ಮೂಡಿಗೆರೆ ಪಟ್ಟಣದ ಬಾಲಿಕಾ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಿಸ್ರಿಯಾ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 591 ಅಂಕ ಗಳಿಸಿ ಶೇ.98.50 ಫಲಿತಾಂಶ ಪಡೆದಿದ್ದಾರೆ.
ಮೂಡಿಗೆರೆ ಮಾರ್ಕೆಟ್ ರಸ್ತೆ ನಿವಾಸಿಗಳಾಗಿರುವ ಇವರ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಮಗಳನ್ನು ಓದಿಸುತ್ತಿದ್ದು, ಉತ್ತಮ ಫಲಿತಾಂಶದಿಂದ ತಂದೆ ಅಬೂಬಕರ್ ತಾಯಿ ಜುನೈದಾ ಹರ್ಷ ವ್ಯಕ್ತಪಡಿಸಿದ್ದಾರೆ.
ಬಾಲಿಕಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಪಡೆದಿದೆ.
ಕಾಲೇಜಿನ ಫಲಿತಾಂಶದ ವಿವರ ಹೀಗಿದೆ.




