ಸಕಲೇಶಪುರ ಮೂಡಿಗೆರೆ ಗಡಿಭಾಗದ ಮರಗುಂದ ಗ್ರಾಮದ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರಿ ವೇಡಿಂಗ್ ಹೆಸರಿನಲ್ಲಿ ಅನುಚಿತವಾಗಿ ನಡೆದುಕೊಂಡ ಛಾಯಾಗ್ರಾಹಕರ ಮೇಲೆ ಗ್ರಾಮದ ಭಕ್ತರು ಹಲ್ಲೆ ನಡೆಸಿದರು ಎಂದು ಇಬ್ಬರನ್ನು ಬಂಧಿಸಿರುವ ಪ್ರಕರಣಕ್ಕೆ ಭಾನುವಾರ ಗ್ರಾಮಸ್ಥರು ದೇವಸ್ಥಾನ ಮಂಡಳಿಯವರು ಮತ್ತು ಪ್ರಶಾಂತ್ ಹಾಗೂ ರಕ್ಷಯ್ ಕುಟುಂಬದವರು, ಭಕ್ತರು ದೇವಸ್ಥಾನದ ಅವರಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದರು.
ಈ ಸಂದರ್ಭದಲ್ಲಿ ಹುರುಡಿ ವಿಕ್ರಂ ಮಾತನಾಡಿ ಮಲೆನಾಡಿನ ಹೊಯ್ಸಳ ರ ಕಾಲದಲ್ಲಿ ಮಲೆನಾಡಿನ ಜನರನ್ನು ಕಾಯಲು 6 ಬೆಟ್ಟದಮೇಲೆ ಇರುವ ಭೈರವರಲ್ಲಿ ಮರಗುಂದ ಬೆಟ್ಟದ ಭೈರವೇಶ್ವರ ದೇವಸ್ಥಾನ ಒಂದು. ನೂರಾರು ವರ್ಷಗಳಿಂದ ಶ್ರದ್ದಾ ಕೇಂದ್ರವಾಗಿ ಇಲ್ಲಿನ ಜನರ ಮನೇ ದೇವರಾಗಿದೆ ಇಲ್ಲಿ ಪೂಜೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇತ್ತು. ಆದರೆ ಇತೀಚೆಗೆ ಒಂದು ಪ್ರೀ ವೆಡಿಂಗ್ ಎಂಬ ಮಾಫಿಯ ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳುಮಾಡುತ್ತಿದೆ. ಮೊನ್ನೆಯೂ ಸಹ ಇಲ್ಲಿ ಅನುಚಿತವಾಗಿ ವರ್ತಿಸುತಿದ್ದ ಛಾಯಾಗ್ರಾಹಕರನ್ನು ಪಾದರಕ್ಷೆ ದೇವಸ್ಥಾನದ ಒಳಾಂಗಣದಲ್ಲಿ ಹಾಕಬಾರದು, ದೇವಾಸ್ಥಾನದ ಗೋಡೆಯ ಮೇಲೆ ಕಾಲಿಡಬಾರದು ಎಂದು ದೇವಸ್ಥಾನ ಕ್ಕೆ ಬಂದಿದ್ದ ಭಕ್ತ ಪ್ರಶಾಂತ್ ಮತ್ತು ಇತರ ಭಕ್ತರು ಹೇಳಿದ್ದನ್ನೇ ಕೇಳದೆ ಗೂಂಡ ವರ್ತನೆ ತೋರಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

ಮಲೆನಾಡಿನ ಯಾವುದೇ ದೇವಸ್ಥಾನದಲ್ಲಿ ಪೋಟೋ ಶೂಟ್ ನಿರ್ಬಂಧಿಸಬೇಕು ಅಲ್ಲದೆ ಮಗಜಹಳ್ಳಿ ಹತ್ತಿರ ಹರಿಯುವ ನದಿ ಕೆಳಬಾಗದಲ್ಲಿ ಎಂಟು ಗ್ರಾಮಗಳ ಜನ ಅದೇ ನೀರು ಕುಡಿಯುತ್ತಾರೆ ಪ್ರವಾಸಿಗರು ತಮ್ಮ ಬಟ್ಟೆ ಇನ್ನಿತರ ವಸ್ತುಗಳನ್ನು ನದಿಗೆ ಬಿಸಾಕಿ ನೀರನ್ನು ಕಲುಷಿತಗೊಳಿಸುತ್ತಿದ್ದಾರೆ ತಕ್ಷಣವೇ ಅಲ್ಲಿ ಇನ್ನೊಂದು ಅನಾಹುತ ಆಗೋ ಮುನ್ನ ಜಿಲ್ಲಾ ತಾಲ್ಲೂಕು ಆಡಳಿತ ಗಮನ ಹರಿಸಬೇಕು. ಧರ್ಮದ ರಕ್ಷಣೆಗೆ ಮುಂದಾಗಿ ಕೇಸ್ ಹಾಕಿಸಿಕೊಂಡಿರುವ ಪ್ರಶಾಂತ್ ಮತ್ತು ಇತರರನ್ನು ಮೆರವಣಿಗಯಲ್ಲಿ ಕರೆತರುತ್ತೇವೆ ಅವರ ಕುಟುಂಬದವರು ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.
ವಿನೋದ್ ಕಣಚೂರು ಮಾತನಾಡಿ ನಾವೆಲ್ಲ ಸನಾತನಿಗಳು. ನಮಗೆ ಕಷ್ಟ ಸುಖ ಅಂದಾಗೆಲ್ಲ ನಾವು ಬರುವುದು ದೇವಸ್ಥಾನಕ್ಕೆ. ಮೊನ್ನೆಯೂ ಪ್ರಶಾಂತ್ ಕುಟುಂಬ ದೇವಸ್ಥಾನಕ್ಕೆ ಬಂದಿರುವಾಗ ಇಲ್ಲಿ ಬೇಕಾಬಿಟ್ಟೆ ಚಿತ್ರೀಕರಿಸುತ್ತಿರಿವುದನ್ನು ಪ್ರಶ್ನಿಸಿದ್ದಾರೆ, ಸದಾ ಶಾಂತ ಸ್ವಾಭವದ ವ್ಯಕ್ತಿ ಪ್ರಶಾಂತ್‍ಗೆ ಕುಟುಂಬದವರ ಎದುರಿಗೆ ಧಮ್ಕಿ ಹಾಕಿ ಪ್ರಚೋದನೆ ನೀಡಿದ ಛಾಯಾಗ್ರಾಹಕರನ್ನು ಈವರಗೇ ಬಂದಿಸಿಲ್ಲ ಎಂದು ಹೇಳಿದರು, ಹಾಗೆ ಯೂಟ್ಯೂಬ್ ಫೇಸ್ ಬುಕ್ ನಲ್ಲಿ ಇವರನ್ನೆಲ್ಲ ವಸೂಲಿಗಾರು ಗೂಂಡಗಳು ಎಂದು ಬಿಂಬಿಸುತಿದ್ದಾರೆ. ಯಾರ ಮೇಲೂ ಇಲ್ಲಿಯವರೆಗೆ ಒಂದೇ ಒಂದು ಕೇಸ್ ಇಲ್ಲ. ಅಲ್ಲದೇ ಇದು ನಮ್ಮೆಲ್ಲರ ಶ್ರದ್ದಾ ಕೇಂದ್ರ ಇನ್ನು ಮೇಲೆ ಇಲ್ಲಿ ಯಾವುದೇ ಚಿತ್ರೀಕರಣಕ್ಕೆ ಅವಕಾಶ ದೇವಸ್ಥಾನ ಆಡಳಿತ ಮಂಡಳಿ ಗ್ರಾಮ ಪಂಚಾಯಿತಿ ತಾಲ್ಲೂಕ್ ಆಡಳಿತ ನೀಡಬಾರದು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಸಕಲೇಶಪುರ ರಘು, ಲೋಕೇಶ್ ದೇವಲಕೆರೆ, ಬ್ರೀಜೇಶ್ ಕಡಿದಾಳು, ಅವರೇಕಾಡು ಪೃಥ್ವಿ, ದೇವಾಲಯದ ಅರ್ಚಕರು ಸೇರಿದಂತೆ ಅನೇಕರು ಮಾತನಾಡಿದರು.

ಮರಗುಂದ ಮೇಕನಗದ್ದೆ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ನೂರಾರು ಜನರು, ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಸೇರಿದ್ದರು.




