ಮೂಡಿಗೆರೆ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಜಿಲ್ಲಾಧಿಕಾರಿ ಭಂವರ್‍ಸಿಂಗ್ ಮೀನಾ ಅವರು ಸೋಮವಾರ ದಿಢೀರ್ ಭೇಟಿ ನಂತರ ಅಮೃತ್ ಯೋಜನೆ ಕಾಮಗಾರಿ ಹಾಗೂ ಕಸ ವಿಲೇವಾರಿ ಘಟಕ ಪರಿಶೀಲನೆ ನಡೆಸಿದರು.
ಅಮೃತ್ ಯೋಜನೆಯಡಿಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕಳೆದ 3 ತಿಂಗಳ ಹಿಂದೆ ರಸ್ತೆಯನ್ನು ಬಗೆದು ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಹಾಗೂ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದ್ದು, ಯಾವುದೇ ಕ್ರಮ ವಹಿಸದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಿ ಗುಂಡಿಗಳನ್ನು ಮುಚ್ಚಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿ ಮಾರುತಿ, ಎಂಜಿನಿಯರ್ ಆನಂದ್ ಅವರಿಗೆ ಸೂಚಿಸಿದರು.
ನಂತರ ಕಸವಿಲೇವಾರಿ ಘಟಕ ಮತ್ತು ಕುಂಡಿಯುವ ನೀಡಿನ ಪಂಪ್‍ಹೌಸ್‍ಗೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಕಸ ವಿಲೇವಾರಿ ಘಟಕ ಕುಡಿಯುವನೀರಿನ ಪೂರೈಕೆಯಾಗುತ್ತಿರುವ ಪಂಪ್‍ಹೌಸ್ ಸ್ವಚ್ಛತೆ ಕಾಪಾಡಬೇಕು. ಪ.ಪಂ. ಮುಖ್ಯಾಧಿಕಾರಿ ಕಲಾವತಿ ಅವರಿಗೆ ಸೂಚನೆ ನೀಡಿದರು.


