ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಭ್ರಷ್ಟಚಾರ ಮತ್ತು ಸಾರ್ವಜನಿಕ ಆರೋಗ್ಯ ಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ದುರ್ಬಳಕೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಲೀಸಾ ಫೌಂಡೇಷನ್ ಪದಾಧಿಕಾರಿಗಳು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಪೌಂಢೇಷನ್ ಸಂಸ್ಥಾಪಕಿ ಸಂಗೀತಾ ಪ್ರಸಾದ್ ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಸ್ಥಿತಿಗತಿಗಳನ್ನು ಗಮನಿಸಿದಾಗ, ಕೆಲವು ಸಣ್ಣಪುಟ್ಟ ಬದಲಾವಣೆಗಳು ಪ್ರಯತ್ನ ಕಂಡಿವೆ ಹೊರತು ಮೂಲ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ ಎಂದು ಹೇಳಿದರು.
ರೋಗಿಗಳು ಮತ್ತು ಸಾರ್ವಜನಿಕರಿಂದ ಮೊಬೈಲ್‍ಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು ಕಾನೂನು ಬಾಹಿರವಾಗಿದೆ. ಆಸ್ಪತ್ರೆಯ ಒಳಗಿನ ಅಸಮರ್ಪಕತೆಗಳನ್ನು ದಾಖಲಿಸಲು ಅವಕಾಶ ನೀಡದೇ ತಡೆಯಲಾಗುತ್ತಿದೆ. ಇದು ಭ್ರಷ್ಟಾಚಾರವನ್ನು ಮುಚ್ಚಿಡುವ ಪ್ರಯತ್ನವಾಗಿದೆ ಎಂದು ದೂರಿದರು.
ಕುಡಿಯುವ ನೀರು ಹಾಗೂ ಆಸ್ಪತ್ರೆಯ ಸ್ವಚ್ಚತೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿಯಿದೆ. ಇದು ರೋಗಿಗಳಿಗೆ ಹೊಸ ರೋಗಗಳ ಅಪಾಯವನ್ನುಂಟು ಮಾಡಲಿದೆ. ವಾರ್ಡ್‍ಗಳಿಗೆ ಆಹಾರ ತಲುಪಿಸುವ ವ್ಯವಸ್ಥೆಯಿಲ್ಲ. ಆಹಾರದಲ್ಲಿ ವಿಳಂಭ ಅಥವಾ ನಿರಾಕರಣೆ, ಮೂರು ಹೊತ್ತು ಬದಲು ಎರಡು ಹೊತ್ತು, ಪೌಷ್ಟಿಕಾಂಶಗಳ ಕೊರತೆಯಿದೆ. ಸರ್ಕಾರದ ಅನುದಾನವು ಇಲ್ಲಿ ದುರುಪಯೋಗವಾದ ಅನುಮಾನವಿದೆ ಎಂದರು.
ಸರ್ಕಾರಿ ವೈದ್ಯರು ಖಾಸಗೀ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸುವುದು. ಸರ್ಕಾರಿ ಸೇವೆಯಲ್ಲಿ ನಿ ರ್ಲಕ್ಷ್ಯ, ಖಾಸಗೀಯಲ್ಲಿ ಉತ್ತಮ ಸೇವೆ, ಶಸ್ತ್ರಚಿಕಿತ್ಸೆಗೆ ಲಕ್ಷದವರೆಗೆ ಹಣ ವಸೂಲಿಯಿಂದ ನೇರವಾಗಿ ಬಡ ಜನರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂರ್ಭದಲ್ಲಿ ಲೀಸ್ ಪೌಂಡೇಷನ್ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು



