ಕನ್ನಡ ಸಾಹಿತ್ಯ ಪರಿಷತ್ತು ಗೋಣಿಬಿಡು ಹೋಬಳಿ ವತಿಯಿಂದ ಜನ್ನಾಪುರದ ಸಂವತ್ಸರ ನಿಲಯದಲ್ಲಿ ನಿವೃತ್ತ ಶಿಕ್ಷಕರಾದ ರಾಜಕುಮಾರ್ ರವರ ನಿವಾಸದಲ್ಲಿ ಶ್ರಾವಣ ಸಂಜೆ ಸಂಭ್ರಮ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಂತಕುಮಾರ್ ನಿಕಟ ಪೂರ್ವ ಅಧ್ಯಕ್ಷರು ಉದ್ಘಾಟಿಸಿ ಮಾತನಾಡಿದ ಅವರು ಶ್ರಾವಣ ಸಂಜೆ ಸಂಭ್ರಮದಲ್ಲಿ ನಾವೆಲ್ಲರೂ ಭಾಗಿಯಾಗಿರುವುದು ಸಂತಸ ತಂದಿದೆ ಈ ರೀತಿಯ ಕಾರ್ಯಕ್ರಮಗಳು ಮನೆಗಳಲ್ಲಿ ನಡೆದರೆ ಕನ್ನಡವು ತಾನಾಗಿ ಉಳಿಯುತ್ತದೆ ಎಂದರು. ಆಶಯ ನುಡಿಯನ್ನು ನುಡಿದ ಮೂಡಿಗೆರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿಕೆ ಲಕ್ಷ್ಮಣ್ ಗೌಡ ರವರು ಗೋಣಿ ಬಿಡು ಹೋಬಳಿಯಲ್ಲಿ ನಿರಂತರವಾಗಿ ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತದೆ ಕನ್ನಡವನ್ನು ಪ್ರೀತಿಸಿ ಬೆಳೆಸಬೇಕು ಮತ್ತು ಭಾಷಾಭಿಮಾನ ಜತೆಗೆ ಕನ್ನಡ ಅಭಿಮಾನ ಮುಖ್ಯವಾಗಿರಬೇಕು ಎಂದರು
ಕಾರ್ಯಕ್ರಮದಲ್ಲಿ ಶ್ರಾವಣ ಸಂಜೆ ಸಂಭ್ರಮ ಕುರಿತಂತೆ ಉಪನ್ಯಾಸವನ್ನು ಶ್ರೀಮತಿ ಅನಿತಾ ಜಗದೀಪ್ ರವರು ನೀಡಿದರು ಈ ತಿಂಗಳಲ್ಲಿ ಶ್ರಾವಣ ನಕ್ಷತ್ರ ಬರೋದ್ರಿಂದ ಶ್ರಾವಣ ಮಾಸ ಎಂದು ಹೇಳಲಾಗುತ್ತದೆ ಶ್ರಾವಣ ಅಂದರೆ ಕೇಳುವುದು ಎಂಬುದು ಅರ್ಥ ಈ ಮಾಸದಲ್ಲಿ ಕಥಾ ಶ್ರಾವಣ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ ಧರ್ಮವು ತನ್ನದೇ ಆದಂತ ವೈಶಿಷ್ಟತೆ ಮತ್ತು ಪವಿತ್ರತೆಯನ್ನು ಹೊಂದಿದೆ ಈ ಮಾಸದಲ್ಲಿ ನಾಗರಪಂಚಮಿ ವರಮಹಾಲಕ್ಷ್ಮಿ ವೃತ ನೂಲು ಹುಣ್ಣಿಮೆ ರಕ್ಷಾಬಂಧನ ಶ್ರೀ ಕೃಷ್ಣ ಜನ್ಮಾಷ್ಟಮಿ ಹೀಗೆ ಹಬ್ಬದ ಸರಮಾಲೆಗಳೇ ಇರುತ್ತವೆ. ಶ್ರಾವಣ ಮಾಸದ ಆಹಾರ ವೈಶಿಷ್ಟತೆ ವಿಭಿನ್ನವಾಗಿರುತ್ತದೆ ಮಳೆಗಾಲದ ಮಧ್ಯಭಾಗದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಮಾಂಸ ಮೀನು ಹಾಗೂ ಇನ್ನಿತರ ಆಹಾರವನ್ನು ಹೆಚ್ಚು ತ್ಯಜಿಸಲಾಗುತ್ತದೆ ಜೀರ್ಣ ಶಕ್ತಿಗೆ ಎಣ್ಣೆ ಮತ್ತು ಹೆಚ್ಚಿನ ಕೊಬ್ಬಿನ ಆಹಾರವನ್ನು ನಿರಾಕರಣೆ ಮಾಡಲಾಗುತ್ತದೆ ಇದು ಭಕ್ತಿಗೆ ಸೀಮಿತವಲ್ಲ ನಮ್ಮ ಆರೋಗ್ಯಕ್ಕೂ ಅನುಕೂಲಕರವಾಗಿದೆ ಎಂದರು
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ರಾಜಕುಮಾರ್ ರವರಿಗೆ ಅವರ ಅವಿರತ ಸೇವೆಯನ್ನ ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತು ಗೋಣಿಬೀಡು ಹೋಬಳಿ ವತಿಯಿಂದ ಗೌರವ ಪತ್ರವನ್ನು ನೀಡಿ ಗೌರವಿಸಲಾಯಿತು,
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಗೋಣಿಬಿಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನವೀನ್ ಆನೆದಿಬ್ಬ ವಹಿಸಿದ್ದರು
ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯಾಧ್ಯಕ್ಷರಾದ ಎಂಎಸ್ ನಾಗರಾಜ್ ಉಸ್ತುವಾರಿ ಸಂಚಾಲಕರಾದ ವಿ ಪಿ ನಾರಾಯಣ್ ಹೋಬಳಿ ಅಧ್ಯಕ್ಷರುಗಳಾದ ರವಿ ಕುನ್ನಳ್ಳಿ ಲೋಕೇಶ್ ಬೆಟ್ಟಗೆರೆ ಸೋಮೇಶ್ ಮರ್ಕಲ್ ಮತ್ತು ಕಾಫಿ ನಾಡು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಹಸೇನರ್ ಬಿಳಗುಳ ಜಗದೀಪು ಗೋಣಿಬೀಡು ರೋಟರಿ ಅಧ್ಯಕ್ಷರಾದ ನಯನ್ ಮತ್ತು ಶತಾಬಿ . ಮತ್ತು ಕುಟುಂಬಸ್ಥರು ಇದ್ದರು


