ಆಲ್ದೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಅಬ್ಬಾಸಿಯ ಬಯಲು ರಂಗಮಂದಿರದಲ್ಲಿ ಮಿಲ್ಲತ್ ಪೂಲ್ ಬನ್ ನರ್ಸರಿ ಸ್ಕೂಲ್ ವತಿಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆರನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೋಮವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನದೀಮ್ ಅಹಮದ್,ತಮ್ಮ ಪುತ್ರ ಯುವ ವಿಜ್ಞಾನಿ ಆವೇಜ್ ಅಹಮದ್ ರವರ ಸಾಧನೆಗೆ ಹಂತ ಹಂತವಾಗಿ ಅವರು ವಿದ್ಯಾಭ್ಯಾಸ ಪಡೆದ ರೀತಿ ಮತ್ತು ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ಗುರಿ ಕನಸು ಉದ್ದೇಶದ ಕುರಿತು ಸರಿಯಾದಂತಹ ಮಾಹಿತಿ ಮಾರ್ಗದರ್ಶನ ಪಡೆದು ಮುಂದೆ ಸಾಗಬೇಕೆಂದು ಸಲಹೆ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವೈದ್ಯ ಪ್ರಸನ್ನ ಕುಮಾರ್ ಶೆಟ್ಟಿ, ಮಿಲ್ಲತ್ ಪೂಲ್ ಬನ್ ನರ್ಸರಿ ಸ್ಕೂಲ್ ವತಿಯಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಅತ್ಯುತ್ತಮ ಕಾರ್ಯಕ್ರಮ ಇದಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ತಹರೀನ್ ತಾಜ್, ಡಾ.ಸಾರಾ ರಫಾ ವಿದ್ಯಾರ್ಜನೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ವೈಜ್ಞಾನಿಕ ವಾಗಿ ವ್ಯಾಸಂಗ ಮಾಡುವುದರ ಕುರಿತು ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಶೂನ್ ನಹರ್ ಗ್ರಾಮೀಣಮಟ್ಟದಲ್ಲಿಯೂ ಅತ್ಯುತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರು ಉತ್ತಮವಾಗಿ ಬೆಂಬಲ ಮಾರ್ಗದರ್ಶನ ಒದಗಿಸಿದ ಪರಿಣಾಮ ಉತ್ತಮ ಫಲಿತಾಂಶ ಪಡೆದಿದ್ದಾರೆ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಹುರಿದುಂಬಿಸುವ ಅತ್ಯುತ್ತಮ ಕಾರ್ಯಕ್ರಮ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಸ್ತಫ ಆಲ್ದೂರು ಕಾರ್ಯಕ್ರಮದಲ್ಲಿ ಮಾತನಾಡಿ ಆಯೋಜಕರೆಲ್ಲರನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲ್ಲತ್ ಪೂಲ್ ಬನ್ ನರ್ಸರಿ ಸ್ಕೂಲ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ವಹಿಸಿದ್ದರು. ಉಪಾಧ್ಯಕ್ಷ ಅಫ್ತಾಬ್ ಪಾಷಾ,ಸಂಸ್ಥೆಯ ಕಾರ್ಯದರ್ಶಿ ಶಫಿಕ್ ಅಹಮದ್,ಖಜಾಂಚಿ ಇಮ್ರಾನ್ ಅನ್ಸರ್, ಜಾಮಿಯಾ ಮಸೀದಿ ಹಜರತ್ ನಸೀಮ್ ಷಾ, ಮದೀನಾ ಮಸೀದಿ ಅಧ್ಯಕ್ಷ ಅಬ್ಜಲ್ ಪಾಶ, ಪೂರ್ಣಪ್ರಜ್ಞ ಶಾಲೆಯ ಪ್ರಾಂಶುಪಾಲ ವೆಂಕಟೇಶ್, ರೋಜ್ ಬಡ್ಸ್ ಶಾಲೆಯ ಪ್ರಾಂಶುಪಾಲರಾದ ನಿರ್ಮಲ ಮೆನನ್, ಸರ್ಕಾರಿ ಪ್ರೌಢಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಎ ಯು ಇಬ್ರಾಹಿಂ, ಎಸ್ ಮಾನಸ ಪ್ರೌಢಶಾಲೆಯ ಪ್ರಾಂಶುಪಾಲರಾದ ಸಾವಿತ್ರಿ ಎಚ್ ಡಿ, ಮಹಮ್ಮದ್ ಆಸಿಫ್ ಬಿಬಿಸಿ, ಮುಜೀಬ್ ಶರೀಫ್, ನಾಸೀರ್ ಹುಸೇನ್ ,ರಫೀಕ್, ಶಿಕ್ಷಕಿಸಾಹಿರಾಬಾನು,ಸಿಬ್ಬಂದಿ ಜುಬೇದ, ಪೋಷಕರುಗಳು ಭಾಗವಹಿಸಿದ್ದರು.



