ಮಾದಕ ವ್ಯಸನವು ಯುವಜನತೆ ಯೌವ್ವನ, ಆರೋಗ್ಯ ಹಾಗೂ ಸುಂದರ ಬದುಕನ್ನು ಹೀರಿಕೊಳ್ಳುತ್ತಿದೆ. ಈ ದುಶ್ಚಟಗಳ ಸಹವಾಸಕ್ಕೆ ಅಂಟಿಕೊಳ್ಳದೇ, ನಿಗಧಿತ ಅಂತರ ಕಾಯ್ದುಕೊಂಡು ರಾಷ್ಟ್ರದ ಸತ್ರ್ಪಜೆಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾದೀಶ ವಿ.ಹನುಮಂತಪ್ಪ ಹೇಳಿದರು.
ನಗರದ ಟಿಎಂಎಸ್ ಕಾಲೇಜು ಸಭಾಂಗಣದಲ್ಲಿ ಶ್ರೀ ಶಕ್ತಿ ಅಸೋಸಿಯೇಷನ್, ಶ್ರೀ ಶಕ್ತಿಮದ್ಯಪಾನ ಸೇ ವನಿಗಳ ಸಮಗ್ರ ಪುನರ್ವಸತಿ ಕೇಂದ್ರ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾ ಖೆ, ಎನ್.ಸಿ.ಓ.ಆರ್.ಡಿ. ಸಹಯೋಗದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ಧ ಅಂತರಾಷ್ಟ್ರೀಯ ಮಾದ ಕ ವಸ್ತುಗಳ ವಿರೋಧಿ ದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದ್ರವ್ಯದಂತಿರುವ ಮಾದಕ ವಸ್ತುವಿನ ಮೇಲೆ ಸೇವನೆ ಆರೋಗ್ಯಕ್ಕೆ ಹಾನಿಕಾರ ಎಂಬ ಎಚ್ಚರಿಕೆ ಗಂಟೆ ಯಿದ್ದರೂ ಸೇವನೆಗೆ ಮುಂದಾಗುತ್ತಾರೆ. ಅದೇ ವಿಷ ಪದಾರ್ಥಗಳು ಸೇವಿಸುವುದಿಲ್ಲ. ಯಾಕೆಂದರೆ ಸಾವು ಸಂಭವಿಸುತ್ತವೆ ಎಂಬ ಭಯ. ಅದರಂತೆಯೇ ಮಾದಕ ದ್ರವ್ಯವು ಕೂಡಾ ನಿಧಾನಗತಿ ವಿಷಪ್ರಾಷಣವಿದ್ದಂತೆ, ಅನಾರೋಗ್ಯದ ಮೊದಲು ಮೆಟ್ಟಿಲು ಎಂದರು.
ಪ್ರೌಢಶಾಲಾ ಅಥವಾ ಕಾಲೇಜು ಹಂತದಲ್ಲಿ ಸ್ನೇಹಿತರ ಜನ್ಮದಿನಕ್ಕೆ ಕೆಲವರು ದುಶ್ಚಟಕ್ಕೆ ತಳ್ಳುತ್ತಾರೆ. ಈ ಬಗ್ಗೆ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಈ ಚಟಗಳು ಯುವ ಸಮುದಾಯಕ್ಕೆ ಹೊಸತನ, ಮೋಜಿನ ತಾ ಣವಾಗಬಹುದು. ಆದರೆ ಚಟ ದಿನೇ ದಿನೇ ಹೆಚ್ಚಳಗೊಂಡು ವ್ಯಸನಕ್ಕೆ ದಾಸರಾಗುವ ಮುಖೇನಾ ಓದು ಹಾ ಗೂ ಜೀವನ ಕಿತ್ತುಕೊಳ್ಳುತ್ತದೆ ಎಂದು ಎಚ್ಚರಿಸಿದರು.
ರಾಷ್ಟ್ರದ ಅತಿದೊಡ್ಡ ಯುವಸಂಪತ್ತನ್ನು ಹಾಳು ಮಾಡುವ ದೃಷ್ಟಿಯಿಂದ ಕಾಣದ ಕೈಗಳು ಮಾದಕ ದ್ರ ವ್ಯಗಳ ಮಾರಾಟಕ್ಕೆ ಮುಂದಾಗುತ್ತಿದೆ. ಈ ರೀತಿ ಮಾರಾಟಗಳು ಕಾಲೇಜು ಅಕ್ಕಪಕ್ಕದ ಕಂಡುಬಂದಲ್ಲಿ ಶೀಘ್ರ ವೇ ಪ್ರಾಂಶುಪಾಲರು, ಪಾಲಕರು ಅಥವಾ ಆರಕ್ಷಕ ಠಾಣೆಗೆ ಮಾಹಿತಿ ತಿಳಿಸುವ ಮೂಲಕ ಯುವಸಮೂಹ ವನ್ನು ಕಾಪಾಡಬೇಕು ಎಂದು ಸಲಹೆ ಮಾಡಿದರು.
ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಬಿ.ಕೆ.ಭಾಗ್ಯಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಾಹನ ನಿಯಂತ್ರಣ ಕಳೆದುಕೊಂಡರೆ ಅಪಘಾತ ನಿಶ್ಚಿತ. ಅದೇ ರೀತಿ ಯುವಕರು ಮಾದಕ ವಸ್ತುಗಳ ಬಳ ಸಿದರೆ ಜೀವನದ ಹಾದಿ ತಪ್ಪಿ ಮದ್ಯವಯಸ್ಸಿನಲ್ಲೇ ಸಾವು ಖಚಿತವಾಗುತ್ತದೆ. ಈ ರೀತಿ ಚಟುವಟಿಕೆಗೆ ಮಾರು ಹೋಗದೇ ವಿದ್ಯಾಭ್ಯಾಸದ ಕಡೆ ಹೆಚ್ಚು ಒತ್ತು ನೀಡಬೇಕು ಎಂದರು.
ದುಶ್ಚಟಗಳು ಯುವಕರ ಬಾಳಲ್ಲಿ ಒಮ್ಮೆ ಅಂಟಿಕೊಂಡರೆ, ಹೊರಬರಲು ಹರಸಾಹಸಪಡಬೇಕು. ಹೀ ಗಾಗಿ ದುಶ್ಚಟಗಳು ದೂರವಿರಲು ಮನಸ್ಸಿನಲ್ಲಿ ಆಧ್ಯಾತ್ಮಕ ಚಿಂತನೆ, ಯೋಗ, ಧ್ಯಾನ, ವ್ಯಾಯಾಮದ ಹವ್ಯಾಸ ಮತ್ತು ಹಿರಿಯರ ಮಾರ್ಗದರ್ಶ ಪಡೆದುಕೊಂಡಲ್ಲಿ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದು ತಿಳಿಸಿದರು.
ಮಾನಸಿಕ ರೋಗ ತಜ್ಞ ಡಾ|| ವಿನಯ್‍ಕುಮಾರ್ ಮಾತನಾಡಿ ವ್ಯಸನಗಳಿಗೆ ದಾಸರಾಗುವವರು ಜೀವ ನದ ಜಿಗುಪ್ಸೆ, ಪ್ರೀತಿಯಿಂದ ವಂಚಿತ, ಖಿನ್ನತೆ, ಸಂತೋಷ ಹಾಗೂ ದುಃಖ ಸೇರಿದಂತೆ ಮುಂತಾದ ಕಾರಣ ಗಳಿಗೂ ವ್ಯಸನಿಗಳಗುತ್ತಾರೆ. ಆದರೆ ಸರ್ಕಾರ ಆರೋಗ್ಯ ರಕ್ಷಿಸಬೇಕು ಎಂಬ ಕಾನೂನು ರೂಪಿಸಿ, ಇನ್ನೊಂ ದೆಡೆ ಮದ್ಯಪಾನ, ಧೂಮಪಾನ, ಗುಟ್ಕಾದಂಥ ಮಾರಾಟಕ್ಕೆ ಅನುಮತಿ ನೀಡುತ್ತಿರುವುದು ದುರ್ದೈವದ ಸಂ ಗತಿ ಎಂದರು.
ಐ.ಆರ್.ಸಿ.ಎ. ಯೋಜನಾ ನಿರ್ದೇಶಕ ಡಾ|| ಅನೀತ್‍ಕುಮಾರ್ ಮಾತನಾಡಿ ಸದೃಢ ಆರೋಗ್ಯ, ಸುಂ ದರ ಮೈಗಟ್ಟು ಸಂಪಾದಿಸಲು ಯೋಗದಂಥ ಚಟುವಟಿಕೆಗಳಲ್ಲಿ ಯುವಜನತೆ ಭಾಗವಹಿಸಬೇಕು. ದಿನದ ಕೆಲವು ಗಂಟೆಗಳು ಯೋಗ, ಧ್ಯಾನದಲ್ಲಿ ತೊಡಗಿಸಿಕೊಂಡಲ್ಲಿ ಯಾವುದೇ ದುಶ್ಚಟ ಹತ್ತಿರ ಸುಳಿಯಲು ಸಾಧ್ಯ ವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನೇತ್ರಾ ವೆಂಕಟೇಶ್, ಟೌನ್ ಮಹಿಳಾ ಸಮಾಜ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿನಯ್‍ಸುವರ್ಣ, ಐ.ಆರ್.ಸಿ.ಎ. ವ್ಯವಸ್ಥಾಪಕ ಮಂಜುನಾ ಥ್ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಿಬ್ಬಂದಿಗಳು, ವಿದ್ಯಾ ರ್ಥಿಗಳು ಉಪಸ್ಥಿತರಿದ್ದರು.



