suddi-4 (4)

 

 

ರಾಷ್ಟ್ರಾದ್ಯಂತ ದೇವಾಲಯದ ಶಿಲ್ಪಕಲೆ ಕೆತ್ತನೆಯಲ್ಲಿ ಹಾಗೂ ವಾಸ್ತು ಸಂಕಿರಣ ನಿರ್ಮಾಣಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಿದೆ. ಐದು ಉಪಕಸುಬಿನ ಕಾಯಕದಡಿ ಸಾಮಾಜಿಕ ಕ್ರಾಂತಿ ಮೂಡಿಸಿದ ಅಪರೂಪದ ಜನಾಂಗ ವಿಶ್ವಕರ್ಮ ಎಂದು ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ಚಿಕ್ಕಮಗಳೂರು ನಗರದ ಜಿಲ್ಲಾ ವಿಶ್ವಕರ್ಮ ಸಮುದಾಯ ಭವನದಲ್ಲಿ ಗುರುವಾರ ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇ ವಾ ಸಭಾ ಆಯೋಜಿಸಿದ್ಧ ಶ್ರೀ ವೈಶ್ವಕರ್ಮಣ ಮಹಾಯಜ್ಞ ಸಾಮೂಹಿಕ ಉಪನಯನ ಮತ್ತು ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಜನಾಂಗದ ನಿರ್ಮಾತೃ ವಿಠಲಾಚಾರ್ಯ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ವಿಶ್ವಕರ್ಮರು ನಿರ್ವಹಿಸುವ ವೃತ್ತಿ, ಬೇರೆ ಯಾವುದೇ ಜನಾಂಗದಲ್ಲೂ ಅಷ್ಟು ಸಾಮಥ್ರ್ಯವಾಗಿ ನಿರ್ವ ಹಿಸಲು ಸಾಧ್ಯವಿಲ್ಲ. ಇದು ಜನಾಂಗಕ್ಕೆ ಒಲಿದು ಬಂದಿರುವ ದೈವತತ್ವ ಕಾಯಕಕಲ್ಪವಾಗಿದೆ. ಆದರೆ ಕೆಲವೊ ಮ್ಮೆ ದೇವಾಲಯ ಶಿಲ್ಪಕಲಾ ಕೆತ್ತನೆ ಕಾರ್ಯ ಪೂರ್ಣಗೊಂಡ ಬಳಿಕ ದೇವಾಲಯ ಪ್ರವೇಶಿಸದಂತೆ ತಡೆ ಯೊಡ್ಡುವ ಸಂಸ್ಕøತಿ ಸರಿಯಲ್ಲ ಎಂದರು.

ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದ ಮುಂಚೂಣಿಗೆ ಧಾವಿಸಲು ವಿಠಲಚಾರ್ಯರವರ ಪ್ರಮುಖ ಸಂಘಟನಾತ್ಮಕ ಹೋರಾಟವೇ ಕಾರಣ. ಅಲ್ಲದೇ ಜಿಲ್ಲೆ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಉಗಮ ಹಾಗೂ ಎತ್ತರಕ್ಕೆ ಬೆಳೆಯಲು ಅಡಿಪಾಯವೇ ವಿಠಲಾಚಾರ್ಯರ ಕೊಡುಗೆ. ದಕ್ಷಿಣ ಭಾರತದಲ್ಲೇ ವಾಜಪೇಯಿ, ಅ ಡ್ವಾಣಿ ಜೊತೆ ನಿರಂತರ ಸಂಪರ್ಕ ಹೊಂದಿದ ಶ್ರೇಷ್ಟ ವ್ಯಕ್ತಿ ಎಂದರು.

ದೇಶದ ತುರ್ತು ಪರಿಸ್ಥಿತಿ ಕಾಲದಲ್ಲೂ ವಿಠಲಾಚಾರ್ಯ ಮತ್ತು ಪಿ.ಜಿ.ಸಿಂಧ್ಯಾ ಜೊತೆಗೂಡಿ ಸೆರೆವಾಸ ಅನುಭವಿಸಿದ ಕ್ಷಣವಿದೆ. ಈ ವಿಷಯವು ಸಿಂಧ್ಯಾರವರು ಕೆಲವೊಮ್ಮೆ ಹಂಚಿಕೊಂಡಿದ್ದರು. ಹೀಗಾಗಿ ಈ ಸ ಮಾಜದಲ್ಲಿ ಜನಿಸಿರುವ ಸಮುದಾಯವು ಭಿನ್ನಾಭಿಪ್ರಾಯ ಬದಿಗಿಟ್ಟು, ಒಗ್ಗಟ್ಟಿನ ಮಂತ್ರ ಪಠಿಸಿದಾಗ ಸಾಮಾ ಜಿಕ, ರಾಜಕೀಯವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸಿದರು.

ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನಾಂಗವು ಯಾವುದೇ ಪಕ್ಷಕ್ಕೆ ಸೀಮಿತಗೊಳ್ಳದಿರಿ. ಜನಾ ಂಗ ಅಭಿವೃದ್ದಿಗಾಗಿ ಪಕ್ಷಬೇಧ ಮರೆತು ಎಲ್ಲರೊಂದಿಗೆ ಅನೋನ್ಯತೆ ಕಾಪಾಡಿಕೊಂಡಲ್ಲಿ ಮುಂದೆ ಸಮುದಾ ಯ ಬೆಳವಣಿಗೆಗೆ ಸಹಕಾರಿ. ಆ ನಿಟ್ಟಿನಲ್ಲಿ ಶಾಸಕರ ಮುಖೇನಾ ಕೆಲವೇ ತಿಂಗಳಲ್ಲಿ ಸಮುದಾಯಕ್ಕೆ ಅನು ದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ವಿಶ್ವಕರ್ಮ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಮಾತನಾಡಿ ಕಾಶ್ಮೀರ ದಿಂದ ಕನ್ಯಾಕುಮಾರಿವರೆಗೂ ದೇವಾಲಯ ನಿರ್ಮಾಣಕ್ಕೆ ವಿಶ್ವಕರ್ಮರ ಸೇವೆ ಬಹಳಷ್ಟಿದೆ. ಪುರಾತನ ಕಾ ಲದಲ್ಲಿ ಜಕಣಾಚಾರಿ ಎಂದಾದರೆ, ಆಧುನಿಕ ಕಾಲಘಟ್ಟದಲ್ಲಿ ಶ್ರೀರಾಮನ ವಿಗ್ರಹ ನಿರ್ಮಾತೃ ಅರುಣ್ ಯೋ ಗಿರಾಜ್‍ವರೆಗೂ ವಿಶ್ವಕರ್ಮರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಮಕ್ಕಳಿಗೆ ಉಪನಯನ ಎಂಬುದು ಬಾಲ್ಯದಲ್ಲೇ ಮಾಡಿಸುವುದು ಒಳ್ಳೆಯದು. ಸಕಾಲದಲ್ಲಿ ಮಂತ್ರ ಪ ಠಣ, ಪೂಜಾ ಪದ್ಧತಿ ಅಭ್ಯಾಸ, ಶಿಲ್ಪಾಶಾಸ್ತ್ರ ಅಧ್ಯಯನ, ಸಂಧ್ಯಾವಂದನೆ ಪ್ರವೃತ್ತಿಗೆ ಪಾಲಕರು ಒತ್ತು ನೀಡ ಬೇಕು. ಬೆಳಕಿನ ಸಂಕೇತವಾದ ದೀಪ ಆರಿಸಿ ಬರ್ತಡೆ ಆಚರಿಸುವ ಬದಲು, ಸ್ವಲ್ಪ ಹೆಚ್ಚು ಹಣ ಖರ್ಚಾದ ರೂ ಪರವಾಗಿಲ್ಲ, ಆಯಾ ವಯಸ್ಸಿನಲ್ಲೇ ಶಾಸ್ತ್ರಪ್ರಕಾರವಾಗಿ ಉಪನಯನ ಮಾಡಿಸಬೇಕು ಎಂದರು.

ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಮಾತನಾಡಿ ಜ ನಾಂಗದ ಅಭಿವೃದ್ದಿಗೆ ನಿಗಮದಲ್ಲಿ ಅರಿವು ಯೋಜನೆಯಡಿ ಜನಾಂಗದ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಶೇ.2 ಬಡ್ಡಿದರದಲ್ಲಿ 2 ಲಕ್ಷದವರೆಗೆ ಹಾಗೂ ಇಂಜಿನಿಯರ್ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಕ್ಕೆ ಕನಿಷ್ಟ 8 ಲಕ್ಷ ರೂ.ಗಳ ಸಾಲಸೌಲಭ್ಯ ಲಭ್ಯವಾಗಲಿದೆ ಎಂದು ತಿಳಿಸಿದರು.

ವಿದೇಶದಲ್ಲಿ ಎಂ.ಎಸ್. ವಿದ್ಯಾಭ್ಯಾಸಕ್ಕೆ ತೆರಳುವ ಜನಾಂಗದ ವಿದ್ಯಾರ್ಥಿಗಳಿಗೆ ಬಡ್ಡಿರಹಿತವಾಗಿ 50 ಲಕ್ಷ ರೂ. ಸಹಾಯಧನವಿದೆ. ಚಿನ್ನಬೆಳ್ಳಿ ಮೂಲವೃತ್ತಿದಾರರಿಗೆ ಬಂಡವಾಳಕ್ಕಾಗಿ ನಿಗಮವು 5 ಲಕ್ಷ ಸಾಲಸೌ ಲಭ್ಯ ನೀಡುತ್ತಿದೆ. ಮಹಿಳೆಯರು ಟೈಲರಿಂಗ್ ಉದ್ಯೋಗಕ್ಕೆ ಶೇ.30ರ ಸಬ್ಸಿಡಿಯಡಿ 2 ಲಕ್ಷ ಹಾಗೂ ಹೊಸ ತಂತ್ರಜ್ಞಾನ ಮಿಷನ್ ಖರೀದಿಗೂ 35 ಸಾವಿರ ಸಹಾಯಧನವಿದ್ದು ಈ ಸವಲತ್ತನ್ನು ಸಮುದಾಯವು ಪಡೆ ದುಕೊಳ್ಳಬೇಕು ಎಂದರು.

ಪ್ರಸ್ತುತ ಸಮಾಜವು ಸರ್ಕಾರಿ ಹುದ್ದೆ, ರಾಜಕೀಯ ಹಾಗೂ ಉನ್ನತ ಅಧಿಕಾರ ಸ್ಥಾನದಿಂದ ಹಿಂದುಳಿ ದಿದೆ. ಈ ಸ್ಥಾನಕ್ಕೆ ಏರಲು ಮೊದಲು ಮಕ್ಕಳನ್ನು ವಿದ್ಯಾವಂತರಾಗಿಸಬೇಕು. ವೈದ್ಯ, ನ್ಯಾಯಾಧೀಶ, ಐಎಎಸ್ ಅಥವಾ ಐಪಿಎಸ್‍ನಂಥ ಹುದ್ದೆಗಳಿಗೆ ಜನಾಂಗದ ಯುವಪೀಳಿಗೆ ತೆರಳಿದರೆ, ಸಮಾಜಕ್ಕೆ ಬಹುದೊಡ್ಡ ಗೌ ರವ ಲಭಿಸಿದಂತೆ ಎಂದು ಹೇಳಿದರು.

ವಿ.ಬ್ರಾ.ಸ.ಸೇವಾ ಸಭಾದ ನಿಕಟಪೂರ್ವ ಅಧ್ಯಕ್ಷ ಹೆಚ್.ಆರ್.ಉಮಾಶಂಕರ್ ಪ್ರಾಸ್ತಾವಿಕವಾಗಿ ಮಾತ ನಾಡಿ 1967ರ ಇಸವಿಯಲ್ಲಿ ಸಮಾಜವು ವಿಠಲಾಚಾರ್ಯರ ನೇತೃತ್ವದಲ್ಲಿ ಆರಂಭಗೊಂಡಿತು. ನಗರಸಭೆ ಸದಸ್ಯರಾಗಿದ್ಧ ಸಂದರ್ಭದಲ್ಲಿ ವಿಠಲಾಚಾರ್ಯರು ಸಮಾಜದ ಸಭೆ, ಸಮಾರಂಭಕ್ಕಾಗಿ ನಿವೇಶನ ಒದಗಿಸಿ ಕೊಡುವ ಮೂಲಕ ಭದ್ರಬುನಾದಿ ಹಾಕಿಕೊಟ್ಟವರು ಎಂದರು.

ಇದೇ ವೇಳೆ ಪುರೋಹಿತ ಪ್ರಶಾಂತ್ ಆರ್ಮ ಸಾರಥ್ಯದಲ್ಲಿ ಸುಮಾರು 20 ವಟುಗಳಿಗೆ ವಿಶ್ವಕರ್ಮ ಸಂಪ್ರದಾಯದಂತೆ ವಟುಗಳಿಗೆ ಉಪನಯನ ನಡೆಸಲಾಯಿತು. ಬಳಿಕ ಎಸ್.ಎಸ್.ಎಲ್.ಸಿ. ಮತ್ತು ಪಿಯು ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಹಿರಿಯರು, ಸಾಧಕರಿಗೆ ಗೌರವಿಸಲಾಯಿತು. ರತ್ನಗಿರಿ ಶ್ರೀ ಕಾಳಿಕಾಂಬ ಸೇವಾ ಸಮಿತಿಯಿಂದ ದಾಸೋಹ, ವೇದಿಕೆ ನಿರ್ಮಾಣ ಸೇವಾರ್ಥ ವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜಸೇವಾ ಸಭಾದ ಅಧ್ಯಕ್ಷ ಎಂ.ಜೆ.ಚಂದ್ರ ಶೇಖರ ಆಚಾರ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ವಿಶ್ವಕರ್ಮ ಕೈಗಾರಿಕಾ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ರತೀಶ್, ಸೇವಾ ಸಭಾದ ಮಾಜಿ ಅಧ್ಯಕ್ಷ ಎಂ. ಜೆ.ಮಹೇಶಚಾರ್, ಕೆನರಾ ಬ್ಯಾಂಕ್ ಮೌಲ್ಯಮಾಪಕರ ಸಂಘದ ರಾಜ್ಯಾಧ್ಯಕ್ಷ ರುದ್ರಯ್ಯಾಚಾರ್, ಡಿ.ಎಸ್. ಎಂ.ಎಸ್. ನಿರ್ದೇಶಕ ಚಂದ್ರಶೇಖರ್, ಸಮಾಜದ ಮುಖಂಡರುಗಳಾದ ಕೃಷ್ಣಾಚಾರ್, ಕೃಷ್ಣಮೂರ್ತಿ ಆಚಾ ರ್, ಕೃಷ್ಣಯ್ಯ ಆಚಾರ್ಯ, ಬಿ.ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ