ಗಣೇಶೋತ್ಸವ ಕೇವಲ ಹಬ್ಬವಲ್ಲ. ಧರ್ಮ, ಸಂಸ್ಕøತಿ, ಸಾಧನೆ, ಸಮಾಜ ಸಂಘಟನೆ, ರಾಷ್ಟ್ರ ಚೇತನಕ್ಕಾಗಿ ಮಾಡುವಂತಹ ಮಹೋತ್ಸವ ಎಂದು ಸನಾತನ ಧರ್ಮ ಪ್ರಚಾರಕ ಮಂಗಳೂರಿನ ರಮಾನಂದಗೌಡ ಹೇಳಿದರು.

ಅವರು ಭಾನುವಾರ ಸಂಜೆ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ಹಿಂದೂ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಗಣೇಶೋತ್ಸವ ಆಚರಿಸುವ ಬಗ್ಗೆ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರವಚನ ನೀಡಿ ಮಾತನಾಡಿದರು. ಇಂದು ದೇವರಲ್ಲಿರುವ ಭಕ್ತಿ ವಿಕೃತಿಯಾಗುತ್ತಿದೆ. ಅದು ನಡೆಯದಂತೆ ಸತ್ವಗುಣ ಅಧಿಕವಾಗಬೇಕು. ಅದಕ್ಕಾಗಿ ಗಣೇಶ ಉತ್ಸವದಲ್ಲಿ ಪೂಜೇ ಶಾಸ್ತ್ರೋಸ್ತವಾಗಿ ನಡೆಯಬೇಕು. ಸಾಮೂಹಿಕ ಆರಾಧ್ಯವಾಗಬೇಕು. ಭಗವಂತನ ಭಜನೆ ನಡೆಯಬೇಕು. ಧರ್ಮ ಜಾಗೃತಿ ಪ್ರವಚನ ಆಗಬೇಕು. ಇದರಿಂದ ಆಗಮಿಸುವ ಭಕ್ತರದಲ್ಲಿ ಧರ್ಮಾಚರಣೆ ಹುಟ್ಟುವ ಮೂಲಕ ಜೀವನದಲ್ಲಿ ಬದಲಾವಣೆ ಮೂಡುತ್ತದೆ ಎಂದು ಹೇಳಿದರು.
ಸಮಿತಿಯ ಗೌರವಾಧ್ಯಕ್ಷ ಎಂ.ಕೆ.ಪ್ರಾಣೇಶ್ ಮಾತನಾಡಿ, ವ್ಯವಸ್ಥಿತವಾಗಿ ರೂಪುಗೊಂಡಿರುವ ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಉತ್ಸವವನ್ನು ಈ ಬಾರಿ ಇನ್ನಷ್ಟು ವಿಜೃಂಬಣೆಯಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕು. ಇದೊಂದು ಆಡಂಬರಣಕ್ಕಲ್ಲ. ಹೃದಯ ಪೂರ್ವಕವಾಗಿ ಆಚರಿಸುವ ಮನೋಭಾವನೆ ಮೂಡಿಸಿಕೊಳ್ಳಬೇಕು. ಮುಖ್ಯವಾಗಿ ಧಾರ್ಮಿಕ ವಿಚಾರ ಬಂದಾಗ ರಾಜಕಾರಣವನ್ನು ಮೊದಲು ಬದಿಗಿಟ್ಟು ಒಗಟ್ಟಿನಿಂದ ಗಣೇಶ ಉತ್ಸವ ಆಚರಿಸಲು ಎಲ್ಲರೂ ಕೈಜೋಡಿಸಬೇಕೆಂದು ಸಲಹೆ ನೀಡಿದರು.
ಸಮಿತಿಯ ಉಪಾಧ್ಯಕ್ಷ ಜೆ.ಎಸ್. ರಘು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ರಂಜನ್ ಅಜಿತ್ ಕುಮಾರ್, ಕೆ. ಮಂಚೇಗೌಡ, ಬಿ.ಎನ್. ಜಯಂತ್, ದೀಪಕ್ ದೊಡ್ಡಯ್ಯ, ದಿನೇಶ್ ಬೆಟ್ಟಗೆರೆ, ಸುಧೀರ್ ಮೂಡಿಗೆರೆ ಮುಂತಾದವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಈ ಹಿಂದೆ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಭರತ್ ಕನ್ನೇಹಳ್ಳಿ ಅವರ ಅಗಲಿಕೆಗೆ ಸಂತಾಪ ಸೂಚಿಸಲಾಯಿತು. ನೂತನ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್. ಸಂತೋಷ್ ಮೇಕನಗದ್ದೆ ಇವರನ್ನು ಆಯ್ಕೆಮಾಡಲಾಯಿತು. ಮೂಡಿಗೆರೆ ಪಟ್ಟಣ ಸಮಿತಿ ಅಧ್ಯಕ್ಷರಾಗಿ ಆಶೀಕ್ ಗೌಡ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಮಿತಿಯ ಅಧ್ಯಕ್ಷ ಅನುಕುಮಾರ್ (ಪಟ್ಟದೂರು ಪುಟ್ಟಣ್ಣ) ಈ ಬಾರಿ ಗಣೇಶ ಉತ್ಸವನ್ನು ವಿಜೃಂಭಣೆಯಿಂದ ನೆರವೇರಿಸಲು ಸರ್ವರ ಸಹಕಾರ ಕೋರಿದರು.
ಸಭೆಯಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರುಗಳು, ಹೋಬಳಿ ಸಮಿತಿ ಅಧ್ಯಕ್ಷರುಗಳು ಭಾಗವಹಿಸಿದ್ದರು.


