August 21, 2026
;
ananth 2

 

 

ಚಿಕ್ಕಮಗಳೂರು  ದೇಶಕಂಡ ಅತ್ಯಂತ ಪ್ರಬುದ್ಧ ರಾಜಕಾರಣಿ, ಎಐಸಿಸಿ ಅಧ್ಯಕ್ಷ, ಶೋಷಿತ ಸಮುದಾಯದ ಧೀಮಂತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಾತಿ ಕಾರಣಕ್ಕೆ ಅವಮಾನಿಸಿರುವುದು ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವ್ಯವಸ್ಥೆಯನ್ನು ಅವಮಾನಿಸಿದೆ ಎಂದು ಕಾಂಗ್ರೇಸ್ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ಅನಂತ್ ತಮ್ಮ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ; ದೇಶದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಜೀವಂತ ಇರುವುದಕ್ಕೆ ಬಿಜೆಪಿ ಮತ್ತು ಸಂಘಪರಿವಾರವೇ ಕಾರಣ. ಈ ಘಟನೆ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚದಿರುವುದು ನಾಚಿಕೆಗೇಡು ಎಂದು  ಕಿಡಿಕಾರಿದ್ದಾರೆ.

ದೇಶಕ್ಕೆ ಸ್ವಾತಂತ್ರ ಬಂದು 80 ವರ್ಷವಾಗಿದೆ, ದೇಶದಲ್ಲಿರುವ ಬಡವ, ಶ್ರೀಮಂತ, ಮೇಲ್ವರ್ಗದವರು, ಕೆಳಜಾತಿಯವರು ಎಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನ ಜಾರಿಯಾಗಿ 76ವರ್ಷವಾಗಿದೆ. ದೇಶದ ಅಭಿವೃದ್ಧಿಗೆ ಅಡ್ಡಿಯಾಗಿರುವ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಸರಕಾರ ಗಂಭೀರ ಸ್ವರೂಪದ ಕಾಯ್ದೆ, ಕಾನೂನುಗಳನ್ನೇ ಜಾರಿ ಮಾಡಿದೆ. ಆದರೂ ದೇಶದಲ್ಲಿ ಜಾತಿ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದ್ದು, ಇದಕ್ಕೆ ಕಾರಣ ಮನುವಾದವನ್ನೇ ತನ್ನ ಸಿದ್ಧಾಂತ ಮಾಡಿಕೊಂಡರುವ ಬಿಜೆಪಿ ಮತ್ತು ಸಂಘಪರಿವಾರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ತಳ ಸಮುದಾಯದವರ ಆಶಾಕಿರಣವಾಗಿದ್ದಾರೆ. ತಮಗಿರುವ ಶೈಕ್ಷಣಿಕ ಅರ್ಹತೆ, ರಾಜಕೀಯ ಪಾಂಡಿತ್ಯ, ಸ್ವಾಭಿಮಾನ, ಶೋಷಿತರ ಬಗೆಗಿನ ಕಾಳಜಿಯ ಮಾನದಂಡಗಳಿಂದಾಗಿ ಅವರು ರಾಜಕಾರಣದಲ್ಲಿ ಹಲವಾರು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಅರ್ಹತೆಯೇ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದೆಯೇ ಹೊರತು, ಜಾತಿ ಕಾರಣದಿಂದ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಿಲ್ಲ. ದೇಶದ ಪ್ರಧಾನಿಯಾಗುವ ಅರ್ಹತೆಯನ್ನೂ ಹೊಂದಿರುವ ಅವರನ್ನು ಬಿಜೆಪಿ ಮತ್ತು ಸಂಘಪರಿವಾರ ಜಾತಿ ಕಾರಣಕ್ಕೆ ಅವಮಾನಿಸಿದೆ. ಇದು ಬಿಜೆಪಿ, ಆರೆಸೆಸ್‌ನವರ ಕೋಮುವಾದಿ, ಜಾತಿವಾದಿ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ, ತಳಸಮುದಾಯದವರು ಉನ್ನತ ಹುದ್ದೆಗಳಿಗೆ ಏರುವುದನ್ನು ಆರೆಸೆಸ್ ಎಂದಿಗೂ ಒಪ್ಪುವುದಿಲ್ಲ, ಶ್ರೇಣಿಕೃತ ವರ್ಗ ವ್ಯವಸ್ಥೆ, ಜಾತಿವಾದವೇ ಆರೆಸೆಸ್ ಸಿದ್ಧಾಂತವಾಗಿರುವುದು ಜಗಜ್ಜಾಹೀರವಾಗಿದೆ. ಇಂತಹ ವಿಕೃತ ಸಿದ್ಧಾಂತವಾದಿಗಳು ದಲಿತ ಸಮುದಾಯದವರಾದ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡ ರಾಜ್ಯದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮ ಸ್ಥಳ ಅಶುದ್ಧವಾಗಿದೆ ಎಂದು ವಿಕೃತವಾದ ಮುಂದಿಟ್ಟು ಸ್ಥಳವನ್ನು ಗಂಗಾಜಲದಿAದ ಶುದ್ಧೀಕರಣ ಮಾಡಿರುವುದು ಅತ್ಯಂತ ಹೇಯ, ಅಮಾನವೀಯ ಕೃತ್ಯವಾಗಿದೆ. ಇದು ದೇಶದ ಶೋಷಿತ ಸಮುದಾಯದ ಜನರಿಗೆ ಮಾಡಿದ ಅವಮಾನವಾಗಿದ್ದು, ದೇಶದ ಜಾತ್ಯತೀತ ಸಂವಿಧಾನದ ಅಣಕವಾಗಿದೆ. ಈ ಕೃತ್ಯ ಎಸಗಿದವರ ಕಿಡಿಗೇಡಿ ಮನುವಾದಿಗಳ ವಿರುದ್ಧ ಅಲ್ಲಿನ ಸರಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಾಯಿ ಬಿಟ್ಟರೇ “ನಾವೆಲ್ಲ ಹಿಂದು, ನಾವೆಲ್ಲ ಒಂದು” ಎಂಬು ಬೊಗಳೆ ಭಾಷಣ ಬಿಗಿಯುವ ಬಿಜೆಪಿ, ಆರೆಸೆಸ್ ಮುಖಂಡರು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದು ಅವರ ಜಾತಿವಾದಿ, ಕೋಮುವಾದಿ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಈ ಘಟನೆ ಬಗ್ಗೆ ಸಣ್ಣ ಹೇಳಿಕೆಯನ್ನೂ ನೀಡದ ರಾಜ್ಯದ ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರಂತಹ ದಲಿತ ಸಮುದಾಯದ ರಾಜಕೀಯ ಮುತ್ಸದ್ಧಿ ರಾಜಕಾರಣದಲ್ಲಿ ಮಾಡಿರುವ ಸಾಧನೆಯಿಂದ ಹೊಟ್ಟೆ ಉರಿ ಅನುಭವಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. “ಹಿಂದೂ ನಾವೆಲ್ಲ ಒಂದು” ಎಂಬ ಬಿಜೆಪಿ, ಸಂಘಪರಿವಾರದ ನಾಯಕರ ಘೋಷಣೆಗಳು ಈ ಘಟನೆಯಿಂದಾಗಿ “ಭೂತದ ಭಾಯಲ್ಲಿ ಭಗವದ್ಗೀತೆ” ಎಂಬAತಾಗಿದೆ ಎಂದು ಅವರು ಹೇಳಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಈ ದೇಶದ ಸಂವಿಧಾನ ಟೀ ಮಾರುವವನನ್ನೂ ದೇಶದ ಪ್ರಧಾನಿಯಾಗುವ ಅವಕಾಶ ನೀಡಿದೆ. ಈ ಸಂವಿಧಾನದಿAದಾಗಿಯೇ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ, ದಲಿತ ಸಮುದಾಯದ ಮಹಿಳೆ ದ್ರೌಪದ ಮುರ್ಮು ದೇಶದ ರಾಷ್ಟçಪತಿ ಆಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಲು ಕಾರಣವಾಗಿರುವುದೂ ಈ ದೇಶದ ಸಂವಿಧಾನವೇ ಆಗಿದೆ. ಬಿಜೆಪಿಯವರು ಮತ್ತು ಅವರ ಮಾತೃ ಸಂಸ್ಥೆಯಾಗಿರುವ ಆರೆಸೆಸ್‌ಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಕಿಂಚಿತ್ ಗೌರವ ಇಲ್ಲ, ಈ ಕಾರಣಕ್ಕೆ ಅವರು ಪದೇ ಪದೇ ಸಂವಿಧಾನ ಬದಲಿಸುವ ಹೇಳಿಕೆಯನ್ನು ಆಗಾಗ್ಗೆ ನೀಡುತ್ತಿದ್ದಾರೆ. ಜಾತಿವಾದ, ಕೋಮುವಾದವನ್ನು ತಿರಸ್ಕರಿಸಿ ಎಲ್ಲರಿಗೂ ಸಮಾನ ಹಕ್ಕನ್ನು ಅಂಬೇಡ್ಕರ್ ಸಂವಿಧಾನ ನೀಡಿರುವ ಕಾರಣಕ್ಕೆ ಬಿಜೆಪಿ, ಆರೆಸೆಸ್‌ನವರು ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ. ದೇಶದಲ್ಲಿ ಸಂವಿಧಾನ ಮತ್ತು ಅಂಬೇಡ್ಜರ್ ವಾದಿಗಳು ಇರುವ ತನಕ ಕೋಮುವಾದಿಗಳ ಈ ಕನಸು ಎಂದಿಗೂ ಈಡೇರುವುದಿಲ್ಲ ಎಂದಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿದ ಸಂಘಪರಿವಾರದ ಕಿಡಿಗೇಡಿಗಳನ್ನು ಅಲ್ಲಿನ ಸರಕಾರ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಕೃತ್ಯದ ನೈತಿಕ ಹೊಣೆ ಹೊತ್ತು ದೇಶದ ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಖರ್ಗೆ ಅವರ ಕ್ಷಮೆಯಾಚನೆ ಮಾಡಬೇಕು. ಜಾತಿವಾದ, ಕೋಮುವಾದವನ್ನು ಯುವಜನರ ತಲೆಗೆ ತುಂಬಿ ಧರ್ಮದ ಅಮಲಿನಲ್ಲಿ ತೇಲುವಂತೆ ಮಾಡುತ್ತಿರುವ ಬಿಜೆಪಿ ಮತ್ತು ಆರೆಸೆಸ್‌ಗೆ ಬುದ್ಧಿ ಕಲಿಸಲು ಎಲ್ಲ ಸಮಾನ ಮನಸ್ಕ ಪಕ್ಷಗಳು, ಸಂಘಟನೆಗಳು ಹೋರಾಟಕ್ಕಿಳಿಯಬೇಕು ಎಂದು ಅವರು ಕರೆ ನೀಡಿದ್ದಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;