NEWS 3

 

 

ರ್ಯಾಪಿಡ್ (RAPID) ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‍ಪಾರ್ಕ್ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಬೃಹತ್ ಪ್ರತಿ ಭಟನೆ ನಡೆಸಿದರು.

ಈ ವೇಳೆ ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ ನಗರದಲ್ಲಿ ಸುಮಾರು 4 ಸಾವಿರ ಆಟೋಗಳಿವೆ. ಅಲ್ಲದೇ ಚಿಕ್ಕಮಗಳೂರು ನಗರ ಪ್ರಸ್ತುತ ಯಾವುದೇ ಮಹಾನಗರ ಪಾಲಿಕೆಯಾಗಿಲ್ಲ. ಇದು ಅತ್ಯಂತ ಚಿಕ್ಕ ನಗರವಾಗಿದೆ ಎಂದು ತಿಳಿಸಿದರು.

ಪ್ರಸ್ತುತ ನಗರದಲ್ಲಿರುವ ಆಟೋಗಳಿಗೆ ಬಾಡಿಗೆ ಇಲ್ಲದೇ ಚಾಲಕರು ಮತ್ತು ಮಾಲೀಕರು ತುಂಬಾ ಸಂ ಕಷ್ಟದಲ್ಲಿದ್ದಾರೆ. ಈ ನಡುವೆ ನಗರಕ್ಕೆ ಹೆಚ್ಚಿನ ಆಟೋ ಪರವಾನಗಿಯನ್ನು ನೀಡಲಾಗುತ್ತಿದೆ. ಆದ್ದರಿಂದ  ಜಿಲ್ಲಾಡಳಿತ ನಗರಕ್ಕೆ ಹೊಸದಾಗಿ ಆಟೋ ಪರವಾನಗಿಯನ್ನು ನೀಡಬಾರದು ಎಂದರು.

ಆಟೋ ಬಾಡಿಗೆ ಕ್ಷೀಣಿಸುತ್ತಿರುವ ನಡುವೆ ರ್ಯಾಪಿಡ್ ಬೈಕ್ ಹಾವಳಿ ಸಂಖ್ಯೆ ನಗರದಲ್ಲಿ ಅನಧಿಕೃತ ವಾಗಿ ಸಂಚರಿಸುತ್ತಿವೆ. ಇದುವರೆಗೂ ರ್ಯಾಪಿಡ್ ಬೈಕ್‍ಗಳು ಯಾವ ಮಾನದಂಡದ ಮೇಲೆ ಬಾಡಿಗೆ ವಾಹನ ಗಳಾಗಿ ಸಂಚರಿಸುತ್ತಿರುವುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಹಳದಿ ಬೋರ್ಡ್ ದ್ವಿಚಕ್ರ ವಾಹನಗಳಿಗೆ ಪರವಾನಗಿ ಇಲ್ಲದೇ ಸಂಚರಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ವೈಟ್ ಬೋರ್ಡ್ ದ್ವಿಚಕ್ರ ವಾಹನಗಳನ್ನು ಸಹ ಬಾಡಿಗೆಗೆ ಬಳಸುತ್ತಿರುವುದು ಆಟೋ ಚಾ ಲಕರು ಮತ್ತು ಮಾಲೀಕರು ತುಂಬಲಾರದ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಆದ್ದರಿಂದ ಜಿಲ್ಲಾಡಳಿತ ಕೂಲಂಕೂಷವಾಗಿ ಪರಿಶೀಲಿಸಿ, ಆಟೋ ಪರವಾನಗಿಯನ್ನು ಮತ್ತು ದ್ವಿ ಚಕ್ರ ವಾಹನಗಳ ರ್ಯಾಪಿಡ್ ಬೈಕ್‍ಗಳನ್ನು ನಿಲ್ಲಿಸುವಂತೆ ಮನವಿ ಮಾಡಲಾಗುತ್ತಿದೆ. ಶೀಘ್ರವೇ ಈ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಅನಿರ್ದಿಷ್ಟಕಾಲ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ರಾಘವೇಂದ್ರ, ಪದಾಧಿಕಾರಿಗಳಾದ ನಿಸಾರ್, ಯಶ್ವಂತ್, ಅಶ್ವತ್, ಅಬ್ಬಾಸ್, ಅಣ್ಣು, ಜಗದೀಶ್ ಮರಬೈಲು, ಉದಯಕುಮಾರ್ ಮುಂತಾದವ ರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ