September 11, 2026
;
angadi

 

 

ಆಶ್ರಿತಾ ಸಂಸ್ಥೆ ಚಿಕ್ಕಮಗಳೂರು ಮತ್ತು ಸರ್ಕಾರಿ ಪ್ರೌಢಶಾಲೆ ಅಂಗಡಿಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಬಾಲ್ಯ ವಿವಾಹ ನಿಷೇಧ ದಿನವನ್ನ ಆಚರಿಸಲಾಯಿತು.

ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಮುಖ್ಯ ಶಿಕ್ಷಕರಾದ ರಾಮೇಶ್ವರಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಮುದಾಯ ಸಂಘಟನಾ ಕಾರ್ಯಕರ್ತರಾದ ನವೀನ್ ಆನೆದಿಬ್ಬ ಮಾತನಾಡಿ ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಗಳು ಇನ್ನೂ ಜೀವಂತವಾಗಿರುವುದು ದುರಾದೃಷ್ಟಕರ ಮಕ್ಕಳಲ್ಲಿ ಇವುಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕತೆವಾಗಿದೆ ಹಾಗೆಯೇ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಇಂತಹ  ಪ್ರಕರಣಗಳಲ್ಲಿ ಸಂಪೂರ್ಣ ಸಹಕಾರ ಮತ್ತು ಬೇಕಾದ ನೆರವು ನೀಡಲು ಸಂಸ್ಥೆ ಸಹಕರಿಸುತ್ತದೆ ಎಂದರು.

ಶಿಕ್ಷಕರ ದಿನಾಚರಣೆಯ  ಮಹತ್ವವನ್ನು ವಿವರಿಸುತ್ತ  ಮಕ್ಕಳ ಬಾಳಿನ ದಾರಿದೀಪ ಶಿಕ್ಷಕರಾಗಿರುವುದರಿಂದ ಜವಾಬ್ದಾರಿಯುತ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಮತ್ತು ಅವಿರತ ಶ್ರಮದಿಂದ ಮಕ್ಕಳ ಉಜ್ವಲ ಭವಿಷ್ಯ ಸಾಧ್ಯ ಎಂದರು

ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಆದರ್ಶ ಪುಸ್ತಕಗಳನ್ನ ನೀಡಲಾಯಿತು ಮಕ್ಕಳಿಗೆ ಬಾಲ್ಯ ವಿವಾಹದ ಬಗ್ಗೆ ಬಾಲಕಾರ್ಮಿಕ ಬಗ್ಗೆ ಪ್ರಶ್ನೋತ್ತರಗಳನ್ನು ಮಾಡಿ ವಿಜೇತರಿಗೆ ಬಹುಮಾನವನ್ನು ನೀಡಲಾಗಿತ್ತು.  ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ರಾಮೇಶ್ವರಪ್ಪ ಸಹ ಶಿಕ್ಷಕರಾದ ಅಶ್ವಿನಿ ಕೆಬಿ ಲತಾ ರಶ್ಮಿ ರಂಜಿತಾ ಆಶಾ ಶ್ವೇತ ಸಿಬ್ಬಂದಿಗಳು ಮತ್ತು ಮಕ್ಕಳು ಹಾಜರಿದ್ದರು

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;