ಗೋಣಿಬೀಡು ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ಜನ್ನಾಪುರ ವರ್ತಕರ ಭವನದಲ್ಲಿ ಸಂಭ್ರಮದಿಂದ ನೆರವೇರಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಜಿಲ್ಲಾ ಡಿಜಿಇ ಅಲೆನ್ ವಿನಯ ಲಿವಿಸ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿದರು. ರೋಟರಿ ಕಾರ್ಯಚಟುವಟಿಕೆಗಳಲ್ಲಿ ಸದಸ್ಯರು ಹೆಚ್ಚಿನ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು..
ಗೋಣಿಬೀಡು ರೋಟರಿ ನೂತನ ಅಧ್ಯಕ್ಷರಾಗಿ ಎನ್.ಕೆ. ನಯನ್ ಹಾಗೂ ಕಾರ್ಯದರ್ಶಿಯಾಗಿ ಕೆ.ಸಿ. ವಿನಯ್ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಳೆದ ಸಾಲಿನ ಅಧ್ಯಕ್ಷ ಜೆ.ಸಿ. ಮಹಿಪಾಲ್ ಅವರು ತಮ್ಮ ಅವಧಿಯಲ್ಲಿ ಅನುಷ್ಠಾನಗೊಳಿಸಿದ ಸೇವಾ ಕಾರ್ಯಗಳ ಬಗ್ಗೆ ವಿವರ ನೀಡಿ. ಕಳೆದ ಸಾಲಿನಲ್ಲಿ ಹತ್ತಾರು ಸೇವಾ ಕಾರ್ಯಗಳನ್ನು ನಡೆಸಲಾಗಿದೆ. ಇದಕ್ಕೆಲ್ಲಾ ಬೆಂಬಲವಾಗಿ ನಿಂತ ಸದಸ್ಯರು ಮತ್ತು ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ನಿರ್ಗಮಿತ ಕಾರ್ಯದರ್ಶಿ ಎಂ.ಪಿ. ರಾಮು ವಾರ್ಷಿಕ ವರದಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ. ಗಣೇಶ್, ಜೋನಲ್ ಲೆಪ್ಟಿನೆಂಟ್ ಪ್ರಕಾಶ್ ಯು.ವಿ. , ಖಜಾಂಚಿ ಎನ್.ಜೆ. ರಮೇಶ್ ಉಪಸ್ಥಿರಿದ್ದು ಶುಭ ಹಾರೈಸಿದರು. ಕಾರ್ಯದರ್ಶಿ ಕೆ.ಸಿ. ವಿನಯ್ ವಂದನಾರ್ಪಣೆ ಸಲ್ಲಿಸಿದರು.


