dfadfa

 

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀನದಲ್ಲಿರುವ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿ ಖಾಲಿ ಇರುವ ಒಟ್ಟು 1,087 ಹುದ್ದೆಗಳ ಬೃಹತ್ ಸಂಖ್ಯೆಯ ಶಿಕ್ಷಕರ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

ಒಟ್ಟು 1087 ಹುದ್ದೆಗಳನ್ನು ಎರಡು ಪ್ರಮುಖ ಕೇಡರ್‌ಗಳಾಗಿ ವಿಂಗಡಿಸಲಾಗಿದೆ:

  • ಉಳಿದ ರಾಜ್ಯ ವೃಂದ (RPC): 767 ಹುದ್ದೆಗಳು
  • ಕಲ್ಯಾಣ ಕರ್ನಾಟಕ ವೃಂದ (KK): 320 ಹುದ್ದೆಗಳು

ವಿಷಯವಾರು ಖಾಲಿ ಹುದ್ದೆಗಳ ವಿವರ:

  • ಕನ್ನಡ ಭಾಷಾ ಶಿಕ್ಷಕರು: 165 (RPC: 103 | KK: 62)
  • ಇಂಗ್ಲಿಷ್ ಭಾಷಾ ಶಿಕ್ಷಕರು: 177 (RPC: 108 | KK: 69)
  • ಹಿಂದಿ ಭಾಷಾ ಶಿಕ್ಷಕರು: 86 (RPC: 55 | KK: 31)
  • ಗಣಿತ ಶಿಕ್ಷಕರು: 138 (RPC: 103 | KK: 35)
  • ವಿಜ್ಞಾನ ಶಿಕ್ಷಕರು: 138 (RPC: 106 | KK: 32)
  • ಸಮಾಜ ವಿಜ್ಞಾನ ಶಿಕ್ಷಕರು: 178 (RPC: 154 | KK: 24)
  • ಕಂಪ್ಯೂಟರ್ ವಿಜ್ಞಾನ ಶಿಕ್ಷಕರು: 57 (RPC ಮತ್ರ)
  • ದೈಹಿಕ ಶಿಕ್ಷಣ ಶಿಕ್ಷಕರು: 114 (RPC: 81 | KK: 33)
  • ಚಿತ್ರಕಲಾ ಶಿಕ್ಷಕರು (ಪದವಿ/ಡಿಪ್ಲೊಮಾ): 34 (KK ಮಾತ್ರ)

ಅರ್ಹತಾ ಮಾನದಂಡಗಳು

  • ಶೈಕ್ಷಣಿಕ ಅರ್ಹತೆ:

ಅರ್ಜಿದಾರರು ಸಂಬಂಧಪಟ್ಟ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಮತ್ತು ಬಿ.ಎಡ್ (B.Ed.) ಪದವಿ ಹೊಂದಿರಬೇಕು. ಇದರೊಂದಿಗೆ KTET (ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ) ಅಥವಾ CTET (ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ) ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.

  • ವಯೋಮಿತಿ:

ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 45 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 48 ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ 50 ವರ್ಷಗಳ ಸಡಿಲಿಕೆ

ಅರ್ಜಿ ಶುಲ್ಕದ ವಿವರಗಳು

ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ:

  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳು: ₹750
  • SC / ST / ಪ್ರವರ್ಗ-1 / ಮಾಜಿ ಸೈನಿಕರು / ತೃತೀಯಲಿಂಗಿಗಳು: ₹500
  • ವಿಕಲಚೇತನ ಅಭ್ಯರ್ಥಿಗಳು (PWD): ₹250

ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: ಜುಲೈ 15, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 13, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 14 ಆಗಸ್ಟ್ 2026

ವೇತನ:

ಆಯ್ಕೆಯಾಗುವ ಶಿಕ್ಷಕರಿಗೆ ತಿಂಗಳಿಗೆ ₹54,175 ರಿಂದ ₹99,400 ವರೆಗಿನ ಆಕರ್ಷಕ ವೇತನ ಶ್ರೇಣಿ ಇರಲಿದೆ. ಇದರೊಂದಿಗೆ ಸರ್ಕಾರದ ನಿಯಮಾವಳಿಗಳನ್ವಯ ಇತರೆ ಭತ್ಯೆಗಳೂ ಲಭ್ಯವಿರಲಿವೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ