ಮೂಡಿಗೆರೆ ತಾಲ್ಲೂಕು ಗೋಣಿಬೀಡು ರೋಟರಿ ಸಂಸ್ಥೆ ಇಂದ ಹೊಯ್ಸಳ ಪ್ರೌಢಶಾಲೆ ಯಲ್ಲಿ ವಿದ್ಯಾರ್ಥಿಗಳು ಪೋಷಕರು ಹಾಗೂ ಸಾರ್ವಜನಿಕರು ಗಳಿಗೆ ಕಸ ವಿಲೇವಾರಿ ಬಗ್ಗೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು
ಕಾರ್ಯಕ್ರಮದ ಮುಖ್ಯ ಅತಿಥಿ ಪಿಡಿಓ ಸಿಂಚನ ಅವರು ಕಸ ವಿಲೇವಾರಿ ಬಗ್ಗೆ ಮಾಹಿತಿ ನೀಡಿದರು. ಊರನ್ನು ಪರಿಸರ ವನ್ನು ಸ್ವಚ ಮಾಡುವುದು ಬರಿ ಸರ್ಕಾರ ಗಳ ಕೆಲಸವಲ್ಲ ನಾವು ನಮ್ಮ ಮನೆ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟುಕೊಳುವುದರ ಜೊತೆಗೆ ನಮ್ಮಿಂದ ಪರಿಸರ ಹಾಳಾಗದ ರೀತಿ ನೋಡಿಕೊಂಡರೆ ಸಾಕು ನಮ್ಮ ಊರು ಚೆನ್ನಾಗಿರುತ್ತೆ ನಮ್ಮಿಂದ ತಪ್ಪಾಗದ ರೀತಿ ನಾವು ನಡೆದು ಕೊಳ್ಳೋಣ ಎಂದರು
ಕಾರ್ಯಕ್ರಮ ದಲ್ಲಿ ಹೊಯ್ಸಳ ವಿದ್ಯಾ ಸಂಸ್ಥೆಯ ಅಧ್ಯಕ್ಷ NJ ಜೈರಾಮ್ ಗೌಡ ಕಾರ್ಯದರ್ಶಿ VK ಶಿವೇಗೌಡ ರೋಟರಿ ಸಂಸ್ಥೆಯ ಅಧ್ಯಕ್ಷ ನಯನ್ ಕಾರ್ಯದರ್ಶಿ ವಿನಯ್, ವಲಯ ಪದಾಧಿಕಾರಿ ಪ್ರಕಾಶ್ ಅವರು ವೇದಿಕೆಯಲ್ಲಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಮುಖ್ಯ ಶಿಕ್ಷಕಿ ವೇಣಿ ನಡೆಸಿದರು,
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ VR ಶಿವಕುಮಾರ್ ರೋಟರಿ ಸಂಸ್ಥೆಯ ಸದಸ್ಯರುಗಳು ಹೊಯ್ಸಳ ವಿದ್ಯಾ ಸಂಸ್ಥೆಯ ನಿರ್ದೇಶಕರುಗಳು ವಿದ್ಯಾರ್ಥಿಗಳು ಪೋಷಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು
ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಸುಸ್ಥಿರ ಜೀವನ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು
ಅಧ್ಯಕ್ಷ ನಯನ್ ಮಾತನಾಡುತ್ತಾ ; ರೋಟರಿ ಸಂಸ್ಥೆ ತುಂಬ ವರ್ಷ ದಿಂಧ ಗೋಣಿಬೀಡು ಹಾಗೂ ಸುತ್ತಮುತ್ತ ಇರುವ ಎಲ್ಲಾ ಊರಿನಲ್ಲೂ ಸಮಾಜ ಮುಕೀ ಸೇವೆಗಳನ್ನು ಮಾಡಿಕೊಂಡು ಬರುತಿದೆ. ಹಾಗೆ ಪರಿಸರ ಜಾಗೃತಿ ಹಾಗೂ ಕಸ ವಿಲಾವರಿ ಮತ್ತು ಮರು ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ಇ ಕಾರ್ಯಕ್ರಮ ನಡೆಸುತಿದ್ದೇವೆ ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷರಾದ ನಯನ್ ಗೋಣಿಬೀಡು ಅವರನ್ನು ಹೊಯ್ಸಳ ವಿದ್ಯಾ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.


ಗೋಣಿಬೀಡು ರೋಟರಿ ಸಂಸ್ಥೆ ಇಂದ ಗೋಣಿಬೀಡು ಹಾಗೂ ಸುತ್ತಮುತ್ತ ಇರುವ ಸರಕಾರಿ ಶಾಲೆಗಳಲ್ಲಿ 500 ಕ್ಕೂ ಹೆಚ್ಚು ಮಕ್ಕಳಿಗೆ ಕಲಿಕಾ ಸಾಮಗ್ರಿ ಗಳನ್ನೂ ವಿತರಿಸಲಾಯಿತು


