gari 1

 

 

ಮೂಡಿಗೆರೆ ಪಟ್ಟಣದ ಸಂತ ಅಂತೋಣಿ ಚರ್ಚ್ ಸೇರಿದಂತೆ ಬಣಕಲ್,ಕೊಟ್ಟಿಗೆಹಾರ, ಕೆಳಗೂರು,ಕೂವೆ,ಹಿರೇಬೈಲ್,ಕಸ್ಕೇಬೈಲ್ ವಿವಿಧ ಚರ್ಚುಗಳಲ್ಲಿ ಕ್ರೈಸ್ತರು ಗರಿಗಳ ಭಾನುವಾರ ಆಚರಿಸಿದರು.

ಯೇಸುಕ್ರಿಸ್ತರು ಬೆಥಾನಿಯದಿಂದ ದೇವನಗರಿ ಎಂದೇ ಹೇಳಲಾದ ಜೆರುಸಲೇಂಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು ಓಲಿವ್ ಮರದ ಗರಿಗಳನ್ನು ಹಿಡಿದು ಕ್ರಿಸ್ತ ಯೇಸುವನ್ನು ವೈಭವದಿಂದ ಸ್ವಾಗತಿಸಿ ಬರಮಾಡಿಕೊಂಡಿದ್ದರು ಎಂಬ ಬೈಬಲ್ ಉಲ್ಲೇಖದಂತೆ ಪ್ರತಿ ಚರ್ಚುಗಳಲ್ಲಿ ಇದರ ಸ್ಮರಣಾರ್ಥವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರಿಸ್ತರನ್ನು ರಾಜರಂತೆ ವೈಭವಿಸಲು ಭಾನುವಾರದ ಪೂಜೆಯಲ್ಲಿ ಕ್ರೈಸ್ತ ಭಕ್ತಾದಿಗಳು ಪಾಲ್ಗೊಂಡರು.

ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚಿನಲ್ಲಿ ಧರ್ಮಗುರು  ಫಾ.ವಿಲಿಯಂ ಬರ್ನಾರ್ಡ್ ಅವರು ಬೈಬಲ್ ಪಠಿಸಿ ಏಸು ಕ್ರಿಸ್ತರು ಶಿಷ್ಯರ ಪಾದ ತೊಳೆದು ಮುತ್ತಿಟ್ಟು  ಸರಳತೆ ಮೆರಿರುವ ಸನ್ನೀವೇಶ ಹಾಗೂ ಯೇಸುಕ್ರಿಸ್ತರ ಶಿಲುಬೆಯ ಮರಣ ವೃತ್ತಾಂತವನ್ನು ವಿವರವಾಗಿ ವಾಚಿಸಿ ಯೇಸು ಕ್ರಿಸ್ತರು ನಮ್ಮ ಪಾಪಗಳಿಗಾಗಿ ಶಿಲುಭೆಯ ಮೇಲೆ ಮರಣ ಹೊಂದಿದರು.

ಹೀಗಾಗಿ ಕ್ರೈಸ್ತರಿಗೆ ಈ ವಾರ ಪವಿತ್ರ ಸಪ್ತಾಹದ ದಿನವಾಗಿದ್ದು ಗುಡ್ ಪ್ರೈಡೆಯಂದು ನಾವೆಲ್ಲರೂ ದೇಹ ದಂಡನೆ ಮಾಡಿ ಉಪವಾಸ ವೃತ ಕೈಗೊಂಡು .ಪ್ರಭು ಕ್ರಿಸ್ತರ ಶಿಲುಭೆಯ ಮರಣ ನಮಗೆ ಪ್ರೀತಿಯ ಸಂದೇಶವಾಗಿದೆ. ಯೇಸುಕ್ರಿಸ್ತರು ಗುಡ್ ಪ್ರೈಡೆಯಂದು (ಶುಕ್ರವಾರ) ಮರಣ ಹೊಂದಿ ಭಾನುವಾರ ಪುನರುತ್ತಾನರಾಗುತ್ತಾರೆಂಬ ಬೈಬಲ್ ಉಲ್ಲೇಖದಿಂದ ನಮಗೆ ಸತ್ತರೂ ಪುನರುತ್ಥಾನವಿದೆ ಎಂಬ ಧೃಢ ವಿಶ್ವಾಸವನ್ನು ಯೇಸು ಕ್ರಿಸ್ತರು ತೋರಿಸಿ ಕೊಟ್ಟಿದ್ದಾರೆ.ಸಮಾಜದಲ್ಲಿ ನಾವು ಪಾಪ ಮಾಡದೇ ದಾನ ದರ್ಮಗಳ ಮೂಲಕ ಪರಿಶುದ್ಧ ಹೃದಯ ಹೊಂದಿ ಜೀವಿಸಬೇಕು ಎಂದು ಗುರುಗಳು ಸಂದೇಶ ನೀಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ