ದಿನಾಂಕ 21/06/2026 ಭಾನುವಾರ ಮೂಡಿಗೆರೆ ಜೆ. ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.
ಜೆ. ಎಸ್ ಶಾಲೆಯ ನಿರ್ದೇಶಕರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಶಾಲೆಯ ಆವರಣದಲ್ಲಿ ಯೋಗಾಸನವನ್ನು ಮಾಡುವ ಮೂಲಕ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವಲ್ಲಿ ಯಶಸ್ಸಿನ ಕಾರ್ಯಕ್ರಮವಾಗಿ ಪೂರ್ಣಗೊಂಡಿತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ಅಥಿತಿಗಳಾದ ಪಿ. ಎನ್. ಜಗದೀಶ್ ಭಟ್ ಪಲ್ಗುಣಿ, ಶ್ರೀಮತಿ. ಗೀತಾ ಅಜಿತ್ ಮಾಜಿ ಅಧ್ಯಕ್ಷರು ಪಟ್ಟಣ ಪಂಚಾಯತಿ ಮೂಡಿಗೆರೆ, ಮನೋಜ್ ಕುಮಾರ್ ಮಾಜಿ ಸದಸ್ಯರು ಪಟ್ಟಣ ಪಂಚಾಯತಿ ಮೂಡಿಗೆರೆ, ಹಂಝ ಎಂ. ಎ ಮಾಜೀ ಸದಸ್ಯರು ಪಟ್ಟಣ ಪಂಚಾಯತಿ ಮೂಡಿಗೆರೆ, ಮೊಹಮ್ಮದ್ ಇಮ್ರಾನ್ ಅಧ್ಯಕ್ಷರು, ನಿರ್ದೇಶಕರು ಜೆ. ಎಸ್. ಶಿಕ್ಷಣ ಸಂಸ್ಥೆ ಹಾಗೂ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಬಣಕಲ್ ಹಾಗೂ ಪ್ರಾಂಶುಪಾಲರು ಮತ್ತು ಭೋದಕ ವೃ0ದದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



