suddi-4 (5)

 

 

 

ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಸಮೀಪದ  ಬೈಗೂರು ಗ್ರಾಮಸ್ಥರಲ್ಲಿ ಗುರುವಾರ ಸಂತಸದ ಛಾಯೆ ಮೂಡಿದ್ದು, ನೂತನವಾಗಿ ಆರಂಭವಾದ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಶಾಸಕಿ ನಯನ ಮೋಟಮ್ಮ ಚಾಲನೇ ನೀಡಿದರು.

ಬಳಿಕ ಮಾತನಾಡಿದ ಅವರು ಚುನಾವಣೆಗೂ ಮುನ್ನ ಪ್ರಚಾರಕ್ಕೆ ಬಂದಂತ ಸಂದರ್ಭದಲ್ಲಿ ಈ ಊರಿನ ಜನರು ವಿಶೇಷ ಮನವಿ ಮಾಡಿದ್ದರು ಸರ್ಕಾರಿ ಬಸ್ಸು ಹಂಗರವಳ್ಳಿ ಗ್ರಾಮದ ವರೆಗೆ ಮಾತ್ರ ಬರುತ್ತಿದ್ದು, ಅಲ್ಲಿಂದ  5 ಕಿಲೋಮೀಟರ್ಗೂ ಹೆಚ್ಚು  ದೂರದಲ್ಲಿರುವ ಬೈಗೂರು ಗ್ರಾಮಕ್ಕೆ ಜನರು ಖಾಸಗಿ ವಾಹನಗಳನ್ನು ಸಂಚಾರಕ್ಕೆ ಅವಲಂಬಿಸಬೇಕಾಗಿದ್ದು ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು.

ಅದರಂತೆ ನಾನು ಕೂಡ ಜಿಲ್ಲಾಧಿಕಾರಿಗಳಿಗೆ ವಿಷಯ ಗಮನಕ್ಕೆ ಬಂದರೆ ಬಸ್ ವ್ಯವಸ್ಥೆ ಆಗುತ್ತೆ ಎಂದು ಭಾವಿಸಿದ್ದೆ ಬಳಿಕವೇ ತಿಳಿದದ್ದು ಅದಕ್ಕೆ ಸಂಬಂಧಪಟ್ಟ ಸಾರಿಗೆ ಸಚಿವರು ಮತ್ತು ಇಲಾಖೆ ಕಡೆಯಿಂದ ಸಾಕಷ್ಟು ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಈ ಭಾಗದಲ್ಲಿ ಅತಿ ಹೆಚ್ಚಿನ ತಿರುವುಗಳು ಇರುವುದರಿಂದ ಉದ್ದದ ಬಸ್

ಸಂಚರಿಸುವುದು ಕಷ್ಟ ಸಾಧ್ಯ, ಆದ್ದರಿಂದಲೇ ವಿಶೇಷವಾಗಿ ಮಿನಿ ಬಸ್ಗೆ ಮನವಿ ಮಾಡಿ ಇಂದು ಬಸ್ ವ್ಯವಸ್ಥೆಯನ್ನು ಚಿಕ್ಕಮಗಳೂರು ಕೆ ಎಸ್ ಆರ್ ಟಿ ಸಿ ಘಟಕದಿಂದ ಆರಂಭವಾಗಿರುವುದು ಸಂತಸ ತಂದಿದೆ ಎಂದು ಪ್ರತಿಕ್ರಿಯೆ ನೀಡಿದರು.

ಬೈಗೂರು ಗ್ರಾಮ ಪಂಚಾಯಿತಿ ಮಾಜಿ ಪಂಚಾಯಿತಿ ಅಧ್ಯಕ್ಷೆ ಪುಷ್ಪಾರಾಜು,ಬೈಗೂರು, ಮೆಸ್ಕಾಂ ಸಲಹಾ ಸಮಿತಿ ಪ್ರತಿನಿಧಿಉಮೇಶ್ ದೇವರಹಳ್ಳಿ, ಆವತಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾಂತ್, ಬೈಗೂರು ನಾಗೇಶ್,ಬ್ಲಾಕ್ ಕಾಂಗ್ರೆಸ್ ಕಿಸಾನ್ ಅಧ್ಯಕ್ಷ ಜಗದೀಶ್ ಎಂ ಬಿ, ಸ್ಮಿತಾ ನಾಗೇಶ್,

ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಐದಳ್ಳಿ ತೇಜಸ್, ಸ್ಥಳೀಯ ಮುಖಂಡರುಗಳು ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ