September 11, 2026
;
mj dinesh

 

 

ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಮತ್ತು ಮಂಡಳಿ ವತಿಯಿಂದ ದೊರೆಯುವ ವಿವಿಧ ಅನುದಾನ ಮತ್ತು ಸಬ್ಸೀಡಿಗಳನ್ನು ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಇಲ್ಲಿನ ಅಧಿಕಾರಿಗಳು ತಲುಪಿಸಬೇಕು. ಎಂದು ಕಾಫಿಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ತಿಳಿಸಿದರು.

ಅವರು ಮೂಡಿಗೆರೆ ಕಾಫಿ ಮಂಡಳಿ ಕಚೇರಿಗೆ ಬುಧವಾರ ದಿಢೀರ್ ಭೇಟಿ ನೀಡಿ  ಕಚೇರಿಯಲ್ಲಿ ಬೆಳೆಗಾರರಿಗೆ ದೊರೆಯುವ ವಿವಿಧ ಯೋಜನೆಗಳ ವಿವರಗಳನ್ನು ಅಧಿಕಾರಿಗಳಿಂದ ಪಡೆದು. ನಂತರ ಅಧಿಕಾರಗಳನ್ಮು ಉದ್ದೇಶಿಸಿ ಬೆಳೆಗಾರರಿಗೆ ಕಾಫಿ ಮಂಡಳಿಯೇ ಪ್ರಮುಖ ಸ್ಪಂದನ ಕೇಂದ್ರವಾಗಿರಬೇಕು. ಪ್ರಮುಖವಾಗಿ ಗೋಡಾನ್, ಕಾಫಿ ಒಣಗಿಸುವ ಕಣ ನಿರ್ಮಾಣ. ಬೆಳೆಗಳಿಗೆ ನೀರಾವರಿ. ಕಾಫಿ ಒಣಗಿಸುವ ವಿವಿಧ ವಿದಗಳು. ಗುಣಮಟ್ಟ ಕಾಪಾಡುವಿಕೆ.  ಸಸಿ ಮಡಿ ತಯಾರಿಕೆ.  ಸೇರಿದಂತೆ ಅನೇಕ ಸಬ್ಸಿಡಿ ಸ್ಕೀಮ್ ಗಳನ್ನು ರೈತರಿಗಾಗಿಯೇ ಕಾಫಿ ಮಂಡಲಿ ಮೂಲಕ ಕೇಂದ್ರ ನೀಡುತ್ತಿದೆ. ಅಲ್ಲದೆ ಕೊಳೆರೋಗ. ರಾಸಾಯನಿಕಗಳ ಸಿಂಪಡಣೆ. ಗೊಬ್ಬರ ಬಳಕೆ. ತಳಿ ಆಯ್ಕೆ ಮಾರಾಟ ಮುಂತಾದ ತೊಂದರೆಗಳು ಬೆಳೆಗಾರರಲ್ಲಿದ್ದು. ಬೆಳೆಗಾರರು ತರುವ ಪ್ರಮುಖ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ ಕೊಡಬೇಕು ಎಂದು ಸೂಚಿಸಿದರು.

ಚಿಕ್ಕ ಹಳ್ಳ ರಸ್ತೆಯಲ್ಲಿ ಹೆಸಗಲ್ ನಲ್ಲಿ ಸುಮಾರು 23 ಎಕರೆ ಕಾಫಿ ಮಂಡಳಿಯ ತಂತ್ರಜ್ಞಾನ ಮೌಲ್ಯಮಾಪನ ಕೇಂದ್ರವಿದ್ದು ಇಲ್ಲಿ ತಳಿ ಸಂಶೋದನೆ. ಸಸಿಬೀಜಗಳು ಹೊಸ ತಳಿಗಳ ಪ್ರಾತ್ಯಕ್ಷಿಕೆ. ಬೆಳವಣಿಗೆ ಪ್ರಯೋಗ. ಮತ್ತು ಬೆಳೆಗಾರರಿಗೆ ಪರಿಚಯ ಮಾಡಿಕೊಡಲಾಗುತ್ತಿದ್ದು ಮುಂದಿನ ಐದು ವರ್ಷಗಳಲ್ಲಿ  ಮತ್ತಷ್ಟು ಮೋಲ್ದರ್ಜೆಗೆರಿಸುವ  ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ಕಾಫಿ ಮಂಡಳಿ ಅಧಿಕಾರಿ ತಾರಾ ಹಾಗೂ ಸಹ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;