August 29, 2026
;
WhatsApp Image 2026-08-25 at 8.49.03 AM

 

 

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆಯಿಂದ ಚಿಕ್ಕಮಗಳೂರು ಜಿಲ್ಲೆ ವತಿಯಿಂದ ಇತ್ತೀಚೆಗೆ ಬಾಳೆಹೊನ್ನೂರಿನಲ್ಲಿ  2017ನೇ ಮಧ್ಯವರ್ಜನ ಶಿಬಿರ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟಿನ ಟ್ರಸ್ಟಿಯಾದ ಪ್ರಶಾಂತ್ ಚಿಪ್ರಗುತ್ತಿ ಮಾತನಾಡುತ್ತಾ ನಮ್ಮ ಶಾಲಾ ಕಾಲೇಜು ಗಳಲ್ಲಿ ಮೌಲ್ಯ ಆಧಾರಿತ ಶಿಕ್ಷಣ ಕುಸಿಯುತ್ತಿದೆ. ನಮ್ಮ ಯುವಕರಿಗೆ ಇಂಜಿನಿಯರ್ ಆಗಲು ಪಠ್ಯ ಪುಸ್ತಕ ಇದೆ ವೈದ್ಯರಾಗಲು ಪಠ್ಯ ಪುಸ್ತಕ ಇದೆ ವಕೀಲರಾಗಲು ಪಠ್ಯ ಪುಸ್ತಕ ಇದೆ ಹೀಗೆ ಎಲ್ಲದಕ್ಕೂ ಪಠ್ಯಪುಸ್ತಕಗಳನ್ನು ಮಾಡಿದ್ದಾರೆ ಆದರೆ ಒಳ್ಳೆಯ ಮನುಷ್ಯನಾಗಲು ಏನು ಮಾಡಬೇಕು ಎಂಬುದಕ್ಕೆ ನಮ್ಮಲ್ಲಿ ಪಠ್ಯ ಪುಸ್ತಕ ಇಲ್ಲದೆ ಇರುವುದು ದುರಂತದ ವಿಚಾರ ಇದು ನಮ್ಮ ಶಿಕ್ಷಣದ ವ್ಯವಸ್ಥೆಯ ಅದಪತನ. ನಮ್ಮಲ್ಲಿ ಮಧ್ಯಪಾನ ಮಾದಕ ವಸ್ತುಗಳು ಈ ಇವೆಲ್ಲವೂ ಹೆಚ್ಚು ಆಗುತ್ತಿರುವುದಕ್ಕೆ ನಮ್ಮ ಯುವ ಜನಾಂಗಕ್ಕೆ ಸರಿಯಾದ ಸಂಸ್ಕಾರ ಮೌಲ್ಯಗಳ ಶಿಕ್ಷಣ ಇಲ್ಲದಿರುವುದು ಪ್ರಮುಖ ಕಾರಣ ಎಂದು ಅಭಿಪ್ರಾಯ ಪಡುತ್ತಾ ಮುಂದಿನ ದಿನಗಳಲ್ಲಿ ಒಳ್ಳೆಯ ಸಂಸ್ಕಾರ ಇರುವ ಮೌಲ್ಯ ಆಧಾರಿತ ಶಿಕ್ಷಣದ ವ್ಯವಸ್ಥೆ ಜಾರಿಗೆ ಬರಲಿ ಎಂದು ಕರೆ ನೀಡಿದರು.

ಜನ ಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷರಾದ ನಟರಾಜ್ ಬಾದಾಮಿ ರವರು ಮಾತನಾಡಿ ಶ್ರೀ ವೀರೇಂದ್ರ ಹೆಗ್ಗಡೆಯವರ ಸಾತ್ವಿಕ ಸಮಾಜದ ಅಭಿಲಾಷೆ ನೆನಸಾಗಬೇಕು ಅದಕ್ಕೆ ನಾವೆಲ್ಲ ಅವರ ಜೊತೆ ಕೈಜೋಡಿಸಿ ಸಾಗಬೇಕು ಎಂದು ಕರೆ ನೀಡಿದರು. ಅಮ್ಮ ಫೌಂಡೇಶನ್ ನ ಸ್ಥಾಪಕರಾದ ಸುಧಾಕರ್ ಶೆಟ್ಟಿ ಅವರು ಮದ್ಯಪಾನ ಬರಿ ಮಧ್ಯ ಮಾಡುವವರನ್ನು ಮಾತ್ರವಲ್ಲ ಅವರ ಕುಟುಂಬ ಹಾಗೂ ಸಮಾಜವನ್ನು ಹಾಳು ಮಾಡುತ್ತದೆ ಎಂದು ಬೇಸರವನ್ನ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮಧುಸೂದನ್ ಭಂಡಾರಿ ಅವರು ಕಾರ್ಯಕ್ರಮ ಯಶಸ್ವಿ ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಮದ್ಯಪಾನ ಮುಕ್ತ ಸಮಾಜ ನಿರ್ಮಾಣ ಮಾಡಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಲ್ಮಕ್ಕಿ ಉಮೇಶ್, ಚಿನ್ನ ಕೇಶವ ಗೌಡ ಮುಂತಾದವರು ಇದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;