ಅಂಬೇಡ್ಕರ್ ಜಯಂತಿಗೆ ಅಡ್ಡಿಪಡಿಸಿರುವ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರುಗಳು ನಗರದ ಆಜಾ ದ್‍ಪಾರ್ಕ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಒಕ್ಕೂಟದ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ ರಾಷ್ಟ್ರ ನಾಯಕ ಡಾ|| ಬಿ. ಆರ್.ಅಂಭೇಡ್ಕರ್ ಜಯಂತಿಗೆ ಹೊಸಕೋಟೆ ಗ್ರಾಮದಲ್ಲಿ ಅಡ್ಡಿಪಡಿಸುವ ಮೂಲಕ ನೀಲಿ ಬಾವುಟವನ್ನು ಕಿತ್ತೆಸೆದು ಅವಮಾನ ಮಾಡಿರುವ ಗ್ರಾಮದ ವ್ಯಕ್ತಿಗಳನ್ನು ಬಂಧಿಸದಿರುವುದು ಖಂಡನೀಯ ಎಂದರು.
ಪ್ರಕರಣಕ್ಕೆ ಸಂಬಂಧಿಸಿದ ಗ್ರಾಮದ 23 ಮಂದಿ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಪೊಲೀಸ್ ಇಲಾಖೆ ಕ್ರಮ ವಹಿಸುತ್ತಿಲ್ಲ. ಅಂಬೇಡ್ಕರ್ ಜಯಂತಿ ಆಚರಿಸುವ ವೇಳೆ ಈ ರೀತಿಯ ದುರ್ಘಟನೆ ನಡೆಸಿರುವವರನ್ನು ಬಂಧಿಸದೇ ಪೊಲೀಸರು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯ ಲ್ಲ ಎಂದು ತಿಳಿಸಿದರು.
ಬಲಾಡ್ಯ ಜನಾಂಗದ ಒತ್ತಡದ ಮೇರೆಗೆ ಪೊಲೀಸರು ದಲಿತರಿಗೆ ನ್ಯಾಯ ಒದಗಿಸುವ ಬದಲು ಜಾತಿ ಬೇಧ ಅಥವಾ ಲಂಚದ ಹಾವಳಿಗೆ ಸಿಲುಕಿ ಪೊಲೀಸ್ ಇಲಾಖೆ ಅನ್ಯಾಯ ಮಾಡುತ್ತಿದೆ. ಆ ನಿಟ್ಟಿನಲ್ಲಿ ಸತ್ಯಾ ಸತ್ಯತೆ ಮೇರೆಗೆ ಪೊಲೀಸ್ ಇಲಾಖೆ ಕೆಲಸ ನಿರ್ವಹಿಸಬೇಕು ಎಂದರು.
ಅಂಬೇಡ್ಕರ್‍ಗೆ ಅವಮಾನ ಮಾಡಿದ ಆರೋಪಿಗಳನ್ನು ಸದ್ಯದಲ್ಲೇ ಬಂಧಿಸದಿದ್ದಲ್ಲಿ ಒಕ್ಕೂಟವು ಸ್ಥಳೀ ಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಪ್ರತಿಭಟನೆ ನಡೆಸ ಲಾಗುವುದು ಎಂದು ಎಚ್ಚರಿಸಿದರು.
ಒಕ್ಕೂಟದ ಮುಖಂಡ ವಸಂತ್‍ಕುಮಾರ್ ಮಾತನಾಡಿ ದೇಶ-ವಿದೇಶಗಳಲ್ಲಿ ಅಂಬೇಡ್ಕರ್ ಬಗ್ಗೆ ಅಪಾರವಾದ ಗೌರವವಿದೆ. ರಾಷ್ಟ್ರ ಹಬ್ಬವಾದ ಅಂಭೇಡ್ಕರ್ ಜಯಂತಿ ರಾಷ್ಟ್ರಾದಾದ್ಯಂತ ಆಚರಿಸುವುದು ಮೂಲಭೂತ ಹಕ್ಕು. ಆದರೆ ಕೆಲವು ಬಲಾಡ್ಯ ಜನಾಂಗದ ಮುಖಂಡರು ಜಯಂತಿಗೆ ಅಡ್ಡಿಪಡಿಸಿ ದಲಿತ ರಿಗೆ ದ್ರೋಹವೆಸಗುತ್ತಿದ್ದಾರೆ ಎಂದು ದೂರಿದರು.
ದೇಶದ ಮೂಲನಿವಾಸಿ ದಲಿತರಿಗೆ ನ್ಯಾಯ ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲತೆ ಹೊಂದುತ್ತಿದೆ. ದಲಿ ತ ಸಮುದಾಯಕ್ಕೆ ನ್ಯಾಯ ನೀಡದ ಜಿಲ್ಲಾಡಳಿತ, ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಗೆ ದಸಂಸ ಮುಖಂಡರುಗಳು ಆಹ್ವಾನಿಸಬಾರದು ಎಂದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಮರ್ಲೆ ಅಣ್ಣಯ್ಯ, ಗೌಸ್ ಮೊಹಿಯುದ್ದೀನ್, ಕೃಷ್ಣ ಮೂರ್ತಿ, ಬಿಳೇಕಲ್ಲು ಬಾಲಕೃಷ್ಣ, ಮಂಜಯ್ಯ, ಕುಮಾರ್, ಶೇಖರ್ ಹಾಗೂ ಹೊಸಕೋಟೆ ಗ್ರಾಮಸ್ಥರು ಉಪಸ್ಥಿತರಿದ್ದರು.



