ವೀ ವಿಸ್ಡಮ್ ಶಾಲೆ ವಿದ್ಯಾನಗರ ಮೂಡಿಗೆರೆ ಇಲ್ಲಿ ಚಿಣ್ಣರಿಗಾಗಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಇತ್ತೀಚೆಗೆ ನೆರವೇರಿತು.
ಈ ಸಂದರ್ಭದಲ್ಲಿ ಬಿ.ಜಿ.ಎಸ್, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹೇಮಾ ಸಿಂಧೂರ 99.17 ಶೇಕಡ ತೆಗೆದು ತಾಲೂಕಿಗೆ ಕೀರ್ತಿ ತಂದಿರುತ್ತಾರೆ ಇವರಿಗೆ ಗೌರವವನ್ನು ವಿಸ್ಡಂ ಶಾಲೆಯ ಸಮಿತಿಯಿಂದ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿಸ್ಡಂ ಶಾಲೆಯ ಅಧ್ಯಕ್ಷರು ಕೆ ವಿ ರವಿರಾಜ್, ಆಡಳಿತಗಾರರು ರೇಖಾ ರವಿರಾಜ್, ಕಾರ್ಯದರ್ಶಿ ಕಮಲಾಕ್ಷಿ ದಿವಾಕರ್ , ರಾಷ್ಟ್ರೋತ್ಥನ ಶಾಲೆಯ ಶಿಕ್ಷಕಿ ಮಮತ, ಹೇಮಾ ಸಿಂಧೂರ ಪೋಷಕರು, ಶಾಲೆಯ ಸಿಬ್ಬಂದಿ ವರ್ಗ ಹಾಗೂ ಎಲ್ಲಾ ಪೋಷಕರು ಭಾಗವಹಿಸಿದ್ದರು.
10 ದಿನ ಬೇಸಿಗೆ ಶಿಬಿರದಲ್ಲಿ ಮಕ್ಕಳು ಖುಷಿಯಿಂದ ಭಾಗವಹಿಸಿ ಅವರ ಅನಿಸಿಕೆಗಳನ್ನು ಹಂಚಿಕೊಂಡರು.




