2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಹರೀಶ್ ಪಿಯು ಕಾಲೇಜು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ಪಡೆದಿದೆ.
ವಿಜ್ಞಾನ ವಿಭಾಗದಲ್ಲಿ 76, ವಾಣಿಜ್ಯ ವಿಭಾಗದಲ್ಲಿ 22 ಒಟ್ಟು 98 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.100 ಫಲಿತಾಂಶ ದಾಖಲಾಗಿದೆ.
ವಿಜ್ಞಾನ ವಿಭಾಗದಲ್ಲಿ ವಿ.ಮೌಲ್ಯ 590 ಅಂಕ ಗಳಿಸಿ ರಾಜ್ಯಕ್ಕೆ 11ನೇ ರ್ಯಾಂಕ್, ತಾಲೂಕಿಗೆ ಟಾಪರ್ ಆಗಿದ್ದಾರೆ. ಎನ್.ಆರ್.ಮೋನಿಷಾ 584 ಎ.ಎಂ.ಅಧಿಥಿ 581 ಎಸ್.ಸಂಯೋಗ್ 581ಅಂಕ , ತ್ರಿಶಾ 580 ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಮೊಹಮ್ಮದ್ ಅಯ್ಮಾನ್ ಹಸನ್ 592 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿದ್ದು, ಮೊಹಮ್ಮದ್ ರಫೀದ್ 583 ಅಂಕ, ಫಾತೀಮಾ ಶಫಾ 580 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



