suddi-7(A)

 

 

ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದಲ್ಲಿ ಗಾಯಗೊಂಡ ಒಂಟಿ ಕಾಡಾನೆ  ಗ್ರಾಮಕ್ಕೆ ನುಗ್ಗಿದ ಹಲವು ತೋಟಗಳಿಗೆ ಅಪಾರ ಹಾನಿ ಉಂಟಾದ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಗ್ರಾಮ ಸುತ್ತಮುತ್ತ ಸಂಚರಿಸುತ್ತಿದ್ದ ಈ ಕಾಡಾನೆ, ಗಾಯಗೊಂಡ ಸ್ಥಿತಿಯಲ್ಲೇ ಗ್ರಾಮಕ್ಕೆ ನುಗ್ಗಿ ಆತಂಕ ಸೃಷ್ಟಿಸಿದೆ.

ಗುರುವಾರ ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಗೆ ಶಿವಣ್ಣ ಅವರ ಉದಯಗಿರಿ ಹೋಂಸ್ಟೇ ಆವರಣಕ್ಕೆ ಪ್ರವೇಶಿಸಿದ ಕಾಡಾನೆ, ಹಲವು ಗಂಟೆಗಳ ಕಾಲ ಅಲ್ಲೇ ತಂಗಿ ತೆಂಗು, ಬಾಳೆ ಹಾಗೂ ಕಾಫಿ ತೋಟಗಳನ್ನು ತುಳಿದು ನಾಶಪಡಿಸಿದೆ. ತಂತಿ ಬೇಲಿ, ಕಲ್ಲಿನ ಕಂಬಗಳು ಸೇರಿದಂತೆ ರಕ್ಷಣಾ ವ್ಯವಸ್ಥೆಗಳಿಗೂ ಹಾನಿಯಾಗಿದೆ. ಈ ವೇಳೆ ಹೋಂಸ್ಟೇ ಸಿಬ್ಬಂದಿ ಹಾಗೂ ಸ್ಥಳೀಯರು ಭಯಭೀತರಾಗಿ ಮನೆಯೊಳಗೆ ಆಶ್ರಯ ಪಡೆದಿದ್ದರು.

ಇದೇ ವೇಳೆ ವೀರಪ್ಪಗೌಡ, ರಿಚರ್ಡ್ ಹಾಗೂ ಶಿವಪ್ಪ ಚಾರ್ ಅವರ ತೋಟಗಳಿಗೂ ಕಾಡಾನೆ ದಾಳಿ ನಡೆಸಿ ಬಾಳೆ, ಕಾಫಿ ಸೇರಿದಂತೆ ವಿವಿಧ ಬೆಳೆಗಳನ್ನು ಸಂಪೂರ್ಣವಾಗಿ ಹಾನಿಗೊಳಪಡಿಸಿದ್ದು, ಅಪಾರ ನಷ್ಟ ಉಂಟಾಗಿದೆ. ಗ್ರಾಮದಲ್ಲಿ ಹಲವು ಕಡೆ ಕಾಡಾನೆಯ ಸಂಚಾರದ ಗುರುತುಗಳು ಹಾಗೂ ರಕ್ತದ ಕಲೆಗಳು ಕಂಡುಬಂದಿದ್ದು, ಕಾಡಾನೆಗೆ ಗಂಭೀರ ಗಾಯವಾಗಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮಸ್ಥ ಆದರ್ಶ್ ಮಾತನಾಡಿ, ಈ ಕಾಡಾನೆ ಹಲವು ದಿನಗಳಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರ ದೇಹದಲ್ಲಿ ಗಾಯಗಳಿದ್ದು, ರಕ್ತ ಸುರಿಯುತ್ತಿರುವುದು ಕಂಡುಬಂದಿದೆ. ಕೂಡಲೇ ಚಿಕಿತ್ಸೆ ನೀಡಿ ಕಾಡಿಗೆ ಹಿಂತಿರುಗಿಸಬೇಕು. ಇಲ್ಲವಾದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ,? ಎಂದು ತಿಳಿಸಿದ್ದಾರೆ.

ಉದಯಗಿರಿ ಹೋಂಸ್ಟೇ ಮಾಲೀಕ ಶಿವಣ್ಣ ಅವರು, ?ಕಾಡಾನೆ ನಮ್ಮ ಆವರಣದಲ್ಲಿ ಹಲವು ಗಂಟೆಗಳ ಕಾಲ ನಿಂತಿತ್ತು. ಬಲಗಾಲಿಗೆ ಗಂಭೀರ ಪೆಟ್ಟಾಗಿದ್ದು, ಹೊಟ್ಟೆ ಭಾಗದಲ್ಲೂ ಗಾಯಗಳಿವೆ. ರಕ್ತ ಹರಿಯುತ್ತಿರುವುದು ಕಾಣಿಸಿಕೊಂಡಿದೆ. ತಕ್ಷಣ ಚಿಕಿತ್ಸೆ ನೀಡಿ ಕಾಡಿಗೆ ಕಳುಹಿಸುವುದು ಅಗತ್ಯ ಎಂದು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಲಯ ಅರಣ್ಯಧಿಕಾರಿ ಮಂಜುನಾಥ್ ಅವರು ಪ್ರತಿಕ್ರಿಯಿಸಿ, ಕಾಡಾನೆ ಗ್ರಾಮ ಭಾಗಕ್ಕೆ ಬಂದಿರುವುದು ಗಮನಕ್ಕೆ ಬಂದ ತಕ್ಷಣವೇ ಈಟಿಎಫ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ತಂಡ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಸುರಕ್ಷಿತವಾಗಿ ಕಾಡಿನೊಳಗೆ ಹಿಂತಿರುಗಿಸಿದೆ. ಕಾಡಾನೆಗೆ ಗಾಯವಾಗಿರುವುದು ಗಮನಕ್ಕೆ ಬಂದಿದೆ. ಅದರ ಚಲನವಲನವನ್ನು ಗಮನದಲ್ಲಿಟ್ಟು ಅಗತ್ಯವಾದಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ, ಎಂದು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಈಟಿಎಫ್ ತಂಡ, ಉಪ ವಲಯ ಅರಣ್ಯಾಧಿಕಾರಿ ರಂಜಿತ್,ಅರಣ್ಯ ಗಸ್ತುಪಾಲಕ ಉಮೇಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ಭಾಗವಹಿಸಿದರು.

ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಹಾಗೂ ಗಾಯಗೊಂಡ ಕಾಡಾನೆಗೆ ತಕ್ಷಣ ಚಿಕಿತ್ಸೆ ಒದಗಿಸಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ