ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್‌ನ ಐವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್‌ನ ಗೋವಿಂದರಾಜು ಸೋಲನುಭವಿಸಿದ್ದಾರೆ.
ಕಾಂಗ್ರೆಸ್ – ಗೆದ್ದ ಅಭ್ಯರ್ಥಿಗಳು
* ಬಿ.ಕೆ.ಹರಿಪ್ರಸಾದ್: ಪಡೆದ ಮತಗಳು 30
* ತಿಪ್ಪಣ್ಣಪ್ಪ ಕಮಕನೂರು: 30 ಮತ
* ಪಿ.ವಿ.ಮೋಹನ್: 29 ಮತ
* ಬಿ.ಎಸ್.ಶಿವಣ್ಣ: 30 ಮತ
* ವಿನಯ್ ಕಾರ್ತಿಕ್ (5ನೇ ಅಭ್ಯರ್ಥಿ): 32 ಮತ
ಬಿಜೆಪಿ – ಗೆದ್ದ ಅಭ್ಯರ್ಥಿಗಳು
* ಆರ್.ರಘು: 29 ಮತಗಳು
* ಲಿಂಗರಾಜು ಪಾಟೀಲ್: 27 ಮತ

ಜೆಡಿಎಸ್ – ಸೋತ ಮೈತ್ರಿ ಅಭ್ಯರ್ಥಿ
* ಗೋವಿಂದರಾಜು: ಪಡೆದ ಮತಗಳು 14
222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 11 ಹೆಚ್ಚುವರಿ ಮತಗಳು ಸಿಕ್ಕಿವೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಒಟ್ಟು 11 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ.
ಪಕ್ಷದ್ರೋಹ ಮಾಡಿದವರನ್ನು ಪತ್ತೆ ಹಚ್ಚಿ ಶಿಸ್ತುಕ್ರಮ ; ಬಿಜೆಪಿ
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರನ್ನು ಪತ್ತೆ ಮಾಡಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಮೇಲ್ಮನೆ ಚುನಾವಚಣೆ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್, ‘ಬಿಜೆಪಿಯಿಂದ ಲಿಂಗರಾಜು ಪಾಟೀಲ್, ರಘು ಕೌಟಿಲ್ಯ ಗೆದ್ದಿದ್ದಾರೆ. ನಮ್ಮ ಮೂರು ವೋಟುಗಳು ಕ್ರಾಸ್ ಆಗಿದೆ ಅಂತ ಮಾಹಿತಿ ಬಂದಿದೆ. ಯಾರು ಕ್ರಾಸ್ ವೋಟು ಹಾಕಿದ್ದಾರೆ ಅಂತ ಗೊತ್ತಾಗುತ್ತೆ. ಅವರ ವಿರುದ್ಧ ಪಕ್ಷದಿಂದ ಶಿಸ್ತು ಕ್ರಮ ನಿಶ್ಚಿತ. ನಮ್ಮ ಒಂದು ಮತ ಅಸಿಂಧು ಆಗಿದೆ. ನಾಲ್ಕು ವೋಟು ಜೆಡಿಎಸ್‌ಗೆ ಕೊಟ್ಟಿದ್ದೀವಿ ಎಂದು ಹೇಳಿದರು.
ನಮ್ಮಿಂದ ಮೂರು ಮತ ಕ್ರಾಸ್ ಆಗಿರೋದು ನಮಗೆ ಖಚಿತ ಆಗಿದೆ. ಅವರ ವಿರುದ್ಧ ಶಿಸ್ತು ಕ್ರಮ ಆಗುತ್ತೆ. ಯಾರು ಕ್ರಾಸ್ ವೋಟು ಹಾಕಿದ್ದಾರೆ ಅಂತ ಚರ್ಚೆ ಮಾಡ್ತೇವೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇವೆ ಎಂದಿದ್ದಾರೆ.



