ಮೂಡಿಗೆರೆ ಪಟ್ಟಣದ ಬೀಜುವಳ್ಳಿಯಲ್ಲಿ ಸಾರ್ವಜನಿಕ ರೋಟರಿ ಮುಕ್ತಿಧಾಮದಲ್ಲಿ ನೂತನವಾಗಿ ಗ್ಯಾಸ್ ಬರ್ನರ್ ಮತ್ತು ಕೊಠಡಿಯ ಉದ್ಘಾಟನೆಯನ್ನು ಬುಧವಾರ ನೆರವೇರಿಸಲಾಯಿತು.
ಸುಮಾರು 20 ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಗ್ಯಾಸ್ ಬರ್ನರ್ ಮತ್ತು ನೂತನ ಕೊಠಡಿಗೆ ಮುದ್ರೆಮನೆ ಕಾಫಿ ಅಂಡ್ ಸ್ಪೈಸಸ್ ಸಂಸ್ಥೆ ಮತ್ತು ಕರ್ನಾಟಕ ಬ್ಯಾಂಕ್ ವತಿಯಿಂದ ಅನುದಾನವನ್ನು ನೀಡಿರುತ್ತಾರೆ.

ಈ ಸಂದರ್ಭದಲ್ಲಿ ರೋಟರಿ ಮಾಜಿ ಜಿಲ್ಲಾ ಗರರ್ನರ್ ಹೆಚ್.ಆರ್. ಕೇಶವ್ ಅವರು ನೂತನ ಗ್ಯಾಸ್ ಬರ್ನರ್ ಮತ್ತು ಕೊಠಡಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ; ರೋಟರಿ ಸಂಸ್ಥೆಯು ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆಯಾಗಿದ್ದು, ಅನೇಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಮೂಡಿಗೆರೆ ರೋಟರಿ ಸಂಸ್ಥೆಯು ಸಾರ್ವಜನಿಕ ಮುಕ್ತಿಧಾಮದ ಬಗ್ಗೆ ಆಸಕ್ತಿ ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿರುವುದು ಶ್ಲಾಘನೀಯ. ಹಾಗೆಯೇ ಇಂತಹ ಸೇವಾ ಕಾರ್ಯಕ್ಕೆ ಕೈಜೋಡಿಸಿರುವ ದಾನಿಗಳ ಕಾರ್ಯ ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ಮುದ್ರೆಮನೆ ಕಾಫಿ ಅಂಡ್ ಸ್ಪೈಸಸ್ ನ ಮಾಲೀಕ ಬಿ.ಎಸ್. ಸಂತೋಷ್, ಎಕ್ಸಿಕ್ಯೂಟೀವ್ ಡೈರೆಕ್ಟರ್ ಸಮೀಕ್ಷ, ಕರ್ನಾಟಕ ಬ್ಯಾಂಕ್ ಮೂಡಿಗೆರೆ ಶಾಖೆ ಮ್ಯಾನೇಜರ್ ಮನೋಜ್, ರೋಟರಿ ಜಿಲ್ಲಾ ಪದಾಧಿಕಾರಿಗಳಾದ ಡಾ. ಗಣೇಶ್ ಎಸ್., ಯು.ವಿ. ಪ್ರಕಾಶ್, ಮೂಡಿಗೆರೆ ರೋಟರಿ ಅಧ್ಯಕ್ಷ ಪ್ರಸಾದ್.ಎಚ್.ಎನ್., ಕಾರ್ಯದರ್ಶಿ.ವಿಕಾಸ್.ಕೆ.ವಿ., ಹೆಚ್.ಅರ್.ಪ್ರದೀಪ್ ಕುಮಾರ್, ಡಿ.ಎಸ್.ರವಿ, ವಿವೇಕ್ ಪುಣ್ಯಮೂರ್ತಿ, ಡಿ.ಎಸ್. ರಘು, ಹೆಚ್. ಎ. ಆದರ್ಶ, ಕೆ ಎಲ್ ಎಸ್ ತೇಜಸ್ವಿ, ವಿನೋದ್ ಕುಮಾರ್ ಶೆಟ್ಟಿ, ಡಾ.ಜೀವನ್ ಕಲಾಮೆ, ನೂತನ ಅಧ್ಯಕ್ಷ ಬಿ.ಕೆ. ದಿನೇಶ್, ನೂತನ ಕಾರ್ಯದರ್ಶಿ ಹೆಚ್.ಸಿ. ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.


