nayana t a

 

 

ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ಇವರ ಪರಿಷತ್ ಸದಸ್ಯತ್ವ ಕೋರ್ಟ್ ನಿಂದ ರದ್ದತಿಯಾಗಿದ್ದು. ಇದು ನಿಜಕ್ಕೂ ಸಜ್ಜನ ಸರಳ ಮತ್ತು ಪ್ರಾಮಾಣಿಕ ರಾಜಕಾರಣದ ನೈತಿಕತೆಯ ಸೋಲು ಎಂದು ಬಿಜೆಪಿ ಪಕ್ಷದ ಮುಖಂಡ ನಯನ ತಳವಾರ ತಿಳಿಸಿದ್ದಾರೆ

ಪತ್ರಿಕೆಗೆ ಮಾಹಿತಿ ನೀಡಿದ ಅವರು. ಕಳೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಗೆ ಎಂ ಕೆ ಪ್ರಾಣೇಶ್ ಬಿಜೆಪಿಯಿಂದ ಗಾಯತ್ರಿ ಶಾಂತಗೌಡ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಅಂತಿಮ ಫಲಿತಾಂಶದಲ್ಲಿ ಆರು ಮತಗಳ ಆಧಾರದಲ್ಲಿ ಎಂ ಕೆ ಪ್ರಾಣೇಶ್ ಜಯಗಳಿಸಿ ಪರಿಷತ್ತಿಗೆ ಪ್ರವೇಶ ಪಡೆದಿದ್ದರು. ಆದರೆ ಇದನ್ನು ಒಪ್ಪದ ಗಾಯತ್ರಿ ಶಾಂತೆ ಗೌಡ ನಾಮಿನಿ ಸದಸ್ಯರ ಮತಗಳನ್ನು ಹಾಕಿಸಿಕೊಂಡು ಪ್ರಾಣೇಶ್ ಗೆದ್ದಿದ್ದಾರೆ. ಎಂದು ಕೋರ್ಟಿಗೆ ಮೊರೆ ಹೋಗಿದ್ದು. ( ಈ ನಾಮಿನಿ ಮತಗಳು ಪ್ರಾಣೇಶ್ ಇವರಿಗೆ ಮಾತ್ರ ಸೀಮಿತವಾಗಿ ಬಿದ್ದದ್ದಲ್ಲ ರಾಜ್ಯದ ಎಲ್ಲಾ ವಿಧಾನ ಪರಿಷತ್ ಸದಸ್ಯರು ಈ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರಿಗೆ ಒಂದು ನ್ಯಾಯ. ಪ್ರಾಣೇಶ್ ಗೆ ಒಂದು ನ್ಯಾಯ. ಇದು ಒಟ್ಟಾರೆ ನ್ಯಾಯಾಂಗದ ಪರಮಾಧಿಕಾರ) ಈ ಸಂದರ್ಭದಲ್ಲಿ ಕೋರ್ಟ್ ನಲ್ಲಿ ಕಳೆದ ನಾಲ್ಕುವರೆ ವರ್ಷ ಪ್ರಕರಣ ನಡೆದು. ಅಂತಿಮವಾಗಿ ಸುಪ್ರೀಂಕೋರ್ಟ್ ಆದೇಶದಂತೆ ಗಾಯತ್ರಿ ಶಾಂತಿ ಗೌಡ ಗೆಲುವು ಸಾಧಿಸಿದ್ದಾರೆ ಎಂದು ಆದೇಶಿಸಿದೆ

ಇಲ್ಲಿ ಕಾನೂನು ನ್ಯಾಯಾಂಗ ಏನೇ ಇರಲಿ. ಆದರೆ ನಿಜಕ್ಕೂ ಇದೊಂದು ನೈತಿಕತೆಯ ಸೋಲು. ಈ ಹಿಂದೆ ಗಾಯತ್ರಿ ಶಾಂತೆಗೌಡ ವಿಧಾನಪರಿಷತ್ ಸದಸ್ಯರಾಗಿದ್ದ ಸಂದರ್ಭ ಇದೇ ರೀತಿಯ ನಾಮಿನಿ ಮತಗಳನ್ನು ಇವರು ಕೂಡ ಪಡೆದು ಗೆಲವು ಸಾಧಿಸಿದ್ದರು. ಆಗ ಈ ನಾಮಿನಿ ಮತಗಳು ಖುಷಿ ತಂದಿದ್ದವು. ಈ ನಾಮಿನಿ ಮತದಾರರಿಗೆ ಹಕ್ಕನ್ನು ಎಸ್‍ಎಂ ಕೃಷ್ಣ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದು ಅದು ಕಾಂಗ್ರೆಸ್ನ ಸರ್ಕಾರವೇ ಆಗಿತ್ತು. ಆದರೆ ತನ್ನದೇ ಸರ್ಕಾರದ ಆದೇಶ ತಾನು ಸೋತ ವೇಳೆ ಅನ್ವಯ ಆಗುವುದಿಲ್ಲ ಎಂಬ ಧೋರಣೆ ಎಷ್ಟು ಸರಿ. ಈ ಹಿಂದೆ ಇದೆ ನಾಮಿನಿ ಮತಗಳಿಂದ ಗಾಯಿತ್ರಿ ಗೆದ್ದಿರಲಿಲ್ಲವೇ ಎಂದ ಅವರು.

ಇಲ್ಲಿ ಕಳೆದ 40 ವರ್ಷದಿಂದ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಪ್ರಾಣೇಶ್ ಯಾವುದೇ ಗುತ್ತಿಗೆ ಕಾಮಗಾರಿ ಮಾಡಲಿಲ್ಲ. ಟ್ರಾಸ್ಪರ್ ದಂದೆ. ಡೀಲ್ ಮಾಡಲಿಲ್ಲ. ಅವ್ಯವಹಾರ ಮಾಡಲಿಲ್ಲ 10 ವರ್ಷ ಅಧಿಕಾರ ಇದ್ದರೂ ತನ್ನ ಸರಳ ಸಜ್ಜನ ಪ್ರಾಮಾಣಿಕ ರಾಜಕೀಯದಿಂದ ರಾಜ್ಯದ ಮನೆ ಮಾತಾದವರು. ಇವರ ಕೈಯಲ್ಲೂ ಭ್ರಷ್ಟ ಹಣ ಇದ್ದಿದ್ದಲ್ಲಿ ಇವರು ಹತ್ತಾರು ಕೋಟಿ ವಕೀಲರಿಗೆ ಕೇಸನ್ನ ವಹಿಸಿ ಗೆಲ್ಲಬಹುದಿತ್ತೇನೋ… ಆದರೆ ಅಲ್ಲೂ ಕೂಡ ತಮ್ಮ ಪ್ರಾಮಾಣಿಕತೆ ಮೆರೆದರು.

ಪ್ರಾಣೇಶ್ ರವರ ಸದಸ್ಯತ್ವ ರದ್ದತಿ ಯಾವುದೇ ಕಾರ್ಯಕರ್ತರ ಮತ್ತು ಪಕ್ಷದ ನೈತಿಕತೆಯನ್ನು ಕುಗ್ಗಿಸುತ್ತಿಲ್ಲ. ಅವರ ಪ್ರಾಮಾಣಿಕತೆ ಸರಳ ವ್ಯಕ್ತಿತ್ವ ಮತ್ತಷ್ಟು ಮೇರು ಮಟ್ಟಕ್ಕೆ ತಲುಪಿದ್ದು ಯುವಕರಿಗೆ ಕಾರ್ಯಕರ್ತರಿಗೆ ಹೆಮ್ಮೆಯ ಸೆಲೆಯಾಗಲಿದೆ ಎಂದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ