vmpm

 

 

ಬಣಕಲ್ ಜೆಸಿಐ ವಿಸ್ಮಯ ಹಾಗೂ  ವಿ ಎಂ ಪಿ ಎಂ ಸೇವಾ ಟ್ರಸ್ಟ್ ಮೂಡಿಗೆರೆ  ಮತ್ತು  ಗ್ರಾಮ ಪಂಚಾಯಿತಿ ಬಣಕಲ್ ಇವರ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಬಣಕಲ್  ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜರೀನ  ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಮಾತನಾಡಿ’ನೀರು ಅತ್ಯಮೂಲ್ಯವಾದ ಸಂಪತ್ತು ಈ ಸಂಪತ್ತನ್ನು ನಾವೆಲ್ಲರೂ ಹಿತವಾಗಿ ಬಳಸಿ  ಮುಂದಿನ ಪೀಳಿಗೆಗೆ  ಉಳಿಸಿಕೊಳ್ಳಬೇಕು.ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಬೇಕು’ ಎಂದರು. ನವೀನ್ ಆನೆದಿಬ್ಬ ಮಾತನಾಡಿ ‘1993 ಮಾರ್ಚ್ 22ರಿಂದ ವಿಶ್ವ ಜಲ ದಿನವನ್ನು ಆಚರಣೆ ಮಾಡಲಾಗುತ್ತಿದೆ. ವಿಶ್ವ ಜಲ ದಿನದ ಮೂಲಕ ಅದರ ಉದ್ದೇಶ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಹಾಗೂ ನೀರು ಪೋಲಾಗುವುದನ್ನು ತಡೆಯುವುದು ಮತ್ತು ಭವಿಷ್ಯಕ್ಕೆ ನೀರನ್ನು ಉಳಿಸಿಕೊಳ್ಳುವುದು  ಎಲ್ಲಾ ದೇಶಗಳು ಈ ಸಂಬಂಧ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿವೆ’ಎಂದರು

ಸಾಹಿತಿ ಎಂ.ಎಸ್. ನಾಗರಾಜ್  ಮಾತನಾಡಿ ‘ಕಾರ್ಯಕ್ರಮಗಳಲ್ಲಿ ಮತ್ತು ಮದುವೆ ಸಮಾರಂಭಗಳಲ್ಲಿ ನೀರಿನ ಬಾಟಲೀ ರೂಡಿಯಾಗಿದ್ದು ನೀರನ್ನು ಪೂರ್ತಿಯಾಗಿ ಬಳಸಿಕೊಳ್ಳದೆ ಅರ್ಧಂಬರ್ಧ ಬಾಟಲ್ ಗಳಲ್ಲಿ ಉಳಿಸಿ ನೀರನ್ನು ಪೋಲು ಮಾಡಲಾಗುತ್ತಿದೆ. ಹಾಗೆಯೇ ನದಿ ಮೂಲಗಳಲಿ ಕಲುಷಿತ ವಾತಾವರಣ ನಿರ್ಮಾಣ ವಾಗಿದೆ. ಪ್ಲಾಸ್ಟಿಕ್ ಬಾಟಲಿ ಹಾಗೂ ಇನ್ನಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ನೀರು ಕಲುಷಿತಗೊಳ್ಳುತ್ತಿದೆ. ಜನರಲ್ಲಿ ಪರಿಸರ ನೈರ್ಮಲ್ಯದ ಹೆಚ್ಚು ಜಾಗೃತಿ ಹೆಚ್ಚು  ಮೂಡಿಸಿ ನದಿ ಮೂಲಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು. ನದಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿದಲ್ಲಿ ಮುಂದಿನ ಭವಿಷ್ಯಕ್ಕೆ ನೀರನ್ನು ಉಳಿಸಿಕೊಳ್ಳಬಹುದು’ ಎಂದರು. ಬಣಕಲ್ ಜೆಸಿಐ ವಿಸ್ಮಯ ಅಧ್ಯಕ್ಷ ರಂಜಿತ್ ಮಾತನಾಡಿ ‘ನೀರು ಪ್ರತಿ ಜೀವಿ ಸಂಕುಲಕ್ಕೂ ಅತ್ಯಮೂಲ್ಯವಾದ ಸಂಪತ್ತು ನೀರಿಲ್ಲದೆ ಜೀವಿಸಲು ಸಾಧ್ಯವಿಲ್ಲ. ಮಲೆನಾಡಿನಲ್ಲೂ ನೀರಿಗೆ ಹಾಹಾಕಾರ ಪರಿಸ್ಥಿತಿ ಎದುರಿಸುತ್ತಿರುವುದು ವಿಪರ್ಯಾಸ ಎಂದರು.

ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ ಅರುಣ್  ಲೋಬೊ ಮಾತನಾಡಿ ‘ಮನುಷ್ಯನ ದೇಹದಲ್ಲಿ ಶೇ 70 ಪ್ರತಿಶತ ನೀರಿದೇ ಹಾಗೆಯೇ ರಕ್ತದ ಕಣದಲ್ಲೂ ಹಾಗೂ ಪ್ರತಿಯೊಂದು  ಅಂಗಗಳಿಗೂ ನೀರು  ಅತ್ಯವಶ್ಯಕ ನೀರನ್ನು ಹಿತವಾಗಿ ಬಳಸಿ ಸಂರಕ್ಷಿಸುವುದು  ನಮ್ಮೆಲ್ಲರ ಕರ್ತವ್ಯ’ ಎಂದರು.

ಬಣಕಲ್ ಜೆ ಸಿ ಐ ಸ್ಥಾಪಕ ಅಧ್ಯಕ್ಷ ಸುರೇಶ್ ಎಸ್.ಶೆಟ್ಟಿ ಮಾತನಾಡಿ ಹೇಮಾವತಿ ನದಿ ಮೂಲ ನಮ್ಮ ಒಡಲಲ್ಲಿ ಇರುವುದು ನಮ್ಮೆಲ್ಲರ ಅದೃಷ್ಟ. ಸಾವಿರಾರು ಜನರ ರೈತರ ಬದುಕನ್ನು ಹಸನ್ನು ಮಾಡಿ ಕೃಷಿ ಚಟುವಟಿಕೆಯ ಮೂಲ ಹೇಮಾವತಿ ನದಿ ಈ ನದಿಯನ್ನು ನಾವೆಲ್ಲರೂ ಸ್ವಚ್ಛವಾಗಿಟ್ಟು ಕೊಳ್ಳಬೇಕು’ ಎಂದರು

ಕಾರ್ಯಕ್ರಮದಲ್ಲಿ ಬಣಕಲ್ ಮತ್ತು ಬಿ. ಹೊಸಳ್ಳಿ ನೀರು ಘಂಟಿಗಳಿಗೆ  ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜನಪದ ರಾಷ್ಟ್ರ ಮಟ್ಟದ ಗಾಯಕ ಪ್ರೇಮ್ ಕಡುವಳ್ಳಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ ಎಂ ಪಿ ಎಂ ಟ್ರಸ್ಟ್ ನ ಅಧ್ಯಕ್ಷ ವಿ.ಪಿ ನಾರಾಯಣ ವಹಿಸಿದ್ದರು.   ವಿ ಎಂ ಪಿ ಎಂ ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ಭಾಗ್ಯ ನಾರಾಯಣ, ಸಹ ಕಾರ್ಯದಶಿ ರಾಜೇಶ್ ಕೆ.ಎನ್,  ಇಂಚರ, ಶಬರಿಶ್ರೀನಾಥ್,ತರುವೆ ಗ್ರಾ.ಪಂ.ಅಧ್ಯಕ್ಷ ಎ.ಎನ್.ರಘು,ಸುಶೀಲ, ಕೆ.ಆರ್.ಗೀತಾ, ಕಸಾಪ  ಅಧ್ಯಕ್ಷ ಲೋಕೇಶ್ ಬೆಟ್ಟಗೆರೆ, ವಿಕ್ರಂ ಗೌಡ, ಸವಿತಾ ಸಮಾಜದ ಹರೀಶ್, ಎಚ್ ವಿ ಮಹೇಶ್, ಕವಿತಾ ಲೋಕೇಶ್ ಇದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ