ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‍ಐಆರ್) ಕುರಿತು ಪ್ರತಿಯೊಬ್ಬರು ತಿಳಿದುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಎಸ್‍ಐಆರ್‍ಅನ್ನು ಯಾರು ಸಹ ನಿರ್ಲಕ್ಷೃ ಮಾಡುವಂತಿಲ್ಲ, ನಿರ್ಲಕ್ಷೃ ಮಾಡಿದರೆ ಮತದಾನದಿಂದ ವಂಚಿತರಾಗುತ್ತಾರೆ ಎಂದು ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಮಲ್ಲಂದೂರು ರಸ್ತೆ ಸಮೀಪ ಸಲಾಂ ಮಸೀದಿಯಲ್ಲಿ ಎಸ್‍ಐಆರ್ ಕುರಿತು ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಹೋದರೆ ಮತ ದಾನಕ್ಕೆ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮನವರಿಕೆ ಮಾಡಿದರು.
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಕೈಬಿಡದಂತೆ ಕಾಂಗ್ರೆಸ್ ಕಾರ್ಯಕರ್ತರು, ಬಿಎಲ್‍ಎ-2 ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ಜಾಗೃತಿ ಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮನೆ ಮನೆಗೆ ತೆರಳಿ ಮತದಾರರಿಗೆ ಅಗತ್ಯ ಮಾಹಿತಿ ನೀಡಿ, ಅವರ ಮತದಾನದ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮತದಾರರ ಹಕ್ಕುಗಳ ಸಂರಕ್ಷಣೆಗೆ ಎಲ್ಲರೂ ಸಂಘಟಿತವಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಮತದಾರರ ಪರಿಷ್ಕರಣೆ ಕಾರ್ಯವು ಬಿಎಲ್‍ಓ ಮತ್ತು ಬಿಎಲ್‍ಎ-2 ಪ್ರತಿನಿಧಿಗಳ ಸೀಮಿತಗೊಳಿಸದೇ ನಗರದ ಪ್ರತಿ ವಾರ್ಡ್‍ಗಳಲ್ಲಿ ಕಾಂಗ್ರೆಸ್ ನಗರಸಭಾ ಸದಸ್ಯರು ಹಾಗೂ ಸೋತಿರುವ ವಾರ್ಡ್‍ಗಳಲ್ಲಿ ಸ್ಥಳೀ ಯ ಮುಖಂಡರು ಜವಾಬ್ದಾರಿ ತೆಗೆದುಕೊಂಡು ಈ ಎಸ್‍ಐಆರ್ ಕೆಲಸಕ್ಕೆ ಮುಂದಾಗಬೇಕು ಎಂದರು.
ವಕ್ಫ್ ಸಲಹಾ ಮಂಡಳಿ ಮಾಜಿ ಅಧ್ಯಕ್ಷ ಮಹಮ್ಮದ್ ಶಾಹೀದ್ ರಜ್ವಿ ಮಾತನಾಡಿ ಎಸ್.ಐ.ಆರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧಾರ ಎಲ್ಲರೂ ಮಾಡಬೇಕಿದೆ. ಮತಗಳ ಹಕ್ಕು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಪ್ರತಿಯೊಬ್ಬರು ಮುಖ್ಯ ಜವಾಬ್ದಾರಿಯಾಗಬೇಕು ಎಂದು ಹೇಳಿದರು.
ಫಾರಂ ಭರ್ತಿ ಮಾಡುವ ಜವಾಬ್ದಾರಿಯನ್ನು ಇತರರ ಮೇಲೆ ಹಾಕದೆ ಸ್ವತಃ ಪರಿಶೀಲಿಸಿ ಸಲ್ಲಿಸಬೇಕು. ಹೆಸರು, ಜನ್ಮ ದಿನಾಂಕ, ವಿಳಾಸ, ಕುಟುಂಬದ ವಿವರ ಸೇರಿದಂತೆ ಯಾವುದೇ ಮಾಹಿತಿಯಲ್ಲಿ ತಪ್ಪು ಉಂ ಟಾದರೆ ಮುಂದೆ ಮತದಾರರ ಪಟ್ಟಿಯಿಂದ ಹಲವು ಸಮಸ್ಯೆಗಳು ಎದುರಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಟಿಪ್ಪುಸುಲ್ತಾನ್ ಚಾರಿಟಬಲ್ ಟ್ರಸ್ಟ್ ರಾಜ್ಯಾ ಧ್ಯಕ್ಷ ಜಂಶೀದ್‍ಖಾನ್, ನಗರಸಭೆ ಸದಸ್ಯರಾದ ಮುನೀರ್ ಅಹ್ಮದ್, ಸಿಡಿಎ ಸದಸ್ಯ ನೂರ್ ಅಹ್ಮದ್, ಮು ಖಂಡರುಗಳಾದ ರಸೂಲ್‍ಖಾನ್, ಯೂಸೂಫ್‍ಹಾಲಿ, ಫೈರೋಜ್ ಅಹ್ಮದ್ ರಜ್ವಿ, ಅಂಜುಮಾನ ಇಸ್ಲಾಮಿಯಾ ಮಸೀದಿ ಅಧ್ಯಕ್ಷ ಶ್ರೀರಾಜ್‍ಖಾನ್ ಮುಂತಾದವರು ಉಪಸ್ಥಿತರಿದ್ದರು.



