August 27, 2026
;
suddi-5

 

 

ಕೊಟ್ಟಿಗೆಹಾರ  ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಮಂಗಳವಾರ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಈ ಅಂಗವಾಗಿ ಮಕ್ಕಳಿಗಾಗಿ ವಿಶೇಷ ಮಿಲಾದ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಕ್ಕಳು ವಿವಿಧ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ಚಕ್ಮಕ್ಕಿ ಖಲಂದರಿಯಾ ಪ್ರಾಂಶುಪಾಲರಾದ

ಸಿನಾನ್ ಮುಸ್ತಾದ್ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರ ಜೀವನವು ಪ್ರೀತಿ, ಮಾನವೀಯತೆ, ಸಹನೆ ಹಾಗೂ ಸಹೋದರತ್ವದ ಸಂದೇಶವನ್ನು ಸಾರುತ್ತದೆ ಎಂದರು. ಮಕ್ಕಳು ಪ್ರವಾದಿಯವರ ಜೀವನ ಮತ್ತು ಬೋಧನೆಗಳನ್ನು ಅರಿತು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.ಬದ್ರಿಯಾ ಜುಮ್ಮಾ ಮಸೀದಿಯ

ಇಮ್ದಾನಿ ಉಸ್ತಾದ್ ಮಾತನಾಡಿ, ಈದ್ ಮಿಲಾದ್ ಆಚರಣೆಯ ಮೂಲಕ ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶವನ್ನು ಸ್ಮರಿಸುವ ಅವಕಾಶ ದೊರೆಯುತ್ತದೆ ಎಂದರು. ಮಕ್ಕಳಲ್ಲಿ ಧಾರ್ಮಿಕ ಜ್ಞಾನ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ಹೇಳಿದರು. ಪ್ರೀತಿ, ಸಹನೆ ಮತ್ತು ಪರಸ್ಪರ ಗೌರವದಿಂದ ಬದುಕುವಂತೆ ಕರೆ ನೀಡಿದರು.

ಹಾಜಿ ಟಿ.ಎ. ಖಾದರ್ ಮಾತನಾಡಿ, ಮಿಲಾದ್ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು. ಯುವ ಪೀಳಿಗೆಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂದು ಕರೆ ನೀಡಿದರು.

ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಮುನೀರ್, ಕಾರ್ಯದರ್ಶಿ ಹಸನ್, ಹಿರಿಯರಾದ ಭಾವಕ್ಕ, ಹಾಜಿ ಮೊಹಮ್ಮದ್, ಅಬ್ದುಲ್ ರಹಮಾನ್ ಸೇರಿದಂತೆ ಜಮಾತಿನ ಮುಖಂಡರು, ಸದಸ್ಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಬಣಕಲ್ ಪಟ್ಟಣದಲ್ಲಿಯೂ ಮುಸ್ಲಿಂ ಬಾಂಧವರು ಬುಧವಾರ ಈದ್ ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಿಸಿದರು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಧರ್ಮಗುರುಗಳಿಂದ ಪ್ರವಚನಗಳು ನಡೆದವು. ಬಳಿಕ ಮಕ್ಕಳು ಹಾಗೂ ಹಿರಿಯರು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶ ಸಾರುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.


ಆಲ್ದೂರಿನಲ್ಲಿ ಪ್ರವಾದಿ ಹಜರತ್ ಮುಹಮ್ಮದ್ ಅವರ 1501ನೇ ಈದ್ ಮಿಲಾದ್ ಅಂಗವಾಗಿ ಜಾಮಿಯಾ ಮಸೀದಿ ವತಿಯಿಂದ ಮೆರವಣಿಗೆಯನ್ನು ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ನಡೆಸಲಾಯಿತು.

ಜಾಮಿಯಾ ಮಸೀದಿಯ ಕಬರಸ್ತಾನದಲ್ಲಿ ಕುರಾನ್ ಪಟ್ಟಣದ ಬಳಿಕ ಆರಂಭಗೊಂಡ ಮೆರವಣಿಗೆಯು ಪ್ರವಾದಿ ಮುಹಮ್ಮದ್ ರವರ ಜೀವನ, ಶಾಂತಿ, ಸಹೋದರತ್ವ, ಮಾನವೀಯತೆ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ಸಾರುತ್ತಾ ಆಲ್ದೂರಿನ ರಾಜ ಬೀದಿಗಳಲ್ಲಿ ಸಾಗಿತು. ಬಳಿಕ ವಗರ್ ರಸ್ತೆಯಲ್ಲಿರುವ ನೂರಾನಿ ಅರಬಿ ಮದ್ರಸ ತಲುಪಿ, ಅಲ್ಲಿಂದ ಮದೀನಾ ಮಸೀದಿ ಕಬರಸ್ತಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ನಂತರ ಮೆರವಣಿಗೆಯು ಆಲ್ದೂರು ಜಾಮಿಯಾ ಶಾದಿ ಮಹಲ್‌ವರೆಗೆ ಸಾಗಿಬಂದು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಗುರುಗಳಾದ ನಸೀಮ್ ಶಾ ಅವರು ಪ್ರವಾದಿ ಮುಹಮ್ಮದ್ ಅವರ ಪವಿತ್ರ ಜೀವನ ಚರಿತ್ರೆ ಹಾಗೂ ಅವರು ಸಾರಿದ ಶಾಂತಿ, ಪ್ರೀತಿ, ಸಹೋದರತ್ವ ಮತ್ತು ಮಾನವೀಯತೆಯ ಸಂದೇಶಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮದೀನಾ ಮಸೀದಿಯ ಗುರುಗಳಾದ ಗುಲಾಮ್ ರಝಾ, ಹಂಝತುಲ್ ಕರ್ರಾರ್ ಜುಮ್ಮಾ ಮಸೀದಿಯ ಇಮ್ತಿಯಾಜ್ ಸಾಕಾಫಿ, ಅಬೂಬಕ್ಕರ್ ಸಿದ್ದೀಕ್, ಜಾಮಿಯಾ ಮಸೀದಿ ಅಧ್ಯಕ್ಷರಾದ ಇಕ್ಬಾಲ್ ಸಾಬ್,ಮದೀನಾ ಮಸೀದಿ ಅಧ್ಯಕ್ಷರಾದ ಅಫ್ಜಲ್ ಪಾಷಾ ಹಾಗೂ ಹಂಸತುಲ್ ಕರ್ರಾರ್ ಮಸೀದಿ ಅಧ್ಯಕ್ಷ ಹ ಅಚ್ಚು ಸೇರಿದಂತೆ ಧಾರ್ಮಿಕ ಮುಖಂಡರು, ಮಸೀದಿ ಆಡಳಿತ ಮಂಡಳಿ ಸದಸ್ಯರು ಸಮುದಾಯದ ಭಕ್ತಾದಿಗಳು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;