1003597802

 

 

ಮೂಡಿಗೆರೆ ತಾಲ್ಲೂಕು ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಎಂ.ಎಸ್.ಪ್ರಸನ್ನ ಮುಗ್ರಹಳ್ಳಿ, ನೂತನ ಉಪಾಧ್ಯಕ್ಷರಾಗಿ ಶ್ರೀಮತಿ ದೀಪ್ತಿ ರಾಧಾಕೃಷ್ಣ ಬಿದರಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಂತರಿಕ ಒಪ್ಪಂದದಂತೆ ಈ ಹಿಂದಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಸಲಾಯಿತು.

ಚುನಾವಣೆಯಲ್ಲಿ ಅಧ್ಯಕ್ಷ ಎಂ.ಎಸ್. ಪ್ರಸನ್ನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ದೀಪ್ತಿ ಯವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಬಿ.ಎಸ್. ನಾಗರಾಜು(ಮಾಜಿ ಅಧ್ಯಕ್ಷರು), ವಿನಯ್ ಹಳೇಕೋಟೆ (ಮಾಜಿ ಅಧ್ಯಕ್ಷರು), ಬಿ.ಟಿ. ಶ್ರೀನಾಥ್ ಬಿದರಹಳ್ಳಿ, ಬಿ.ಸಿ.ದಿನೇಶ್ ಬಾಳೆಹಳ್ಳಿ, ಬಿ.ಆರ್. ವಿನಯ್ ಬಿದರಹಳ್ಳಿ, ಹೆಚ್.ವಿ. ರಾಘವೇಂದ್ರ ಹಳೇಕೋಟೆ, ಶ್ರೀಮತಿ ಸಾವಿತ್ರ ಬಿ.ಎಸ್. ಬಾಳೆಹಳ್ಳಿ, ಬಿ.ಪಿ. ರಂಗನಾಥ್ ಬಿದರಹಳ್ಳಿ, ಮಹಮ್ಮದ್ ಜಮೀರ್ ಅಂಜುಂ ಬಿದರಹಳ್ಳಿ, ರಮೇಶ್ ಹಳೇಕೋಟೆ, ಸಂಘದ ಮಾಜಿ ಅಧ್ಯಕ್ಷರುಗಳಾದ ಬಿ.ಎನ್. ಜಯಂತ್, ಬಿ.ಡಿ. ಮಂಜುನಾಥ್, ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಎಂ.ಎಸ್. ಪ್ರದೀಪ್, ದಿಶಾ ಸಮಿತಿ ಸದಸ್ಯರಾದ ಹೆಚ್.ಕೆ. ಮನೋಜ್, ಬಿಜೆಪಿ ಮುಖಂಡ ಹೆಚ್.ಬಿ.ಜಯಪಾಲ, ಬಿ.ಡಿ. ರಾಧಾಕೃಷ್ಣ, ಮಾಜಿ ನಿರ್ದೇಶಕರುಗಳು, ಸಿಇಓ ಚಂದ್ರಶೇಖರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ