುಡಿಮೆಯ ಜೊತೆ ಜೊತೆಯಲ್ಲಿ ಬೆವರಿನ ಹನಿಯ ಲಯದೊಂದಿಗೆ ಜನಪದರ ಮದ್ಯೆ ರೂಪಗೊಂಡ ಜಾನಪದವು ಈ ನೆಲದ ರತ್ನ ಭಂಡಾರವಾಗಿದೆ.

ಈ ಪ್ರಕೃತಿಯು ನಮಗೆ ಕಂಠವನ್ನು ಕೊಟ್ಟಿದ್ದು ಮಾತನಾಡುವುದಕ್ಕೆ ಮಾತ್ರ, ಆದರೆ ಜನಪದರು ಈ ಕಂಠವನ್ನು ಸಾಧು ಗೊಳಿಸಿ, ಮೆದ್ದು ಮೃದು ಮಾಡಿ ತಿದ್ದಿ ತಿಡಿ ಅರಚುವ ಕಂಠದೊಳಗೆ ಲಯಬದ್ಧತೆಯೊಂದಿಗೆ ಹಾಡನ್ನು ಹುಟ್ಟಿಸಿರುವ ಹೆಗ್ಗಳಿಕೆ ನಮ್ಮ ಜನಪದರದ್ದಾಗಿದೆ.

ಆಧುನಿಕತೆಯ ಪ್ರಭಾವದಿಂದ ಹಳ್ಳಿಗಳು ತೆಳುವಾಗುತ್ತಾ, ಮನುಷ್ಯ ಸಂಬಂಧಗಳ ಗಾಡ ಪ್ರೀತಿಯು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ,ಜಗತ್ತಿನ ಎಲ್ಲಾ ಭಾಷೆಗಳಿಗೂ ತಾಯಿಬೇರಿನಂತಿರುವ ಈ ಜನಪದ ಕಲೆ ಸಾಹಿತ್ಯ ಸಂಸ್ಕೃತಿಯು ಸೊರಗುತ್ತಿರುವ ಕಾರಣ ಜನಪದರ ಬದುಕು ಮತ್ತು ಜಾನಪದ ಸಾಹಿತ್ಯದೊಳಗಿರುವ ಸಿರಿಸಂಪದದ ಸೊಗಡನ್ನು ಕುರಿತು ನಗಾರಿ ನುಡಿಸಿ ಸಂವಾದದ ಮೂಲಕ ಜಾನಪದದ ಅಳಿವು ಉಳಿವು ಕುರಿತು ಮಾತನಾಡಲಾಯಿತು.

ಚಿಕ್ಕಮಗಳೂರಿನ ಬಸವತತ್ವ ಪೀಠದ ಪೀಠಾಧ್ಯಕ್ಷರಾದ ಡಾ.ಬಸವ ಮರುಳಸಿದ್ದಸ್ವಾಮೀಜಿಗಳು ಈ ಸಮಾರಂಭದ ದಿವ್ಯ ಸಾನಿಧ್ಯದವನ್ನು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಹುಲ್ಲಳ್ಳಿ ಅವರು ಅಧ್ಯಕ್ಷತೆಯನ್ನು, ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಗೌತಮ ಎಂ ಎ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಹಿತಿ ಹಾಗೂ ಉಪನ್ಯಾಸಕ ಕಲ್ಕಟ್ಟೆ ನಾಗರಾಜ ರಾವ್, ಐಐಪಿ ಪ್ರಕಾಶನದ ಮುಖ್ಯಸ್ಥ ನಂಜೇಶ್ ಬೆಣ್ಣೂರು, ವನ್ಯಜೀವಿ ಛಾಯಾಗ್ರಹಕ ಹಿರೇಗೌಜ ಶಿವಕುಮಾರ್, ಜನಪದ ಕಲಾವಿದ ಡಾ. ವಿಜಯ್ ಜಾನಪದ, ರಂಗಭೂಮಿ ನಟ ನಿರ್ದೇಶಕರಾದ ಪ್ರತಿಭಾ ನಂದಕುಮಾರ್ ಮತ್ತು ಎಂ ವಿ ಚಂದ್ರಮೂರ್ತಿ ರವರು ಸಂವಾದದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.

ಡಿ.ಎಂ.ಮಂಜುನಾಥಸ್ವಾಮಿ ಈ ಸಂವಾದವನ್ನು ನಡೆಸಿಕೊಟ್ಟರು.

ವೇದಿಕೆಯಲ್ಲಿ ಮಾಧ್ಯಮ ಪ್ರತಿಷ್ಠಾನದ ಮುಖ್ಯಸ್ಥರಾದ ಪ್ರಭುಲಿಂಗ ಶಾಸ್ತ್ರಿ, ಐಸಿರಿ ಫೌಂಡೇಶನ್ ಅಧ್ಯಕ್ಷರಾದ ರೋಹನ್ ಭಾರ್ಗವಪುರಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಳೇಬೀಡು ಬಸವರಾಜ್, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಚಾಲಕಿ ಅಜ್ಜಂಪುರ ಗಾಯತ್ರಮ್ಮ,ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಜಿ ಬಿ ಸುರೇಶ್ ಮತ್ತು ತಾಲೂಕು ಘಟಕದ ಅಧ್ಯಕ್ಷ ಸಚಿನ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.

ವಕೀಲೆ ಆಶಾ ಸ್ವಾಗತಿಸಿ, ಸಮಾಜ ಸೇವಕಿ ಪ್ರಶಾಂತಿ ಡಿ, ಕುವೆಲೊ ಅವರು ವಂದಿಸಿದರು.

ಚಿಕ್ಕಮಗಳೂರಿನ ಹುಲಿ ಬಂಗಾರಣ್ಣ ತಂಡದವರಿಂದ ಹುಲಿವೇಷ ಕುಣಿತ ಮತ್ತು ಗಾಂತವ್ಯ ನೃತ್ಯ ಕಲಾ ಸಂಘ ಅಕಾಡೆಮಿ ಕಲಾವಿದೆಯರಿಂದ ಜಾನಪದ ನೃತ್ಯ ಪ್ರದರ್ಶನವು ಈ ಸಂದರ್ಭದಲ್ಲಿ ನಡೆಯಿತು.
•••••••••••
ಡಿ ಎಂ ಮಂಜುನಾಥಸ್ವಾಮಿ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ