ಚಿಕ್ಕಮಗಳೂರು ಕ್ರೈಸ್ತ ಧರ್ಮ ಪೀಠದ ಧರ್ಮಾದ್ಯಕ್ಷ ರ ನಿವಾಸದ ಬಳಿ ಇರುವ ಸ್ಪೂರ್ತಿ ಸದನ ಸಭಾಂಗಣದಲ್ಲಿ ಶ್ರೀಸಾಮಾನ್ಯರ ಆಯೋಗದ ವತಿಯಿಂದ ಎಸ್ಐಆರ್ ಕುರಿತು ಮತದಾನದ ಹಕ್ಕಿನ ಬಗ್ಗೆ ಜಾಗೃತಗೊಳ್ಳಿ ಎಂಬ ಶೀರ್ಷಿಕೆ ಯಡಿ ಕಾರ್ಯಗಾರ ಭಾನುವಾರ ನಡೆಯಿತು.
ಶ್ರೀಸಾಮಾನ್ಯರ ಆಯೋಗದ ನಿರ್ದೇಶಕರಾದ ಫಾ. ಫ್ರೆಡ್ರಿಕ್ ಪಾಯಸ್ ಪ್ರಾಸ್ತಾವಿಕವಾಗಿ ಮಾತನಾಡಿ ಎಸ್ಐಆರ್ ತರಬೇತಿ ಬಹು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬ,ಭಾರತೀಯ ಪೌರನು ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಕುರಿತು ಪ್ರಸ್ತಾಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಕ್ಕಮಗಳೂರು ಕ್ರೈಸ್ತ ಧರ್ಮ ಪೀಠದ ಧರ್ಮಾದ್ಯಕ್ಷ ಡಾ.ಟಿ.ಅಂತೋಣಿ ಸ್ವಾಮಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಕರಗಳಲ್ಲಿರುವ ಶಕ್ತಿಯುತ ಆಯುಧ ಮತದಾನ ಅದನ್ನು ಯಾವುದೇ ಆಮಿಷಗಳಿಗೆ ಬಲಿಯಾಗದೆ ಆಮಿಷಗಳಿಂದ ದೂರವಿದ್ದರೆ ಮಾತ್ರ ಯೋಗ್ಯ ಉತ್ತಮ ನಾಯಕರ ಆಯ್ಕೆಯನ್ನು ಪಾರದರ್ಶಕತೆಯಿಂದ ಮಾಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್ ಐ ಆರ್ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮತ್ತು ಬಸವನಹಳ್ಳಿ ಕಾಲೇಜಿನ ಪ್ರಾಚಾರ್ಯರಾದ ಸುರೇಶ್, ಎಸ್ಐಆರ್ ಕುರಿತ ನೀತಿ ನಿಯಮಗಳ ಕುರಿತು ಮಾಹಿತಿ ಹಂಚಿಕೊಂಡರು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೆ ಎಲ್ ಅಶೋಕ್, ಎಸ್ಐಆರ್ ಕಾಯ್ದೆಯ ಹಿನ್ನೆಲೆ ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪುಗಳು, ನಿಯಮಾವಳಿಗಳು, ಮತದಾರರ ಪಟ್ಟಿ ಪರಿಷ್ಕರಣೆಗೆ ಒದಗಿಸಬೇಕಾದ ಅಗತ್ಯ ದಾಖಲೆಗಳು, ಶಿಬಿರಾರ್ಥಿಗಳ ಗೊಂದಲಗಳನ್ನು ಪ್ರಶ್ನೋತ್ತರ ಸಮಯದಲ್ಲಿ ಪರಿಹರಿಸಿ ಮಾಹಿತಿ ತಿಳಿಸಿಕೊಟ್ಟರು.
ಫಾ.ರಾಯಪ್ಪ, ಬಿ ಎಲ್ ಓ ಅರುಣ್ ಕಿರಣ್ ಪಿಂಟೊ,ಶ್ರೀ ಸಾಮಾನ್ಯ ಆಯೋಗದ ಸದಸ್ಯ ಜೇಮ್ಸ್ ಡಿಸೋಜಾ, ಎಸ್ ಐ ಆರ್ ಕುರಿತು ಕಾರ್ಯಗಾರದಲ್ಲಿ ಮಾತನಾಡಿದರು.ಆಯೋಗದ ಸಹ ಕಾರ್ಯದರ್ಶಿ ಫಾ. ಜಾನ್ ಬ್ಯಾಪ್ಟಿಸ್ಟ್, ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಫಾ. ಲ್ಯಾನ್ಸಿ ಪಿಂಟೊ,
ಸಂತ ಜೋಸೆಫರ ಪ್ರಧಾನಾಲಯದ ಕಾರ್ಯದರ್ಶಿ ಕ್ಲಾಡ್ ಲೋಬೊ, ಚಿಕ್ಕಮಗಳೂರು ಹಾಸನ ಕ್ರೈಸ್ತ ಧರ್ಮ ಕ್ಷೇತ್ರದ ಧರ್ಮ ಕೇಂದ್ರಗಳ ಪಾಲನ ಸಮಿತಿಯ ಸದಸ್ಯರುಗಳು, ಕ್ರೈಸ್ತ ಸನ್ಯಾಸಿನಿಯರು, ಪಾದ್ರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.



