suddi-1

 

 

ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆಪಿ ಅಂಶುಮಂತ್, ಆಲ್ದೂರಿನ ಯುವ ವಿಜ್ಞಾನಿ ಅಹಮದ್ ನಿವಾಸಕ್ಕೆ ಭೇಟಿ ನೀಡಿದರು. ವಿಜ್ಞಾನಿ ಆವೇಜ್ ಅಹಮದ್ ರವರ ತಂದೆ ನದೀಮ್ ಅಹಮದ್ ಹಾಗೂ ತಾಯಿ ಘಜಲಾ ತಶ್ವೀನ್ ರವರನ್ನು ಅಭಿನಂದಿಸಿ ದೇಶದ ಆಸ್ತಿಯನ್ನಾಗಿ ಮಗನನ್ನು ರೂಪಿಸಿದ್ದೀರಿ ಅವರ ಸಾಧನೆಗಳು ಇನ್ನಷ್ಟು ವೃದ್ಧಿಸಿ ದೇಶದ ಯುವ ಪೀಳಿಗೆಗೆ ಮಾದರಿಯಾಗಿರಲಿ ಎಂದು ಮೆಚ್ಚುಗೆಯ ಮಾತುಗಳನ್ನು ತಿಳಿಸಿದರು.

ವಿಜ್ಞಾನಿಯ ತಂದೆ ನದೀಮ್ ಅಹಮದ್, ತಮ್ಮ ಪುತ್ರ ಆರಂಭದಲ್ಲಿ ಇಸ್ರೋದಲ್ಲಿ ಕಾರ್ಯನಿರ್ವಹಿಸುವ ಕನಸನ್ನು ಹೊಂದಿರುವುದಾಗಿ ಮಾಧ್ಯಮ ಒಂದರಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು ಅದರಂತೆ ಇಂದು ಇಸ್ರೋದಲ್ಲಿಯೂ ಒಂದು ಭಾಗವಾಗಿ ನಾಸಾದ ಗುತ್ತಿಗೆಯನ್ನು ಒಪ್ಪಂದದ ಮೂಲಕ ಗಳಿಸಿಕೊಂಡಿದ್ದಾರೆ. ಭವಿಷ್ಯದ ಯೋಜನೆಗಳಿಗಾಗಿ ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಮುಖಂಡರಾದ ಸವಿತಾ ರಮೇಶ್,ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಮುದಾಬಿರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಎಚ್ ಎಸ್, ಹೋಬಳಿ ಅಧ್ಯಕ್ಷ ಕೆಳಗೂರು ಪೂರ್ಣೇಶ್, ಹೋಬಳಿ ಕಾರ್ಯದರ್ಶಿ ರವಿಚಂದ್ರ, ಮಾಜಿ ಪಂಚಾಯಿತಿ ಸದಸ್ಯರಾದ ಜಯಶೀಲ ಚಿದಂಬರ್, ಮಮತಾ ಗುರುಮೂರ್ತಿ, ವಸಂತ್ ,ಎ.ಯು,ಇಬ್ರಾಹಿಂ, ಕಾರ್ಯಕರ್ತರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ