napatthe

 

 

ಒಂದೂವರೆ ವರ್ಷದ ಮಗುವೊಂದು ನಾಪತ್ತೆಯಾಗಿದ್ದ ಪ್ರಕರಣವನ್ನು ಶೀಘ್ರದಲ್ಲಿ ಪತ್ತೆಹಚ್ಚಿದ ಪೊಲೀಸರು ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿರುವ ಘಟನೆ ಮೂಡಿಗೆರೆ ತಾಲ್ಲೂಕು ಬಾಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಳೂರು ಠಾಣಾ ವ್ಯಾಪ್ತಿಯ ಕೆಳಗೂರು ಟೇ ಎಸ್ಟೇಟ್ ನಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿತ್ತು. 12 ಗಂಟೆಗಳ ಕಾಲ ಸತತವಾಗಿ ಹುಡುಕಾಟ ನಡೆಸಿ ಮಗುವನ್ನ   ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮಳೆ ಮಧ್ಯೆ ಇಡೀ ರಾತ್ರಿ ಹಳ್ಳದಲ್ಲಿ ಕೂತಿದ್ದ ಒಂದೂವರೆ ವರ್ಷದ ಶಿವಂ ಹೆಸರಿನ ಮಗುವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಕಳೆದೊಂದು ವಾರದ ಹಿಂದಷ್ಟೆ ಮಧ್ಯಪ್ರದೇಶದಿಂದ ಕೆಳಗೂರು ಟಿ ಎಸ್ಟೇಟ್ ಗೆ ಕೆಲಸಕ್ಕೆ ಬಂದಿದ್ದ ಕುಟಂಬ.  8 ವರ್ಷದ ಬಾಲಕಿ ಜೊತೆ 4 ಮಕ್ಕಳನ್ನ ನೋಡಿಕೊಳ್ಳು ಬಿಟ್ಟು ತೋಟದ ಕೆಲಸಕ್ಕೆ ಹೋಗಿದ್ದ ಕುಟುಂಬದ ಸದಸ್ಯರು. ಒಂದೂವರೆ ವರ್ಷದ ಮಗುವನ್ನು ರಸ್ತೆಬದಿಯಲ್ಲೇ ಬಿಟ್ಟು ಬಂದಿದ್ದ ಬಾಲಕಿ.  ಸಂಜೆ ಪೋಷಕರು ಬಂದಾಗ ಮಗು ನಾಪತ್ತೆ ಬಗ್ಗೆ ಮಾಹಿತಿ. ಸುತ್ತಲೂ ಹುಡುಕಾಟ ನಡೆಸಿದರು ಮಗು ಪತ್ತೆಯಾಗದೇ ಇದ್ದುದ್ದರಿಂದ ಕೊನೆಗೆ ಬಾಳೂರು ಠಾಣೆಗೆ ದೂರು ಸಲ್ಲಿಸಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಬಾಳೂರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರ್ ನೇತೃತ್ವದಲ್ಲಿ ವಿಶೇಷ ಶೋಧ ಕಾರ್ಯಾಚರಣೆ ಆರಂಭಿಸಿದರು.

ಮಗು ಕಾಣೆಯಾದ ಜಾಗದಿಂದ ಡಾಗ್ ಸ್ಕ್ವಾಡ್, ಪೊಲೀಸರು, ಸ್ಥಳಿಯರು ಹುಡುಕಾಟ ಪ್ರಾರಂಭಿಸಿದ್ದರು. ಇಡೀ ರಾತ್ರಿ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ.

ಶುಕ್ರವಾರ ಬೆಳಿಗ್ಗೆ ಮತ್ತೆ ಹುಡಕಾಟ ಮುಂದುವರಿಸಿದಾಗ ಸುಮಾರು 500 ಮೀಟರ್ ದೂರದಲ್ಲಿ ಹಳ್ಳದ ಬದಿಯಲ್ಲಿ ಮಗು ಪತ್ತೆಯಾಗಿದೆ. ಗುರುವಾರ ರಾತ್ರಿ ಈ ಭಾಗದಲ್ಲಿ ಮಳೆಸುರಿದಿದ್ದು, ಮಳೆ ಮಧ್ಯೆ ಇಡೀ ರಾತ್ರಿ ಹಳ್ಳದಲ್ಲಿ ನಡುಗುತ್ತಾ ಕೂತಿದ್ದ ಮಗು ಶುಕ್ರವಾರ ಮುಂಜಾನೆ ಪತ್ತೆಯಾಗಿದೆ.

ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ರಾಜಶೇಖರ್ , ಬಾಳೂರು ಪ್ರಭಾರಿ ಠಾಣಾಧಿಕಾರಿ ದಿಲೀಪ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ತಂಡ ಮಗುವನ್ನು ಹುಡುಕಿ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.

ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ